Friday, December 6, 2024

ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಐದು ದಿನ ವಿರಾಮ

Most read

ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ 5 ದಿನಗಳ ಕಾಲ (ಫೆಬ್ರವರಿ 26ರಿಂದ ಮಾರ್ಚ್​ 1ರವರೆಗೆ)  ವಿರಾಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನ್ಯಾಯ ಯಾತ್ರೆಯು ಮಾರ್ಚ್​ 2ರಿಂದ ಮತ್ತೆ ಪ್ರಾರಂಭವಾಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಹಲವು ಪ್ರಮುಖ ಸಭೆಗಳು ಇರುವ ಕಾರಣ ಐದು ದಿನಗಳಲ್ಲಿ (ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ) ಯಾತ್ರೆ ನಡೆಯುವುದಿಲ್ಲ ಎಂದು  ಜೈರಾಮ್ ರಮೇಶ್ ತಿಳಿಸಿದ್ದಾರೆ.

ಈ ಸಭೆಗೆ ರಾಹುಲ್‌ ಗಾಂಧಿ ಅವರ ಉಪಸ್ಥಿತಿ ಅಗತ್ಯ ಇದೆ ಎಂದು ಕಾಂಗ್ರೆಸ್‌ ಹೇಳಿದೆ. ಇದೇ ವೇಳೆ ರಾಹುಲ್‌ ಗಾಂಧಿ ಅವರು ಫೆಬ್ರವರಿ 27 ಮತ್ತು 28 ರಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದು, ಅಲ್ಲಿ ಎರಡು ಉಪನ್ಯಾಸಗಳನ್ನು ನೀಡಲಿದ್ದಾರೆ. ಆದ್ದರಿಂದ ಯಾತ್ರೆಯನ್ನು ಐದು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಪ್ರಸ್ತುವವಾಗಿ ಯಾತ್ರೆಯು ಉತ್ತರ ಪ್ರದೇಶದಲ್ಲಿ ಇದೆ. ಇಂದು ಯಾತ್ರೆಯ 39 ದಿನ ಕಾನ್ಪುರವನ್ನು ತಲುಪಲಿದೆ.

More articles

Latest article