ಭಾರತ್ ಜೋಡೋ ನ್ಯಾಯ ಯಾತ್ರೆ | 63 ನೆಯ ದಿನ

Most read

“ದೇಶದಿಂದ ಭ್ರಷ್ಟಾಚಾರ ತೊಲಗಿಸಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆಮೇಲೆ ಅವರೇ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಮಾಡುತ್ತಾರೆ. ಎಲೆಕ್ಟೋರಲ್ ಬಾಂಡ್ ಮೂಲಕ ಮೋದಿಯವರ ಪಕ್ಷವು ಕೋಟಿಗಟ್ಟಲೆ ಹಣ ದೊಡ್ಡ ದೊಡ್ಡ ಕಂಪೆನಿಗಳಿಂದ ಪಡೆದುದು ಈಗ ಬಯಲಿಗೆ ಬಂದಿದೆ” -ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರದಲ್ಲಿ ಮುಂದುವರಿದಿದೆ.

ಇಂದಿನ (16.03.2024) ಕಾರ್ಯಕ್ರಮಗಳು ಹೀಗಿದ್ದವು – ಬೆಳಿಗ್ಗೆ 9.30. ಅಂಜುರ್ ಪೆಟ್ರೋಲಿಯಂ ಬಳಿಯಿಂದ ಯಾತ್ರೆ ಮತ್ತೆ ಆರಂಭ. ದಪೋಡಾ, ಮಂಕೋಲಿ, ಭಿವಂಡಿ. ಖಾಡಿ ಪುಲ್ ಬಳಿಕ ವಯಾ ಮುಂಬ್ರಾ ದಿಂದ ನಾಶಿಕ್ ಹೈವೇ. ಸ್ವಾಗತ ಕಾರ್ಯಕ್ರಮ ರೇತಿ ಬಂದರ್ ಸರ್ಕಲ್, ಆತ್ಮಾರಾಮ ಪಾಟೀಲ ಚೌಕ, ಪಾರಸಿಕ ನಗರ, ಕಲವಾ ಠಾಣೆ. ಮುಂಬ್ರಾ ಬೈಪಾಸ್ – ವಾರ್ಡ್ ಜಂಕ್ಷನ್ – ಮುಂಬ್ರಾ ಫ್ಲೈ ಓವರ್ –ರೇತಿ ಬಂದರ್ ಸರ್ಕಲ್ – ಆತ್ಮಾರಾಮ ಪಾಟಿಲ್ ಪಾರಸಿಕ ಮಾರ್ಗದಿಂದ. ಸ್ವಾಗತ ಕಾರ್ಯಕ್ರಮ ಕಲವಾ ನಾಕಾ. 11.30 ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಸಭೆ ನಂವಲಿ ನಾಕಾ.

ಮಧ‍್ಯಾಹ್ನ 2.30 ಯಾತ್ರೆ ಪುನಹ ಆರಂಭ. ಮುಲುಂಡ್ ಬಾಂಡುಪ್ ಚೌಕ, ಕುಕರೇಜಾ ಸಂತ ರೋಹಿದಾಸ್ ರೋಡ್, ಸಯಾನ್ – 90 ‍ಫೀಟ್ ರೋಡ್, ದಾರಾವಿ ಮಾರ್ಗದಿಂದ. ಸಂಜೆ 4.30 ಸಾರ್ವಜನಿಕ ಸಭೆ ಶಕ್ತಿ ವಿನಯ ಗರ್ ಮಂದಿರ್ ಧಾರಾವಿ, ಮಾಟುಂಗ ಲೇಬರ್ ಕ್ಯಾಂಪ್ ಕಟಾರಿಯಾ ರೋಡ್ – ರೇಲ್ವೇ ವರ್ಕ್ ಶಾಪ್ – ಮಾಟುಂಗ ರೋಡ್ ಫ್ಲೈ ಓವರ್ ಮಾರ್ಗದಿಂದ. 5.30 ಯಾತ್ರೆಯ ಸಮಾಪನ. ಚೈತ್ಯಭೂಮಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ, ದಾದರ್ ಪಶ್ಚಿಮ. ರಾತ್ರಿ ವಾಸ್ತವ್ಯ ಬಿ ಕೆ ಸಿ ಗ್ರೌಂಡ್.

