ಬಿಗ್ ಬಾಸ್ ಶೋನಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗಿಲ್ಲ, ಕೇಸ್ ಕ್ಲೋಸ್: ಮಾನವ ಹಕ್ಕುಗಳ ಆಯೋಗ ಆದೇಶ

Most read

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎನ್ನುವವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದು. ಈ ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಆಯೋಗ ಆದೇಶವೊಂದನ್ನು ನೀಡಿದೆ.

ಆದೇಶ ಪತ್ರದಲ್ಲಿ, ಶ್ರೀಮತಿ. ಎಂ. ನಾಗಮಣಿ, ಎಂಬುವವರು ಸಲ್ಲಿಸಿದ ಈ ದೂರನ್ನು ಪರಿಶೀಲಿಸಲಾಯಿತು. ವಯಾಕಾಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್. ಮುಂಬೈ, ಬಿಸಿನೆಸ್ ಹೆಡ್, ಕಲರ್ಸ್ ಕನ್ನಡ ಟಿವಿ ಚಾನೆಲ್, ಮತ್ತು ಬಿಗ್‌ಬಾಸ್ ಕಾರ್ಯಕ್ರಮದ ಆಂಕರ್ ಶ್ರೀ. ಸುದೀಪ್, ರವರುಗಳು ಬಿಗ್‌ಬಾಸ್ ಎಂಬ ಹೆಸರಿನಲ್ಲಿ ರಿಯಾಲಿಟಿ ಶೋ ನಡೆಸುತ್ತಿದ್ದಾರೆ. ಸದರಿ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಒಂದು ಮನೆಯಲ್ಲಿ ಇಟ್ಟು, ಅವರಿಗೆ ಸಾಕಷ್ಟು ಆಹಾರವನ್ನು ನೀಡದೇ ಮತ್ತು ಅವರುಗಳಿಗೆ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸದೇ, ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆಂಬುದು ದೂರರ್ಜಿಯ ಸಂಕ್ಷಿಪ್ತ ವಿಷಯವಾಗಿದೆ.

ದೂರರ್ಜಿಯನ್ನು ಅವಲೋಕಿಸಿದಾಗ, ಯಾವ ಸಾರ್ವಜನಿಕ ಅಧಿಕಾರಿ ದೂರರ್ಜಿದಾರರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ವಿಫಲರಾದರು ಎಂಬುದು ಮತ್ತು ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವವರು ಮೇಲ್ಕಂಡ ಆಯೋಜಕರ ವಿರುದ್ಧ ಸ್ವಯಂಪ್ರೇರಿತವಾಗಿ ಯಾವುದೇ ದೂರನ್ನು ನೀಡಿರುವುದಿಲ್ಲ. ಆದ್ದರಿಂದ, ಅದು ದೂರುದಾರರ / ನೊಂದವ್ಯಕ್ತಿಗಳ ಯಾವುದೇ ನಿರ್ದಿಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ಕಂಡು ಬರದ ಕಾರಣ, ಅದು ಆಯೋಗದ ನಿಯಮಾವಳಿ ನಿಯಮ 9(ಎಫ್ ಮತ್ತು ಜಿ) ಪ್ರಕಾರ ಮಾನವ ಹಕ್ಕುಗಳ ಉಲ್ಲಂಘನೆಗೆ ಪರಿಗಣಿಸಲು ಬರುವುದಿಲ್ಲ. ಆದುದರಿಂದ, ಅದೇ ರೀತಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದೆ.

More articles

Latest article