ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ; ಸ್ವಲ್ಪ ವ್ಯತ್ಯಾಸವಾಗಿದ್ದರೆ?…

Most read

ಬೆಂಗಳೂರು: ಗುವಾಹಟಿ–ಚೆನ್ನೈ ಇಂಡಿಗೊ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಜೂ19ರಂದು ಗುರುವಾರ ನಡೆದಿದೆ.

ಇಂಡಿಗೊ ವಿಮಾನ ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೈಲಟ್‌ ಕಂಟ್ರೋಲ್‌ ರೂಂಗೆ ಮೇಡೇ ಸಂದೇಶ ರವಾನಿಸಿದ್ದರು. ಅಧಿಕಾರಿಗಳು ಕೂಡಲೇ ವಿಮಾನವನ್ನು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಸಲು ಸೂಚನೆ ನೀಡಿದ್ದರು. ಈ ಸೂಚನೆಯನ್ವಯ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದರು ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿ ವಿಮಾನ ನಿಲ್ದಾಣದಿಂದ  ಇಂಡಿಗೊ 6E-6764 ವಿಮಾನ ಸಂಜೆ 4.40ಕ್ಕೆ ಟೇಕ್ ಆಫ್ ಆಗಿತ್ತು. ಇದು 7.45ಕ್ಕೆ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿತ್ತು. ಮಾರ್ಗಮಧ್ಯದಲ್ಲಿ ಇಂಧನ ಖಾಲಿಯಯಾಗಿ  ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ವಿಮಾನವು ಚೆನ್ನೈ ತಲುಪುವುದು ಅಸಾಧ್ಯವಾಗಿತ್ತು. ಈ ವೇಳೆ ಪೈಲಟ್‌ ಮೇಡೇ ಸಂದೇಶ ರವಾನಿಸಿ ಬೆಂಗಳೂರಿನಲ್ಲಿ ತುರ್ತು ಭೂಸ್ವರ್ಶ ಮಾಡಿದರು. ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್‌, ಐವರು ಗಗನಸಖಿಯರು ಸೇರಿ 175 ಜನರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದರು.

More articles

Latest article