“ಇಂದು ಭಾರತದಲ್ಲಿ ಉದ್ಯೋಗ ಸಿಗುತ್ತಿಲ್ಲ. ಮೋದಿ ಸರಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ ದೇಶವನ್ನು ಸಂಪೂರ್ಣ ಒಪ್ಪಿಸಿದೆ, ಸಣ್ಣ ವ್ಯಾಪಾರಿಗಳನ್ನು ನಾಶ ಮಾಡಿದೆ, ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಆದರೆ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಿಗಳ ಒಂದು ನಯಾಪೈಸೆ ಸಾಲ ಮನ್ನಾ ಮಾಡಿಲ್ಲ” – ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುಜರಾತ್ ರಾಜ್ಯದಲ್ಲಿ ಮುಂದುವರಿದಿದೆ.
ಯಾತ್ರೆಯ ಇಂದಿನ (08.03.2024) ಯೋಜಿತ ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 8.30 ಕ್ಕೆ ಗುಜರಾತ್ ದಹೋಡ್ ಬಸ್ ನಿಲ್ದಾಣ ವಯಾ ಬಿರ್ಸಾ ಮುಂಡಾ ಚೌಕದಿಂದ ಯಾತ್ರೆ ಮತ್ತೆ ಆರಂಭ. ಲಿಮಖೇಡಾ ಬಿರ್ಸಾ ಮುಂಡಾ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ. ಪಿಪಿಲೋಡ್ ನಲ್ಲಿ ಸ್ವಾಗತ ಕಾರ್ಯಕ್ರಮ. 11.30 ಕ್ಕೆ ವಿರಾಮ. ಮಧ್ಯಾಹ್ನ 2.00 ಕ್ಕೆ ಗೋಧ‍್ರಾ ಬಸ್ ನಿಲ್ದಾಣದಿಂದ ಪಾದಯಾತ್ರೆ; ವಯಾ ರಾಯಲ್ ಹೋಟೆಲ್. ಸಾರ್ವಜನಿಕ ಭಾಷಣ. ವಯಾ ಪೊಲೀಸ್ ಚೌಕಿ ನಂಬರ್ 7, ಪಂಚಮಾಲ್, ಕಲೋಲ್ ಕಾಂಗ್ರೆಸ್ ಭವನದಲ್ಲಿ ಸ್ವಾಗತ ಕಾರ್ಯಕ್ರಮ. ಹಲೋಲ್ ಬಸ್ ನಿಲ್ದಾಣ ಚೌಕದಿಂದ ಮಹಾರಾಣಾ ಪ್ರತಾಪ ಚೌಕದ ವರೆಗೆ ಪಾದಯಾತ್ರೆ. ಬಳಿಕ ಸಾರ್ವಜನಿಕ ಭಾಷಣ. ಪಾವಗಢದಲ್ಲಿ ಸ್ವಾಗತ ಕಾರ್ಯಕ್ರಮ. ಶಿವರಾಜಪುರದಲ್ಲಿ ಸ್ವಾಗತ ಕಾರ್ಯಕ್ರಮ. ರಾತ್ರಿ ವಿಶ್ರಾಂತಿ ಗುಜರಾತ್ ನ ಜಂಬೂಗೋಡದಲ್ಲಿ.
ನ್ಯಾಯ ಯಾತ್ರೆಯ ಮಾರ್ಗದಲ್ಲಿ ರಾಹುಲ್ ಗಾಂಧಿಯವರು ಕಂಬೋಯಿ ಧಾಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಗೋಧ್ರಾದಲ್ಲಿ ಗಣೇಶ ದೇವಾಲಯಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು.
ರಾಹುಲ್ ಗಾಂಧಿಯವರು ಕೆಲವು ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರಲ್ಲಿ ಉತ್ಸಾಹ ತುಂಬಿದರು.
ಯಾತ್ರೆಯ ಸಂದರ್ಭ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, “ಇಂದು ಭಾರತದಲ್ಲಿ ಉದ್ಯೋಗ ಸಿಗುತ್ತಿಲ್ಲ. ಮೋದಿ ಸರಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ ದೇಶವನ್ನು ಸಂಪೂರ್ಣ ಒಪ್ಪಿಸಿದೆ, ಸಣ್ಣ ವ್ಯಾಪಾರಿಗಳನ್ನು ನಾಶ ಮಾಡಿದೆ, ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಆದರೆ ರೈತರು, ಕೂಲಿಕಾರರು, ಸಣ್ಣ ವ್ಯಾಪಾರಿಗಳ ಒಂದು ನಯಾಪೈಸೆ ಸಾಲ ಮನ್ನಾ ಮಾಡಿಲ್ಲ, ಮೋದಿ ಸರಕಾರ ಅಗ್ನಿವೀರ ಯೋಜನೆ ತಂದಿದೆ, ಯಾಕೆಂದರೆ ಸೈನಿಕ ತರಬೇತಿ ಮತ್ತು ಪಿಂಚಣಿ ಹಣ ಅದಾನಿಗೆ ನೀಡಲು, ಅಗ್ನಿವೀರದಲ್ಲಿ ನಾಲ್ಕು ಮಂದಿಯಲ್ಲಿ ಮೂರು ಮಂದಿ ಹೊರಹೋಗಬೇಕಾಗುತ್ತದೆ, ನೀವು ಪಟ್ಟಿ ತೆಗೆದುನೋಡಿ, ಹೀಗೆ ಹೊರಹೋಗುವವರಲ್ಲಿ ಇರುವುದು ರೈತರು, ಕಾರ್ಮಿಕರು, ಬಡವರು ಮತ್ತು ಸಣ್ಣ ವ್ಯಾಪಾರಿಗಳ ಮಕ್ಕಳು” ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಬಗ್ಗೆಯೂ ಅವರು ಹೇಳಿದರು. ಅವೆಂದರೆ ಭರ್ತಿ ಭರೋಸಾ, ಪಹಲಿ ನೌಕರಿ ಪಕ್ಕೀ, ಪೇಪರ್ ಲೀಕ್ ಸೆ ಮುಕ್ತಿ, ಗಿಗ್ ಎಕಾನಮಿ ಮೆ ಸಾಮಾಜಿಕ ಸುರಕ್ಷಾ, ಯುವ ರೋಶನಿ.ಗುಜರಾತ್ ಯಾತ್ರೆ ಮುಗಿಸಿ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಪ್ರವೇಶಿಸುವ ಯಾತ್ರೆಯು ಮುಂಬಯಿಯ ಐತಿಹಾಸಿಕ ಶಿವಾಜಿ ಪಾರ್ಕ್ ನಲ್ಲಿ ಮಾರ್ಚ್ 17 ರಂದು ಬೃಹತ್ ಸಮಾವೇಶದೊಂದಿಗೆ ಕೊನೆಗೊಳ್ಳಲಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು