ಮೋದಿ ಮಿತ್ರ ನವೀನ್ ಪಟ್ನಾಯಕರ ರಕ್ಷಣೆಯಲ್ಲಿ ಹೊರಗಿನ 30 ಕೋಟ್ಯಧೀಶರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ರೈಲು, ಸೈಲ್, ಪೋರ್ಟ್, ಏರ್ ಪೋರ್ಟ್ ಸಹಿತ ಕಾಂಗ್ರೆಸ್ ಮೂಲಕ ನಿರ್ಮಾಣವಾದ ದೊಡ್ಡ ಪಿ ಎಸ್ ಯು ಗಳನ್ನು ಮೋದಿಯ ಮಿತ್ರ ನೀತಿಯಿಂದ ಮಾರಲಾಗುತ್ತಿದೆ. ನಮ್ಮ ಆದ್ಯತೆ ಜಿ ಎಸ್ ಟಿ ಯಲ್ಲಿ ಸುಧಾರಣೆ ತಂದು ಸಣ್ಣ ಉದ್ಯಮಗಳಿಗೆ ಹೊಸ ಆರ್ಥಿಕ ಮಾದರಿ ಒದಗಿಸುವುದು, ಕುರುಡು ಖಾಸಗೀಕರಣವನ್ನು ತಡೆಯುವುದು, ಪಿ ಎಸ್ ಯು ಗಳನ್ನು ಮತ್ತೆ ಜೀವಂತ ಉಳಿಸುವುದು, ಖಾಲಿ ಬಿದ್ದ ಹುದ್ದೆಗಳನ್ನು ತುಂಬುವುದು – ರಾಹುಲ್ ಗಾಂಧಿ
ನ್ಯಾಯ ಯಾತ್ರೆಯು ಒಡಿಶಾದಲ್ಲಿ ಮುಂದುವರಿದಿದೆ. ಇಂದಿನ (06.02.2024) ಕಾರ್ಯಕ್ರಮಗಳು ಹೀಗಿದ್ದವು.
ಬೆಳಿಗ್ಗೆ 9.10 ಕ್ಕೆ ಒಡಿಶಾ, ರೂರ್ಕೆಲಾದ ವೇದವ್ಯಾಸ ದೇಗುಲಕ್ಕೆ ಭೇಟಿ. 9.30 ಕ್ಕೆ ರೂರ್ಕೆಲಾ, ಉದಿತ್ ನಗರದಿಂದ ಪಂಪೋಶ್ ಚೌಕದವರೆಗೆ ಪಾದಯಾತ್ರೆ. 10.00 ಕ್ಕೆ ಪಂಪೋಶ್ ಚೌಕದಲ್ಲಿ ಸಾರ್ವಜನಿಕ ಭಾಷಣ. ಮಧ್ಯಾಹ್ನದ ವಿರಾಮ ಮತ್ತು ಭೋಜನದ ಬಳಿಕ 2.00 ಕ್ಕೆ ರಾನಿಬಂದ್ ನಿಂದ ಯಾತ್ರೆ ಪುನರಾರಂಭ. ಒಡಿಶಾದ ಕುಟ್ರಾ ಮತ್ತು ಬಾರ್ಗಾಂವ್ ನಲ್ಲಿ ರಿಸೆಪ್ಶನ್. 4.30 ಕ್ಕೆ ಸುಂದರ್ ಗಡದ ಬಸ್ ನಿಲ್ದಾಣ ಚೌಕದಿಂದ ಎಸ್ ಬಿ ಐ ಚೌಕದವರೆಗೆ ಪಾದಯಾತ್ರೆ. ರಾತ್ರಿ ವಾಸ್ತವ್ಯ ಒಡಿಶಾ ಜಾರ್ಸುಗುಡಾದಲ್ಲಿ.
ಬೆಳಿಗ್ಗೆ ರಾಹುಲ್ ಗಾಂಧಿಯವರು ವೇದವ್ಯಾಸ ಮಂದಿರಕ್ಕೆ ಭೇಟಿ ನೀಡಿದರು. ಭಗವಾನ್ ಶಿವನ ಆಶೀರ್ವಾದ ಪಡೆದು ದೇಶದ ಜನರ ಸುಖಸಮೃದ್ಧಿಗಾಗಿ ಪ್ರಾರ್ಥಿಸಿದರು.
