ದೇಶದಲ್ಲಿ ಒಬಿಸಿ, ದಲಿತರು, ಅಲ್ಪಸಂಖ್ಯಾತರು 90% ಇದ್ದಾರೆ. ಆದರೆ ಮಾಧ್ಯಮ ಈ 90% ಮಂದಿಯ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಮಾಧ್ಯಮ ಕೇವಲ 5% ಮಂದಿಯದ್ದು- ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ತನ್ನ ಕೊನೆಯ ದಿನದಲ್ಲಿದ್ದು ಈಗ ಮಹಾರಾಷ್ಟ್ರದಲ್ಲಿ ಮುಂದುವರಿದಿದೆ.
ಇಂದಿನ (13.03.2024) ಕಾರ್ಯಕ್ರಮಗಳು ಹೀಗಿದ್ದವು.
ಮಹಾರಾಷ್ಟ್ರದ ದೊಂಡಾಯಿಚಾದಿಂದ ಯಾತ್ರೆ ಆರಂಭ ಬೆಳಗಿನ 8.30 ಕ್ಕೆ. 10.30 ಕ್ಕೆ ಧುಲೆಯ ಮನೋಹರ್ ಟಾಕಿಸ್ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. 11.00 ಕ್ಕೆ ದುಲೆಯ ಹೋಟೆಲ್ ದೇಶ್ ವಿದೇಶ್ ನಲ್ಲಿ ಮಹಿಳಾ ಮೇಲಾವ್ ಸಭೆ. 2.30 ಕ್ಕೆ ಧುಲೆ ಮಾಲೆಗಾಂವ್ ಸಿಟಿಯ ಮೂಲಕ ಆರವಿಯಿಂದ ಯಾತ್ರೆ ಪುನರಾರಂಭ. ಮಾಲೆಗಾಂವ್ ಹಳೆಯ ಆಗ್ರಾ ರೋಡ್ ನ ಸುಪರ್ ಮಾರ್ಕೆಟ್ ನಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ರಾತ್ರಿ ವಾಸ್ತವ್ಯ ಮಹಾರಾಷ್ಟ್ರ ನಾಶಿಕ್ ನ ಮಾಲೆಗಾಂವ್ ರೂರಲ್ ನ ಹೊಟೆಲ್ ಫೌಂಟನ್ ನಲ್ಲಿ.
ಯಾತ್ರಾ ದಾರಿಯಲ್ಲಿ ರಾಹುಲ್ ಗಾಂಧಿಯವರು ಮಹಾರಾಷ್ಟ್ರ ಧುಲೆಯ ಕ್ರಾಂತಿ ಸ್ಮಾರಕದಲ್ಲಿ ವೀರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ದೇಶದಲ್ಲಿ ಒಬಿಸಿ, ದಲಿತರು, ಅಲ್ಪಸಂಖ್ಯಾತರು 90% ಇದ್ದಾರೆ. ಆದರೆ ಮಾಧ್ಯಮ ಈ 90% ಮಂದಿಯ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಮಾಧ್ಯಮ ಕೇವಲ 5% ಮಂದಿಯದ್ದು. ದೇಶದ ಮೂರು ಮುಖ್ಯ ವಿಷಯಗಳೆಂದರೆ ಬೆಲೆ ಏರಿಕೆ, ನಿರುದ್ಯೋಗ, ಭಾಗೀದಾರಿಕೆ. ಆಲೂ ಚಿಪ್ಸ್ ನ ಒಂದು ಪ್ಯಾಕೆಟ್ 10 ರುಪಾಯಿಯಲ್ಲಿ ಮಾರಾಟ ಆಗುತ್ತದೆ. ಆದರೆ ನಮಗೆ ಬಿಡಿಗಾಸು ಸಿಗುತ್ತದೆ ಎಂದು ರೈತರು ಹೇಳುತ್ತಾರೆ. ನಾವು ಲಕ್ಷಗಟ್ಟಲೆ ಖರ್ಚು ಮಾಡಿ ಓದುತ್ತೇವೆ. ಆದರೆ ನಮಗೆ ಉದ್ಯೋಗ ಸಿಗುವುದಿಲ್ಲ ಎಂದು ಯುವಜನರು ಹೇಳುತ್ತಾರೆ. ಅದರೆ ಮಾಧ‍್ಯಮ ಇದನ್ನು ತೋರಿಸುವುದಿಲ್ಲ. ಯಾಕೆಂದರೆ ಮಾಧ್ಯಮದಲ್ಲಿ ಅವರ ಪಾಲುದಾರಿಕೆಯಿಲ್ಲ.
