ವಾರಕ್ಕೆ 90 ಗಂಟೆಕೆಲಸ; ಭಾರತ್ ಪೇ ಕಂಪನಿ ಸಿಇಒ ವಿರೋಧ

Most read

ಬೆಂಗಳೂರು: ಉದ್ಯೋಗಿಗಳ ಕೆಲಸದ ಅವಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಲ್‌ ಆ್ಯಂಡ್‌ ಟಿ ಕಂಪನಿ ಅಧ್ಯಕ್ಷ ಎಸ್‌.ಎನ್‌. ಸುಬ್ರಹ್ಮಣ್ಯನ್‌ ಹೇಳಿಕೆಯನ್ನು ಭಾರತ್ ಪೇ ಕಂಪನಿ ಸಿಇಒ ನಳಿನ್ ನೇಗಿ ಅವರು ವಿರೋಧಿಸಿದ್ದಾರೆ. ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಪತ್ನಿಯ ಮುಖ ನೋಡಿಕೊಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ. ಶ್ರಮವಹಿಸಿ, ದುಡಿಯಲು ಭಾನುವಾರದ ರಜೆಯನ್ನೂ ತ್ಯಜಿಸಿ ಎಂದು ಸುಬ್ರಹ್ಮಣ್ಯನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಳಿನ್ ನೇಗಿ ಅವರು, ಎಷ್ಟು ಗಂಟೆ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಅಲ್ಲ. ಎಷ್ಟು ಗುಣಮಟ್ಟದ ಕೆಲಸ ಮಾಡಿದ್ದೇವೆ ಎನ್ನುವುದೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಉದ್ಯೋಗಿಗಳಿಗೆ ನಮ್ಮ ಕಂಪನಿಯು ಸುಬ್ರಹ್ಮಣ್ಯನ್‌ ಅವರ ಹೇಳಿಕೆಯನ್ನು ಸಮರ್ಥಿಸಿ ಕೆಲಸ ಮಾಡಲು ಹೇಳುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ವಾರದಲ್ಲಿ 90 ಗಂಟೆ ಕೆಲಸ ಮಾಡುವುದು ಸಾಧ್ಯವೇ ಇಲ್ಲ. ದೇಶದ ಕಾರ್ಪೋರೇಟ್ ವಲಯ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಯುವಕ ಯುವತಿಯರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಸಿಗುತ್ತಿವೆ. ಅವರಿಗೆ ಉದ್ಯೋಗ ಒಂದೇ ಎಲ್ಲವೂ ಅಲ್ಲ. ಅವರ ಅಭಿರುಚಿಗಳೂ ಹೆಚ್ಚಿವೆ. ಅವರ ಭಾವನೆಗಳನ್ನು ಗೌರವಿಸುತ್ತಾ ನಾವು ಅವರಿಂದ ಗುಣಮಟ್ಟದ ಕೆಲಸ ಮಾಡಿಸಬೇಕಿದೆ ಎಂದು ಹೇಳಿದ್ದಾರೆ.

ಯು ಜನಾಂಗ ಮಾನಸಿಕ, ದೈಹಿಕ ಮತ್ತು ಆರೋಗ್ಯವಾಗಿ ಇರುವವರಿಂದ ಸಹಜವಾಗಿಯೇ ಕೆಲಸದ ಗುಣಮಟ್ಟ ಹೆಚ್ಚಿರುತ್ತದೆ. ಅವರು ಖುಷಿಯಿಂದಲೇ ಕೆಲಸ ಮಾಡುತ್ತಾರೆ. ಅದರಿಂದ ಅವರಿಗೂ ಲಾಭ, ಕಂಪನಿಗೂ ಲಾಭ. ಒತ್ತಾಯಪೂರ್ವಕವಾಗಿ ಕೆಲಸದ ಅವಧಿ ಹೆಚ್ಚು ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ನಳಿನ್ ಹೇಳಿದ್ದಾರೆ.  ಭಾರತ್ ಪೇ ಭಾರತದ ಒಂದು ಪ್ರಮುಖ ಫಿನ್ ಟೆಕ್ ಕಂಪನಿಯಾಗಿದೆ.. ಈ ಹಿಂದೆ ಇನ್‌ ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಇವರ ಹೇಳಿಕೆಯೂ ಸಾಕಷ್ಟು ಪರ ವಿರೋಧಕ್ಕೆ ಎಡೆ ಮಾಡಿಕೊಟ್ಟಿತ್ತು.

More articles

Latest article