ಭಾರತ್ ಜೋಡೋ ನ್ಯಾಯ ಯಾತ್ರೆ | 56ನೆಯ ದಿನ

Most read

ದೇಶದ ಅತಿದೊಡ್ಡ ಕಂಪೆನಿಗಳು ಮೀಡಿಯಾ ಚಾನಲ್ ಗಳು ಖಾಸಗಿ ಶಾಲೆ ಕಾಲೇಜು ಆಡಳಿತ ಮಂಡಳಿ ಇವುಗಳಲ್ಲಿ ದಲಿತರು ಹಿಂದುಳಿದವರು ಆದಿವಾಸಿಗಳು ಇಲ್ಲ. ಈ ಕಂಪೆನಿಗಳ ಆಡಳಿತಗಳಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಇಲ್ಲವಾದರೆ ದೇಶದಲ್ಲಿ ನಿಮಗೆ ಎಲ್ಲಿಯ ಪಾಲಿದೆ? – ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುಜರಾತ್ ರಾಜ್ಯದಲ್ಲಿ ಮುಂದುವರಿದಿದೆ. ಇಂದು ಯಾತ್ರೆಯು ಅಲೀಪುರದಿಂದ ಆರಂಭವಾಯಿತು.

ಯಾತ್ರೆಯ ಇಂದಿನ (09.03.2024) ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 8.30 ಕ್ಕೆ ಗುಜರಾತ್ ಚೋಟೇ ಉದಯಪುರದ ಅಲೀಪುರ ಬೊಂಡೆಲಿ ಚೌಕದಿಂದ ಯಾತ್ರೆ ಆರಂಭ. ನಸವಾಡಿಯಲ್ಲಿ ಸ್ವಾಗತ ಕಾರ್ಯಕ್ರಮ, ನರ್ಮದಾ ಕೆವಡಿಯಾ ಅಕ್ತೇಶ್ವರ ಚೊಕಡಿಯಲ್ಲಿ ಸ್ವಾಗತ ಕಾರ್ಯಕ್ರಮ. ಪಾದಯಾತ್ರೆ- ಸಂತೋಷ ಚೋಕಡಿ, ರಾಜಪಿಪಲಾ ವಯಾ ಅಂಬೇಡ್ಕರ್ ಚೌಕ ರಾಜಪಿಪಲಾ. ಸಾರ್ವಜನಿಕ ಭಾಷಣ.  

2.30 ಕ್ಕೆ ಯಾತ್ರೆ ಮತ್ತೆ ಆರಂಭ. ಭರೂಚ್ ನ ನೇತ್ರಾಂಗದಿಂದ. ಬಳಿಕ ಸಾರ್ವಜನಿಕ ಭಾಷಣ.  ಸೂರತ್ ನ ಮಂಗರೋಲಾದ ಝಾನಕೇವಾ ದಲ್ಲಿ ಸ್ವಾಗತ ಕಾರ್ಯಕ್ರಮ. ಸಂಜೆಯ ವಿರಾಮ ಮಾಲ್ಡಾ ಫರಾ ಚೌರಾಹದಲ್ಲಿ. ರಾತ್ರಿ ವಾಸ್ತವ್ಯ ಸೂರತ್ ನ ಸಥವಾವ್ ನಲ್ಲಿ.

ಇಂದು ರಾಹುಲ್ ಗಾಂಧಿಯವರು ಮಾ ಹರಸಿದ್ದಿ ದೇವರನ್ನು ಪೂಜಿಸಿ ದೇಶದ ಸುಖ ಶಾಂತಿ ಸಮೃದ್ಧಿಗೆ ಪ್ರಾರ್ಥನೆ ಮಾಡಿದರು.ದೇಶದ ಅತಿದೊಡ್ಡ ಕಂಪೆನಿಗಳು ಮೀಡಿಯಾ ಚಾನಲ್ ಗಳು ಖಾಸಗಿ ಶಾಲೆ ಕಾಲೇಜು ಆಡಳಿತ ಮಂಡಳಿ ಇವುಗಳಲ್ಲಿ ದಲಿತರು ಹಿಂದುಳಿದವರು ಆದಿವಾಸಿಗಳು ಇಲ್ಲ. ಈ ಕಂಪೆನಿಗಳ ಆಡಳಿತಗಳಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಇಲ್ಲವಾದರೆ ದೇಶದಲ್ಲಿ ನಿಮಗೆ ಎಲ್ಲಿಯ ಪಾಲಿದೆ?

ಕಾಂಗ್ರೆಸ್ ಪಕ್ಷವು ಭೂಮಿ ಅಧಿಗ್ರಹಣ ಕಾನೂನು ತಂದಿತು. ಭೂಮಿಯ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಪರಿಹಾರ ಕೊಡಬೇಕು ಅಂದಿತು. ಆದರೆ ಬಿಜೆಪಿ ಸರಕಾರ ವಿಕಾಸದ ಭರಾಟೆಯಲ್ಲಿ ನಿಮ್ಮ ಜಲ, ಜಂಗಲ್, ಜಮೀನನ್ನು ಉದ್ಯಮಿಗಳಿಗೆ ಹಂಚಿತು. ಅಂದರೆ ದೇಶದಲ್ಲಿ ವಿಕಾಸ ಆಗುತ್ತಿರುವುದು ಉದ್ಯಮಿಗಳದ್ದು ಮಾತ್ರ. ನೀವು ಆದಿವಾಸಿಗಳು. ಜಲ, ಜಂಗಲ್, ಜಮೀನಿನ ಮೇಲೆ ಅಧಿಕಾರ ಇರುವುದು ನಿಮಗೆ. ಕಾಂಗ್ರೆಸ್ ಪಕ್ಷವು ಈ ನಿಮ್ಮ ಹಕ್ಕನ್ನು ನಿಮಗೆ ಕೊಟ್ಟೇ ಕೊಡುತ್ತದೆ. ದೇಶದಲ್ಲಿ ಬೆಳೆ ವಿಮೆಯ ಹಣ ಕೆಲವೇ ಕೆಲವು ಕಂಪೆನಿಗಳಿಗೆ ಹೋಗುತ್ತಿದೆ. ಜಾತಿ ಗಣತಿ ಮಾಡಿದರೆ ಭಾರತದ ಎಷ್ಟು ಹಣ ಯಾರಿಗೆ ಹೋಗುತ್ತದೆ ಎನ್ನುವುದು ತಿಳಿಯುತ್ತದೆ. ಜಾತಿಗಣತಿಯು ಭಾರತದ ಪಾಲಿಗೆ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಕಾಂಗ್ರೆಸ್ ಪಕ್ಷವು ಭಾರತದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಯನ್ನು ನೀಡಲಿದೆ” ಎಂದರು.

ಶ್ರೀನಿವಾಸ ಕಾರ್ಕಳ,ಮಂಗಳೂರು

ಯಾತ್ರೆ 55 – ಭಾರತ್‌ ಜೋಡೋ ನ್ಯಾಯ ಯಾತ್ರೆ | 55ನೆಯ ದಿನ

More articles

Latest article