ಬೆಂಗಳೂರು: ಬೆಂಗಳೂರು ನಗರದಲ್ಲಿ ಖಾಸಗಿ ಸಹಬಾಗಿತ್ವದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ತಮಗೆ ಯಾವುದೇ ಲಾಭ ಆಗುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಂಸದ ತೇಜಸ್ವಿಸೂರ್ಯ ಕೊರಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದ ಅಭಿವೃದ್ಧಿ ವಿರೋಧಿಗಳು ಬಿಜೆಪಿ ಮುಖಂಡರು ಅಭಿವೃದ್ಧಿ ವಿರೋಧಿಗಳು. ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿದೆ. ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಗರ ಮೊದಲನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 4 ಲಕ್ಕಕ್ಕೂ ಹೆಚ್ಚು ಕೋಟಿ ಹಣ ತೆರಿಗೆ ಸಂಗ್ರಹವಾಗುತ್ತಿದೆ ಅದರಲ್ಲಿ ಶೇ. 50 ರಷ್ಟು ಹಣ ಬೆಂಗಳೂರು ನಗರದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಆದರೆ ಯಾವುದೇ ಅಭಿವೃದ್ದಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಆಪಾದಿಸಿದರು.
ಸುರಂಗ ಮಾರ್ಗವನ್ನು ವೈಜ್ಞಾನಿಕವಾಗಿ ತಂತ್ರಜ್ಞರ ಸಲಹೆ ಮೇರೆಗೆ ಯೋಜನೆ ರೂಪಿಸಲಾಗಿದೆ. ಬಿಜೆಪಿ ನಾಯಕರು ಜನರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಿ ,ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಸುರಂಗ ಮಾರ್ಗವೇ ಬೆಂಗಳೂರು ಅಭಿವೃದ್ಧಿಗೆ ಪರ್ಯಾಯ ಎಂಬುದಾಗಿ ಹೇಳಿ ಸಂಚಾರಿ ದಟ್ಟಣೆಯನ್ನು ನಿಯಂತ್ರಿಸಬೇಕಾದರೆ ಸುರಂಗ ಮಾರ್ಗ ಅಗತ್ಯವೆಂದು ತಿಳಿಸಿದ್ದಾರೆ , ಆದರೆ ಬಿಜೆಪಿಯ ಭ್ರಷ್ಟ ನಾಯಕರು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮರೆಮಾಚಲು ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ಜನತೆಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಬಿಜೆಪಿಯ ಸುಳ್ಳು ಅಪಪ್ರಚಾರವನ್ನು ತಡೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಮಾಡುತ್ತೇವೆ ಎಂದು ತಿಳಿಸಿದರು.
2014 ರ ವರೆಗೂ ಈ ದೇಶದ ಸಾಲ 53 ಲಕ್ಷ ಕೋಟಿ ಸಾಲವಿತ್ತು , ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ , ಈಗ 150 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ ,ಈಗ ಪ್ರತಿ ವ್ಯಕ್ತಿಯ ಮೇಲೆ 4.8 ಲಕ್ಷ ದಷ್ಟು ಸಾಲವಿದೆಎಂದರು. ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಟ್ಟುಸುಮಾರು ರೂ. 9 ಸಾವಿರ ಕೋಟಿ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದರು. ಬಗರ್ ಹುಕುಂ ಸರ್ಕಾರಿ ಭೂಮಿಯನ್ನು ಆರ್.ಅಶೋಕ್ ರವರು ತನ್ನ ಹಿಂಬಾಲಕರಿಗೆ ಜಮೀನು ಮಂಜೂರು ಮಾಡಿ ಭೂ ಹಗರಣ ನಡೆಸಿ ಸಿಲುಕಿದ್ದಾರೆ ಎಂದರು.