ಕಾಂಗ್ರೆಸ್ ನ ಎರಡು ಕ್ರಾಂತಿಕಾರಿ ಹೆಜ್ಜೆಗಳೆಂದರೆ ಜಾತಿಗಣತಿ ಮತ್ತು ಆರ್ಥಿಕ ಸಮೀಕ್ಷೆ. ಅಗ್ನಿವೀರ ಯೋಜನೆಯ ಮೂಲಕ ಮೋದಿ ಸರಕಾರ ಯುವಜನರಿಗೆ ಮೋಸ ಮಾಡಿದೆ. ಬಿಜೆಪಿಯ ಒಬ್ಬ ಸಂಸದ ಹೇಳುತ್ತಾನೆ ಚುನಾವಣೆಯ ಬಳಿಕ ತಾವು ಸಂವಿಧಾನವನ್ನು ಮುಗಿಸಿಬಿಡುತ್ತೇವೆ. ಬಿಜೆಪಿಗೆ ಬಡವರು, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು ದೇಶದಲ್ಲಿ ಪಾಲು ಪಡೆಯುವುದು ಬೇಕಾಗಿಲ್ಲ. ನರೇಂದ್ರ ಮೋದಿ ಉದ್ಯಮಿಗಳ 16 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದರು. ಮನರೇಗಾದ ಒಂದು ವರ್ಷದ ಬಜೆಟ್ 65 ಸಾವಿರ ಕೋಟಿ ರುಪಾಯಿ. ಅಂದರೆ ಮೋದಿಯವರು ಮನರೇಗಾದ 24 ವರ್ಷಗಳ ಹಣವನ್ನು ಉದ್ಯಮಿಗಳಿಗೆ ನೀಡಿದರು. ಆದ್ದರಿಂದಲೇ ನಾನು ಹೇಳುವುದು, ಅವರ ಸಾಲ ಮನ್ನಾ ಆಗುವುದಾದರೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳ ಸಾಲ ಮನ್ನ ಯಾಕಿಲ್ಲ?
ನರೇಂದ್ರ ಮೋದಿಯವರು ಲೋಕಭೆಯಲ್ಲಿ ಧೂಮ್ ಧಾಮ್ ನಿಂದ ಮಹಿಳಾ ಮೀಸಲಾತಿ ಪಾಸು ಮಾಡಿದರು. ಆದರೆ ಜನಗಣತಿಯ ಬಳಿಕ ಮೀಸಲಾತಿ ನಿಮಗೆ ಸಿಗಲಿದೆ ಎಂದು ಅವರು ಹೇಳಿದರು. ಜನಗಣತಿ ನಡೆಯುವುದು ಹತ್ತು ವರ್ಷದ ಬಳಿಕ. ಆದರೆ ಕಾಂಗ್ರೆಸ್ ಸರಕಾರ ಬರುತ್ತಲೇ ನಾವು ಮಹಿಳೆಯರಿಗೆ ಜನಗಣತಿ ಹೊರತಾಗಿಯೂ ಮೀಸಲಾತಿ ಜಾರಿಗೊಳಿಸುತ್ತೇವೆ” ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರುಪಾಯಿ ಹಣ ಕೊಡುವ ಬಗ್ಗೆಯೂ ಘೋಷಣೆ ಮಾಡಿತು.ನಾಳೆಯೂ ಮಹಾರಾಷ್ಟ್ರದಲ್ಲಿ ಯಾತ್ರೆ ಮುಂದುವರಿಯಲಿದೆ.
ಶ್ರೀನಿವಾಸ ಕಾರ್ಕಳ