ಭಾರತ್ ಜೋಡೋ ನ್ಯಾಯ ಯಾತ್ರೆ | 59ನೆಯ ದಿನ

Most read

“ಆದಿವಾಸಿಗಳು ಭಾರತದ ಮೊದಲ ಮಾಲೀಕರು, ದೇಶದಲ್ಲಿ ಇರುವ ಜಲ, ಜಮೀನು ಮತ್ತು ಧನಸಂಪತ್ತಿನ ನಿಜ ಮಾಲೀಕರು ಎಂದರೆ ಆದಿವಾಸಿಗಳು, ಅದಿವಾಸಿ ಶಬ್ದದೊಂದಿಗೆ ಜಲ, ಜಂಗಲ್ ಜಮೀನಿನ ಅಧಿಕಾರ ಜೋಡಿಕೊಂಡಿದೆ, ವನವಾಸಿ ಎಂಬುದರಲ್ಲಿ ಆ ಅಧಿಕಾರ ಇಲ್ಲ, ಆದ್ದರಿಂದ ನಿಮ್ಮನ್ನು ಬಿಜೆಪಿ ವನವಾಸಿ ಎಂದು ಕರೆಯುತ್ತಿದೆ” – ರಾಹುಲ್‌ ಗಾಂಧಿ

10.03.2024 ರಂದು ಗುಜರಾತ್ ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಕೊನೆಯ ದಿನವಾಗಿತ್ತು. 11.03.2024 ರ ರಜಾದಿನದ ಬಳಿಕ ಇಂದು, ಅಂದರೆ 12. 03. 2024 ರಿಂದ ಯಾತ್ರೆಯು ಗುಜರಾತ್ ನಿಂದ ಮಹಾರಾಷ್ಟ್ರ ಪ್ರವೇಶಿಸಿ ನಂದುರ್ಬಾರ್ ನಿಂದ ಮುಂದುವರಿಯಿತು. ಗಡಿಯಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿ ಸಿಂಗ್ ಗೋಯಲ್ ಅವರು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆಯವರಿಗೆ ಧ್ವಜ ಹಸ್ತಾಂತರ ಮಾಡಿದರು. ನಂದುರ್ಬಾರ್ ನಲ್ಲಿ ರಾಹುಲ್ ಗಾಂಧಿಯವರು ಆದಿವಾಸಿ ಸಮಾಜದೊಂದಿಗೆ ಹೋಳಿ ಸಮ್ಮೇಳನದಲ್ಲಿ ಭಾಗಿಯಾದರು.

ಇಂದಿನ ಕಾರ್ಯಕ್ರಮಗಳು ಹೀಗಿದ್ದವು. ಮಧ‍್ಯಾಹ್ನ 2.00 ಗಂಟೆಗೆ ಧ್ವಜ ಹಸ್ತಾಂತರ ಕಾರ್ಯಕ್ರಮ. ಆದಿವಾಸಿ ನ್ಯಾಯ ಸಮ್ಮೇಳನ, ಮಹಾರಾಷ್ಟ್ರದ ನಂದುರ್ಬಾರ್ ಮಿರಾಜ್ ಸಿನೆಮಾಸ್ ಮೈದಾನದಲ್ಲಿ. ರಾತ್ರಿ ವಾಸ್ತವ್ಯ ಧುಲೆಯ ದೊಂಡಾಯಚಾ ಭಾವಸಾರ ಮೈದಾನದಲ್ಲಿ.

ನಂದುರ್ಬಾರ್ ಆದಿವಾಸಿ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು,  “ಆದಿವಾಸಿಗಳು ಭಾರತದ ಮೊದಲ ಮಾಲೀಕರು, ದೇಶದಲ್ಲಿ ಇರುವ ಜಲ, ಜಮೀನು ಮತ್ತು ಧನಸಂಪತ್ತಿನ ನಿಜ ಮಾಲೀಕರು ಎಂದರೆ ಆದಿವಾಸಿಗಳು, ಅದಿವಾಸಿ ಶಬ್ದದೊಂದಿಗೆ ಜಲ, ಜಂಗಲ್ ಜಮೀನಿನ ಅಧಿಕಾರ ಜೋಡಿಕೊಂಡಿದೆ, ವನವಾಸಿ ಎಂಬುದರಲ್ಲಿ ಆ ಅಧಿಕಾರ ಇಲ್ಲ, ಆದ್ದರಿಂದ ನಿಮ್ಮನ್ನು ಬಿಜೆಪಿ ವನವಾಸಿ ಎಂದು ಕರೆಯುತ್ತಿದೆ” ಎಂದರು.  ಇದೇ ಸಂದರ್ಭದಲ್ಲಿ ಅವರು ಈ ಮುಂದಿನಂತೆ ಆದಿವಾಸಿ ಸಂಕಲ್ಪವನ್ನು ಘೋಷಿಸಿದರು –