ಬಳಿಕ ಸಾರ್ವಜನಿರನ್ನು ಉದ್ದೇಶಿಸಿ ಪಂಪೋಶ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ದೇಶದಲ್ಲಿ ಯಾವ ರೀತಿಯಲ್ಲಿ ದ್ವೇಷ ಹರಡಲಾಗುತ್ತಿದೆಯೋ ಅದರ ವಿರುದ್ಧ ಕಳೆದ ವರ್ಷ ನಾವು ಭಾರತ ಜೋಡೋ ಯಾತ್ರೆ ನಡೆಸಿದ್ದೆವು. ಪೂರ್ವದಿಂದ ಪಶ್ಚಿಮಕ್ಕೂ ನೀವು ಯಾತ್ರೆ ನಡೆಸಬೇಕು ಎಂದು ಆಗ ಅನೇಕರು ಹೇಳಿದ್ದರು. ಆದ್ದರಿಂದ ನಾವು ಭಾರತ ಜೋಡೋ ನ್ಯಾಯ ಯಾತ್ರೆ ಆರಂಭಿಸಿ ಈಗ ಒಡಿಶಾದಲ್ಲಿದ್ದೇವೆ. ಒಡಿಶಾದಲ್ಲಿ ನರೇಂದ್ರ ಮೋದಿ ಮತ್ತು ನವೀನ್ ಪಟ್ನಾಯಕ್ ಅವರ ಪಾರ್ಟನರ್ ಶಿಪ್ ನ ಸರಕಾರವಿದೆ. ಇಬ್ಬರೂ ಒಟ್ಟು ಸೇರಿ ಕೆಲಸ ಮಾಡುತ್ತಾರೆ. ಮೋದಿಯ ಮಾತು ಪಾಲಿಸುತ್ತಲೇ ಬಿಜೆಡಿಯವರು ನಮ್ಮನ್ನು ಕಾಡುತ್ತಾರೆ ಎಂದು ನನಗೆ ಸಂಸತ್ ನಲ್ಲಿ ಕಾಣುತ್ತದೆ. ಬಿಜೆಪಿ ಮತ್ತು ಬಿಜೆಡಿ ಪಾರ್ಟನರ್ ಶಿಪ್ ವಿರುದ್ಧ ಕಾಂಗ್ರೆಸ್ ಮಾತ್ರ ಹೋರಾಡಬಲ್ಲುದು.
ಒಡಿಶಾದಲ್ಲಿ ಆದಿವಾಸಿಗಳು ಹಿಂದುಳಿದವರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಿರುದ್ಯೋಗದ ಕಾಯಿಲೆ ದೇಶದಾದ್ಯಂತ ಹರಡಿದೆ. ಪ್ರತಿಯೊಂದು ಪ್ರದೇಶವೂ ಈ ರೋಗದಿಂದ ಪೀಡಿತವಾಗಿದೆ. ಒಡಿಶಾದಲ್ಲಿಯೇ 40% ಯುವಜನರು ಓದು ಮತ್ತು ಉದ್ಯೋಗದಿಂದ ದೂರ ಇದ್ದಾರೆ. ಒಂದು ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆ ಖಾಲಿಯಿದೆ. ಲಕ್ಷಾಂತರು ಯುವಜನರು ಉದ್ಯೋಗ ಹುಡುಕುತ್ತಿದ್ದಾರೆ. ಒಡಿಶಾದ 30 ಲಕ್ಷ ಯುವಜನರು ಬೇರೆ ರಾಜ್ಯಗಳಲ್ಲಿ ನೌಕರಿಗಾಗಿ ತಿರುಗಾಡುತ್ತಿದ್ದಾರೆ.
