ಭಾರತ್‌ ಜೋಡೋ ನ್ಯಾಯ ಯಾತ್ರೆ- 62 ನೆಯ ದಿನ

Most read

ನರೇಂದ್ರ ಮೋದಿಯವರು ಮುಂದಿಟ್ಟ ಎಲೆಕ್ಟೋರಲ್ ಬಾಂಡ್ ನ ಪರಿಕಲ್ಪನೆಯೇನೆಂದರೆ, ಅದು ಜಗತ್ತಿನ ಅತಿ ದೊಡ್ಡ ವಸೂಲಿ ದಂಧೆ. ಇದು ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ. ಇದರಲ್ಲಿ ಸಿಬಿಐ, ಇಡಿ, ಐಟಿ ಒತ್ತಡ ಹಾಕಿ ವಸೂಲಿ ಮಾಡಲಾಗುತ್ತದೆ” – ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರದಲ್ಲಿ ಮುಂದುವರಿದಿದೆ.

ಇಂದಿನ (15.03.2024) ಕಾರ್ಯಕ್ರಮಗಳು ಹೀಗಿದ್ದವು – ಬೆಳಿಗ್ಗೆ 8.30 ಮಹಾರಾಷ್ಟ್ರ ಪಾಲ್ಘಾರ್ ಮೊಖಾಡಾ ದಿಂದ ಯಾತ್ರೆ ಪುನರಾರಂಭ. ಪಾಲ್ಘಾರ್ ವಿಜಯಸ್ತಂಭ ಜವಾಹರ ದಲ್ಲಿ ಸ್ವಾಗತ ಕಾರ್ಯಕ್ರಮ. ಪಾಲ್ಘಾರ್ ವಿಕ್ರಮಗಢದಲ್ಲಿ ಸ್ವಾಗತ ಕಾರ್ಯಕ್ರಮ. 11.30 ಕ್ಕೆ ವಾಡಾದಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ಪಾಲ್ಘಾರ್ ವಾಡಾದಲ್ಲಿ ಮಧ‍್ಯಾಹ್ನದ ಭೋಜನ. ಮಧ‍್ಯಾಹ್ನ 2.00 ಕ್ಕೆ ವಾಡಾದ ಕುಡುಸ್ ಗ್ರಾಮದಿಂದ ಯಾತ್ರೆ ಮತ್ತೆ ಆರಂಭ. ಥಾಣೆಯ ಅಂಬಾಡಿ ಅಂಡರ್ ಬ್ರಿಜ್ ಬಳಿ ಸ್ವಾಗತ ಕಾರ್ಯಕ್ರಮ. ಥಾಣೆ ಮಹಾಪೊಲಿಯಲ್ಲಿ ಸ್ವಾಗತ ಕಾರ್ಯಕ್ರಮ. ಸಂಜೆ 5.00 ಕ್ಕೆ ಆನಂದ ದಿಘೆ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ರಾತ್ರಿ ವಾಸ್ತವ್ಯ ಥಾಣೆ, ಸೊನಾಲೆ ಮೈದಾನಿನ ಹೊಟೆಲ್ ಸೊಂಕಾಮಲ್ ಬಳಿ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, “ನಮ್ಮ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ನ್ಯಾಯ ಎಂಬ ಪದವೂ ಸೇರಿದೆ. ಯಾಕೆಂದರೆ ದೇಶದಲ್ಲಿ ಬಡವರು, ರೈತರು, ಕಾರ್ಮಿಕರು, ದಲಿತರು. ಮಹಿಳೆಯರು ಮತ್ತು ಯುವಜನರಿಗೆ ಅನ್ಯಾಯ ಆಗುತ್ತಿದೆ. ಇಂದಿನ ಪ್ರಶ್ನೆಯೆಂದರೆ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಹಿಂದುಳಿದವರು, ದಲಿತರು ಮತ್ತು ಆದಿವಾಗಸಿಗಳಿಗೆ ಏನು ಸಹಾಯ ಮಾಡಿದ್ದಾರೆ? ನರೇಂದ್ರ ಮೋದಿ ಚುನಾವಣಾ ಬಾಂಡ್ ಶುರು ಮಾಡಿದ್ದಾರೆ, ಅದರ ಮಾಹಿತಿ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆನಂತರ ಹೊರಬಂದ ಮಾಹಿತಿ ಪ್ರಕಾರ ದೇಶದ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳು ಬಿಜೆಪಿಗೆ ಸಾವಿರಾರು ಕೋಟಿ ಹಣ ನೀಡಿವೆ. ಬಿಜೆಪಿ ಸರಕಾರವು ಕಂಪೆನಿಗಳ ಮೇಲೆ ಇಡಿ, ಸಿಬಿಐ, ಐಟಿ ಒತ್ತಡ ಹಾಕಿ ಅವರಿಂದ ಹಣ ವಸೂಲಿ ಮಾಡಿದೆ.