ಯಾತ್ರೆಯ ಸಮಯದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ದೇಶದಿಂದ ಭ್ರಷ್ಟಾಚಾರ ತೊಲಗಿಸಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆಮೇಲೆ ಅವರೇ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಮಾಡುತ್ತಾರೆ. ಎಲೆಕ್ಟೋರಲ್ ಬಾಂಡ್ ಮೂಲಕ ಮೋದಿಯವರ ಪಕ್ಷವು ಕೋಟಿಗಟ್ಟಲೆ ಹಣ ದೊಡ್ಡ ದೊಡ್ಡ ಕಂಪೆನಿಗಳಿಂದ ಪಡೆದುದು ಈಗ ಬಯಲಿಗೆ ಬಂದಿದೆ. ಇದರಲ್ಲಿ ನಾಲ್ಕು ವಿಧ ಇದೆ.

1. ಮೋದಿ ಸರಕಾರವು ಕಂಪೆನಿಗಳ ಹಿಂದೆ ಇಡಿ, ಸಿಬಿಐ, ಐಟಿ ಬಿಡುತ್ತದೆ. ಅದರ ಎರಡು ಮೂರು ತಿಂಗಳ ಬಳಿಕ ಆ ಕಂಪೆನಿ ಬಿಜೆಪಿಗೆ ಹಣ ಕೊಡುತ್ತದೆ. ಅಲ್ಲಿಗೆ ತನಿಖಾ ಏಜನ್ಸಿಯ ಕೆಲಸ ಮುಗಿಯುತ್ತದೆ.

2. ದೊಡ್ಡ ದೊಡ್ಡ ಕಂಟ್ರಾಕ್ಟ್ ಯಾವ ಕಂಪೆನಿಗಳಿಗೆ ಸಿಗುತ್ತದೆ ಎಂದರೆ ಯಾವ ಕಂಪೆನಿ ಬಿಜೆಪಿ ಗೆ ಹಣ ಕೊಡುತ್ತದೋ ಆ ಕಂಪೆನಿಗೆ. 3. ಮೊದಲು ಕಂಪೆನಿಗಳಿಗೆ ಕಾಂಟ್ರಾಕ್ಟ್ ಕೊಡಲಾಗುತ್ತದೆ. ಬಳಿಕ ಅದರ ಲಾಭ ನೇರ ಮೋದಿಯವರ ಪಕ್ಷಕ್ಕೆ ಹೋಗುತ್ತದೆ.

4. ಶೆಲ್ ಕಂಪೆನಿಗಳ ಮೂಲಕ ಬಿಜೆಪಿಗೆ ಬಿಜೆಪಿಯದೇ ಹಣ ಬರುತ್ತದೆ. ಭಾರತದಲ್ಲಿ ಕೊರೋನಾದಿಂದ 50 ಲಕ್ಷ ಮಂದಿ ಸತ್ತರು. ಒಂದೆಡೆ ಜನ ಸಾಯುತ್ತಿದ್ದರೆ, ಇನ್ನೊಂದೆಡೆ ವ್ಯಾಕ್ಸಿನ್ ಕಂಪೆನಿ ಸೀರಂ ಇನ್ ಸ್ಟಿಟ್ಯೂಟ್ ನರೇಂದ್ರ ಮೋದಿಯವರಿಗೆ ಹಣ ಕೊಡುತ್ತದೆ. ಭಾರತದಲ್ಲಿ ಹಫ್ತಾ ವಸೂಲಿ ನಡೆಯುತ್ತಿದೆ. ಯಾರಾದರೂ ದನಿ ಎತ್ತಿದರೆ ಅವರನ್ನು ಇಡಿ, ಸಿಬಿಐ, ಐಟಿ ಮೂಲಕ ಹೆದರಿಸಲಾಗುತ್ತದೆ” ಎಂದರು.