ಮೋದಿ ಮಿತ್ರ ನವೀನ್ ಪಟ್ನಾಯಕರ ರಕ್ಷಣೆಯಲ್ಲಿ ಹೊರಗಿನ 30 ಕೋಟ್ಯಧೀಶರು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ರೈಲು, ಸೈಲ್, ಪೋರ್ಟ್, ಏರ್ ಪೋರ್ಟ್ ಸಹಿತ ಕಾಂಗ್ರೆಸ್ ಮೂಲಕ ನಿರ್ಮಾಣವಾದ ದೊಡ್ಡ ಪಿ ಎಸ್ ಯು ಗಳನ್ನು ಮೋದಿಯ ಮಿತ್ರ ನೀತಿಯಿಂದ ಮಾರಲಾಗುತ್ತಿದೆ. ನಮ್ಮ ಆದ್ಯತೆ ಜಿ ಎಸ್ ಟಿ ಯಲ್ಲಿ ಸುಧಾರಣೆ ತಂದು ಸಣ್ಣ ಉದ್ಯಮಗಳಿಗೆ ಹೊಸ ಆರ್ಥಿಕ ಮಾದರಿ ಒದಗಿಸುವುದು, ಕುರುಡು ಖಾಸಗೀಕರಣವನ್ನು ತಡೆಯುವುದು, ಪಿ ಎಸ್ ಯು ಗಳನ್ನು ಮತ್ತೆ ಜೀವಂತ ಉಳಿಸುವುದು, ಖಾಲಿ ಬಿದ್ದ ಹುದ್ದೆಗಳನ್ನು ತುಂಬುವುದು. ಕಾಂಗ್ರೆಸ್ ನ ಮುಂಗಾಣ್ಕೆಯೆಂದರೆ ಒಡಿಶಾ ಸಹಿತ ಇಡೀ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದು” ಎಂದು ಅವರು ಹೇಳಿದರು.
ಇದೇ ದಿನ ಒಡಿಶಾದ ಕಾಂಗ್ರೆಸ್ ಉಸ್ತುವಾರಿ ಡಾ. ಅಜಯ್ ಕುಮಾರ್, ಕಾಂಗ್ರೆಸ್ ನಾಯಕರಾದ ಜಯರಾಮ್ ರಮೇಶ್, ಕನ್ಹಯ್ಯಕುಮಾರ್ ಅವರಿಂದ ಒಡಿಶಾದಲ್ಲಿ ಪತ್ರಿಕಾಗೋಷ್ಠಿಯೂ ನಡೆಯಿತು.
“ಇಂದಿನ ನ್ಯಾಯ ಯಾತ್ರೆ ಅತ್ಯಂತ ಐತಿಹಾಸಿಕ ನಗರವೊಂದರಿಂದ ಆರಂಭವಾಗಿದೆ. ಈ ನಗರ ದೇಶದ ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಮಹತ್ವ ಪಡೆದಿದೆ. 1950 ರ ದಶಕದಲ್ಲಿ ಇಲ್ಲಿ ಔದ್ಯೋಗೀಕರಣದ ಅಡಿಗಲ್ಲು ಹಾಕಲಾಯಿತು; ಜವಾಹರಲಾಲ್ ನೆಹರೂ ಅವರಿಂದ. ರೂರ್ಕೆಲಾ ಪ್ರಪಂಚದಲ್ಲಿಯೇ ಪ್ರಸಿದ್ಧ. ಅಂದಿನ ಪಶ್ಚಿಮ ಜರ್ಮನಿ ಮತ್ತು ಆಸ್ಟ್ರಿಯಾದ ಆರ್ಥಿಕ ಮತ್ತು ತಂತ್ರಜ್ಞಾನ ಸಹಾಯ ಸಿಕ್ಕಿತ್ತು.
ಭಾರತದ ಉದ್ಯೋಗೀಕರಣದ ಮಾತು ಬಂದಾಗಲೆಲ್ಲ ಭಿಲಾಯಿ, ರೂರ್ಕೆಲಾ, ಬೊಕಾರೋ, ಹಿರಾಕುಡ್, ಭಾಕ್ರಾನಂಗಲ್, ದುರ್ಗಾಪುರ ಇವೆಲ್ಲ ನೆನಪಾಗುತ್ತವೆ. ಆದರೆ ಇವೆಲ್ಲವೂ ಈಗ ಅಪಾಯದಲ್ಲಿದೆ. ಯಾಕೆಂದರೆ ನರೇಂದ್ರ ಮೋದಿಯವರದ್ದು ಒಂದೇ ನೀತಿ- ಎಲ್ಲವನ್ನೂ ಮಾರುವುದು, ತನ್ನ ಗೆಳೆಯರಿಗೆ ಮಾರುವುದು ಎಂದರು. ಇದರ ವಿರೋಧವನ್ನು ಕಾಂಗ್ರೆಸ್ ಮಾಡಬಲ್ಲುದು. ಬಿಜೆಪಿ ಬಿಜೆಡಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು” ಎನ್ನುತ್ತಾ ಯಾತ್ರೆಯ ಉದ್ದೇಶವನ್ನು ಜಯರಾಮ್ ರಮೇಶ್ ವಿವರಿಸಿದರು.
ಶ್ರೀನಿವಾಸ ಕಾರ್ಕಳ, ಮಂಗಳೂರು