ಕಾಂಗ್ರೆಸ್ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ‍ಗ್ಯಾರಂಟಿ ಕೊಡಲಿದೆ. ಪ್ರಧಾನಿ ಮೋದಿಯವರು ನೇಕಾರ ವರ್ಗಕ್ಕೆ ಏನನ್ನೂ ಕೊಡಲಿಲ್ಲ. ಅವರು ಜಿ ಎಸ್ ಟಿ ಮತ್ತು ನೋಟು ನಿಷೇಧದ ಮೂಲಕ ಸಣ್ಣ ವ್ಯಾಪಾರಿಗಳನ್ನು ಮುಗಿಸಿಬಿಟ್ಟರು. ಮೋದಿಯವರು ದೇಶದ ಬಡವರಿಗೆ ಸಹಾಯ ಮಾಡಲಿಲ್ಲ. ಶ್ರೀಮಂತರಿಗೆ ಸಹಾಯ ಮಾಡಿದರು” ಎಂದರು.

ಸಂಜೆ ಥಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಕೆಲ ವರ್ಷಗಳ ಹಿಂದೆ ಮೋದಿಯವರು ಭಾರತದ ರಾಜಕೀಯ ದೇಣಿಗೆ ವ್ಯವಸ್ಥೆ ಸ್ವಚ್ಛಗೊಳಿಸುವ ಮಾತನಾಡುತ್ತಾ ಎಲೆಕ್ಟೋರಲ್ ಬಾಂಡ್ ತಂದರು. ಆದರೆ ಎಲೆಕ್ಟೋರಲ್ ಬಾಂಡ್ ನ ಸತ್ಯ ಈಗ ದೇಶಕ್ಕೆ ಗೊತ್ತಾಗಿದೆ. ನರೇಂದ್ರ ಮೋದಿಯವರು ಮುಂದಿಟ್ಟ ಎಲೆಕ್ಟೋರಲ್ ಬಾಂಡ್ ನ ಪರಿಕಲ್ಪನೆಯೇನೆಂದರೆ, ಅದು ಜಗತ್ತಿನ ಅತಿ ದೊಡ್ಡ ವಸೂಲಿ ದಂಧೆ. ಇದು ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ. ಇದರಲ್ಲಿ ಸಿಬಿಐ, ಇಡಿ, ಐಟಿ ಒತ್ತಡ ಹಾಕಿ ವಸೂಲಿ ಮಾಡಲಾಗುತ್ತದೆ” ಎಂದರು

ನಾಳೆ ದಾದರ್ ನ ಚೈತ್ಯ ಭೂಮಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ ಬಳಿ ರಾಹುಲ್ ಗಾಂಧಿಯವರು ಭಾರತ ಜೋಡೋ ನ್ಯಾಯ ಯಾತ್ರೆಯ ಮುಕ್ತಾಯವನ್ನು ಘೋಷಿಸಲಿದ್ದಾರೆ. ಇದರೊಂದಿಗೆ 66 ದಿನಗಳ ಕಾಲ, 6,700 ಕಿಲೋಮೀಟರ್ ದೂರ ಕ್ರಮಿಸಿ, 15 ರಾಜ್ಯಗಳ ಮೂಲಕ , ಮಣಿಪುರದಿಂದ ಮುಂಬಯಿಗೆ ನಡೆದ ನ್ಯಾಯ ಯಾತ್ರೆ ಕೊನೆಗೊಳ್ಳಲಿದೆ.

ಶ್ರೀನಿವಾಸ ಕಾರ್ಕಳ

More articles

Latest article