ಯಾತ್ರೆಯಲ್ಲಿ ರಾಹುಲ್ ಗಾಂಧಿಯವರನ್ನು ಸೇರಿಕೊಂಡ ಪ್ರಿಯಾಂಕಾ ಗಾಂಧಿಯವರು “ಇಂದು ಭಾರತ ಜೊಡೋ ನ್ಯಾಯ ಯಾತ್ರೆ ಮುಗಿಯುತ್ತಿದೆ. ನಾವು ಇಬ್ಬರೂ ಇಲ್ಲಿ ಬಂದು ಸಂತುಷ್ಟರಾಗಿದ್ದೇವೆ. ರಾಹುಲ್ ಗಾಂಧಿಯವರು ನಿಮಗೆ ದೇಶದ ಸತ್ಯ ತಿಳಿಯಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ನಡೆಸಿದರು. ಈ ಇಡೀ ಯಾತ್ರೆಯ ಉದ್ದೇಶ ಜನರನ್ನು ಜಾಗರೂಕಗೊಳಿಸುವುದು. ನೀವು ಇಂದು ದೇಶದಲ್ಲಿ ಯಾವ ಜಾಹೀರಾತು ನೋಡುತ್ತೀರೋ ಅದರಲ್ಲಿ ಸತ್ಯ ಕಾಣುವುದಿಲ್ಲ. ಅಗತ್ಯ ವಸ್ತುಗಳ ಧಾರಣೆ ಇಳಿದಿದೆಯೇ? ನಿರುದ್ಯೋಗ ಕಡಿಮೆಯಾಗಿದೆಯೇ? ಬಿಜೆಪಿ ಸರಕಾರ ಒಂದೆಡೆಯಲ್ಲಿ ದೊಡ್ಡ ದೊಡ್ಡ ಈವೆಂಟ್ ನಡೆಯುತ್ತಿರುವುದನ್ನು ತೋರಿಸುತ್ತಿದೆ. ಇನ್ನೊಂದೆಡೆ ನೋಟು ನಿಷೇಧ, ಜಿ ಎಸ್ ಟಿ ಮೊದಲಾದ ನಿರ್ಣಯ ತೆಗೆದುಕೊಳ್ಳುತ್ತದೆ. ಇದರಿಂದ ಜನರ ಜಂಘಾಬಲವೇ ಉಡುಗುತ್ತಿದೆ. ಇಂದು ದೇಶದ ಸಂಪತ್ತು ಕೆಲವೇ ಕೆಲವು ಉದ್ಯಮಿಗಳ ಪಾಲಾಗುತ್ತಿದೆ. ಆದ್ದರಿಂದ ಸರಕಾರ ನಿಮಗಾಗಿ ಏನು ಮಾಡುತ್ತಿದೆ ಎಂದು ನೀವೇ ಯೋಚಿಸಬೇಕಾಗಿದೆ” ಎಂದು ಹೇಳಿದರು.

ಧಾರಾವಿಯಲ್ಲಿ ಮಾತನಾಡಿದ ಅವರು, “ಧಾರಾವಿಯು ಭಾರತದ ಕೌಶಲ ರಾಜಧಾನಿ. ಭಾರತದಲ್ಲಿ ಸಂಘರ್ಷ ನಡೆಯುತ್ತಿರುವುದು ಧಾರಾವಿ ಮತ್ತು ಅದಾನಿಯ ನಡುವೆ. ಇಂದು ದೇಶದಲ್ಲಿ ಬಡವರು, ದುರ್ಬಲರು, ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಾವು ಈ ಯಾತ್ರೆ ನಡೆಸುತ್ತಿದ್ದೇವೆ. ಧಾರಾವಿ ನಿಮ್ಮದು, ಅದು ನಿಮ್ಮದೇ ಆಗಿ ಉಳಿಯಬೇಕು. ಧಾರಾವಿಯ ಕೌಶಲಕ್ಕೆ ಸಹಾಯ ಸಿಗಬೇಕು, ಧಾರಾವಿಯ ಜನರಿಗೆ ಬ್ಯಾಂಕ್ ಬಾಗಿಲು ತೆರೆಯಬೇಕು, ಯಾಕೆಂದರೆ ನಿಮ್ಮಂತಹ ಜನರೇ ದೇಶವನ್ನು ಕಟ್ಟುವವರು.

ಚೈತ್ಯಭೂಮಿಯ, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಸ್ಮಾರಕದಲ್ಲಿ ಜನ ನಾಯಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ನ ವರಿಷ್ಠ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಂವಿಧಾನ ಪೀಠಿಕೆಯನ್ನು ಓದಿದರು.

ಇಂದು ಯಾತ್ರೆಯ ಕೊನೆಯ ದಿನವಾಗಿತ್ತು. ಮಣಿಪುರದಿಂದ ಮುಂಬಯಿವರೆಗಿನ 6700 ಕಿಲೋಮೀಟರ್ ಗಳ 66 ದಿನಗಳ ಯಾತ್ರೆ ಇಂದು ಕೊನೆಗೊಂಡಿತು. ಇಂದೇ ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣಾ ದಿನಾಂಕಗಳನ್ನೂ ಘೋಷಿಸಿದೆ. ಹಾಗಾಗಿ ಇಂದಿನಿಂದ ಅಧಿಕೃತವಾಗಿ ಭಾರತದಲ್ಲಿ ಲೋಕಸಭಾ ಚುನಾವಣೆಯ ದಿನಗಳು.

ಶ್ರೀನಿವಾಸ ಕಾರ್ಕಳ

More articles

Latest article