ಸುಶಾಸನ: ಅರಣ್ಯ ಹಕ್ಕು ಅಧಿನಿಯಮ (FRA)ದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಒಂದು ರಾಷ್ಟ್ರೀಯ ಮಿಶನ್ ಸ್ಥಾಪಿಸಲಾಗುವುದು. ಒಂದು ವಿಶೇಷ ಬಜೆಟ್ ಇರಿಸಲಾಗುವುದು. ವಿಶೇಷ ಕಾರ್ಯಯೋಜನೆ ತಯಾರಿಸಲಾಗುವುದು. ನಾವು ಒಂದು ವರ್ಷದೊಳಗೆ ಬಾಕಿ ಉಳಿದಿರುವ ಎಲ್ಲಾ FRA ಕ್ಲೇಮುಗಳನ್ನು ವಿಲೇವಾರಿ ಮಾಡುತ್ತೇವೆ. ಆರು ತಿಂಗಳ ಒಳಗಾಗಿ ಎಲ್ಲಾ ಅಸ್ವೀಕೃತ ಕ್ಲೇಮುಗಳನ್ನು ಸಮೀಕ್ಷೆ ಮಾಡುವುದಕ್ಕಾಗಿ ಒಂದು ಪ್ರಕ್ರಿಯೆ ಸ್ಥಾಪಿಸುತ್ತೇವೆ.

ಸುಧಾರಣೆ: ಮೋದಿ ಸರಕಾರದ ಮೂಲಕ ಅರಣ್ಯ ಸಂರಕ್ಷಣೆ ಮತ್ತು ಭೂಮಿ ಅಧಿಗ್ರಹಣ ಅಧಿನಿಯಮಗಳಲ್ಲಿ ಮಾಡಿರುವ ಎಲ್ಲ ತಿದ್ದುಪಡಿಗಳನ್ನು ಕಾಂಗ್ರೆಸ್ ವಾಪಸ್ ತೆಗೆದುಕೊಳ್ಳುವುದು.

ಸುರಕ್ಷಣೆ: ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವ ಬಸ್ತಿಗಳಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚು ಇದೆಯೋ ಆ ಬಸ್ತಿಗಳನ್ನು ಪರಿಶಿಷ್ಟ ಪ್ರದೇಶ ಎಂದು ಘೋಷಿಸಲು ಬದ್ಧವಾಗಿದೆ.

ಸ್ವಶಾಸನ: ಕಾಂಗ್ರೆಸ್ PESA  ಪ್ರಕಾರ ರಾಜ್ಯಗಳಲ್ಲಿ ಕಾನೂನು ರೂಪಿಸಲು ಬದ್ಧವಾಗಿದೆ. ಆಗ ‘ಗ್ರಾಮ ಸರಕಾರ’ ಮತ್ತು ‘ಸ್ವಾಯತ್ತ ಜಿಲ್ಲಾ ಸರಕಾರ’ ಸ್ಥಾಪನೆ ಸಾಧ‍್ಯವಾಗುತ್ತದೆ.

ಸ್ವಾಭಿಮಾನ: ಕಾಂಗ್ರೆಸ್ ಪಕ್ಷವು ಕನಿಷ್ಠ ಬೆಂಬಲ ಬೆಲೆ (MSP)ಯ ಅಧಿಕಾರದ ಕಾನೂನು ತರಲಿದೆ. ಇದರಲ್ಲಿ ಲಘು ಅರಣ್ಯ ಉತ್ಪತ್ತಿ (M‍FP) ಯನ್ನೂ ಸೇರ್ಪಡೆಗೊಳಿಸಲಾಗುವುದು ಎಂದು ಘೋಷಿಸಿದರು.

ನಾಳೆ ಮಹಾರಾಷ್ಟ್ರದಲ್ಲಿ ಯಾತ್ರೆ ಮುಂದುವರಿಯಲಿದೆ.

ಶ್ರೀನಿವಾಸ ಕಾರ್ಕಳ

ಯಾತ್ರೆ 57 ಭಾರತ್ ಜೋಡೋ ನ್ಯಾಯ ಯಾತ್ರೆ |57ನೆಯ ದಿನ

More articles

Latest article