ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಕುರಿತು ಕಳೆದ ಮೂರು ನಾಲ್ಕು ದಿನಗಳಿಂದ ಕಾಂಗ್ರೆಸ್ ಸರ್ಕಾರ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ಟೀಕೆಗಳಿಗೆ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಕ್ಸ್ ಮೂಲಕ ಬಿಜೆಪಿ ಟೀಕೆಗಳಿಗೆ ತಕ್ಕ ತಿರುಗೇಟು ನೀಡಿದೆ. ಕೆಪಿಸಿಸಿಯ ತಿರುಗೇಟಿನ ಪೂರ್ಣಪಾಠ ಹೀಗಿದೆ:
ಡಿಯರ್ @BJP4Karnataka ,
ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಸಿಎಂ @siddaramaiah, ಡಿಸಿಎಂ @DKShivakumar ಅವರನ್ನು ಗುರಿಯಾಗಿಸಿ ಅಪಪ್ರಚಾರ ನಡೆಸುವುದು, ಸುಳ್ಳು, ಕಪೋಲಕಲ್ಪಿತ ಆರೋಪಗಳನ್ನು ಮಾಡುವುದೇ ನಿಮ್ಮ ಪೂರ್ಣಾವಧಿ ಕೆಲಸವಾಗಿದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿಸುವ, ಬೆಂಗಳೂರಿಗೆ ಹೊಸ ರೂಪನೀಡುವ ದೂರದೃಷ್ಟಿಯ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ. ಅಧಿಕಾರದುದ್ದಕ್ಕೂ ಭ್ರಷ್ಟಾಚಾರ, ಕಮಿಷನ್ ಮಾಫಿಯಾ, ವರ್ಗಾವಣೆ ದಂಧೆ ನಡೆಸಿದ ನಿಮ್ಮ ಕರ್ಮಕಾಂಡಗಳಿಗೆ ರಾಜ್ಯದ ಜನ ತಕ್ಕ ಶಾಸ್ತಿ ಮಾಡಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಎಷ್ಟಾದರೂ ಕೋವಿಡ್ ಹೆಣದ ಮೇಲೆ ಹಣ ಲೂಟಿ ಮಾಡಿದ ರಣಹದ್ದುಗಳ ಪರಂಪರೆಯಲ್ಲವೇ ನಿಮ್ಮದು!
ಹನ್ನೊಂದು ವರ್ಷಗಳಿಂದ ‘ಅಚ್ಛೇ ದಿನ’ದ ಕಟ್ಟುಕಥೆ ನಂಬಿಕೊಂಡು ಕುಳಿತಿರುವ, ರಾಜ್ಯದ ಜನ ಸಾವು, ನೋವು ಅನುಭವಿಸುತ್ತಿರುವಾಗ ‘ದೇವರೇ ಗತಿ’ ಎಂದ, ನೀವು ಮಾಡಿಟ್ಟು ಹೋದ ಅದ್ವಾನಗಳನ್ನು ಸರಿಪಡಿಸಿ ಅಭಿವೃದ್ಧಿಯ ಹಳಿಗೆ ತರಲು ಕೆಲವು ಸಮಯ ಹಿಡಿದೇ ಹಿಡಿಯುತ್ತದೆ. ಆ ಹೇಳಿಕೆಯನ್ನೇ ಬೆಟ್ಟ ಮಾಡುವ ನಿಮ್ಮ ಚಿಲ್ಲರೆ ಬುದ್ದಿ ನೈತಿಕ ಅದಃಪತನದ ಪ್ರತೀಕ. ನಿಮ್ಮ ಸರ್ಕಾರವಿದ್ದಾಗ ಒಂದೂ ಜನಪರ ಯೋಜನೆ ತರದ, ಅಭಿವೃದ್ಧಿ ಕೆಲಸಗಳನ್ನು ಮಾಡದ, ಜನರಿಂದ ತಿರಸ್ಕೃತರಾದ ನಿಮಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಕಾರ್ಯಗಳ ಬಗ್ಗೆ ಅಸೂಯೆ ಅತ್ಯಂತ ಸಹಜ! ನಿಮ್ಮ ಹೊಟ್ಟೆ ಕಿಚ್ಚಿಗೆ ಮತ್ತಷ್ಟು ಆಹಾರ ಒದಗಿಸುತ್ತೇವೆ, ಒಪ್ಪಿಸಿಕೊಳ್ಳಿ..!!
ಟ್ರಾಫಿಕ್ ದಟ್ಟಣೆ ನಿವಾರಣೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಸಾಕಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು.
▶ ₹ 35,000 ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳು
▶ ಸದ್ಯದಲ್ಲೇ ಉತ್ತರ-ದಕ್ಷಿಣ ಕಾರಿಡಾರ್ ಟೆಂಡರ್
▶ ₹ 15,000 ಕೋಟಿ ವೆಚ್ಚದಲ್ಲಿ 150 ಕಿಮೀ ಫ್ಲೈ ಓವರ್‌ಗಳು
▶ ₹ 5000 ಕೋಟಿ ವೆಚ್ಚದ ಡಬಲ್ ಡೆಕ್ಕರ್
▶ ₹ 5000 ಕೋಟಿ ವೆಚ್ಚದ
▶ 300 ಕಿಮೀ ಬಫರ್ ರಸ್ತೆಗಳು
▶ ₹ 500 ಕೋಟಿಗಳ ಸ್ಕೈ ಡೆಕ್ ನಿರ್ಮಾಣ
▶ ₹ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಲೈಟಿಂಗ್‌ಗಳು
▶ ₹ 10,000 ಕೋಟಿ ವೆಚ್ಚದ ಕಾವೇರಿ 6 ನೇ ಹಂತದ ಯೋಜನೆ
▶ ₹ 5,000 ಕೋಟಿಗಳ ವೆಚ್ಚದಲ್ಲಿ ಕೆರೆಗಳ ನಡುವೆ ಇಂಟರ್ ಲಿಂಕಿಂಗ್
▶ ₹ 26,000 ಕೋಟಿ ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರೋಡ್
▶ ₹ 10,000 ಕೋಟಿ ವೆಚ್ಚದಲ್ಲಿ 1,000 ಕಿಮೀ ಕಾಂಕ್ರೀಟ್ ರಸ್ತೆಗಳು
145 ಕಿಮೀ ಕಾಂಕ್ರೀಟ್ ರಸ್ತೆ, 400 ಕಿಮೀ ರೀಸರ್ಫೇ ಸಿಂಗ್ ರಸ್ತೆ, ಬಿಬಿಎಂಪಿ ದಾಖಲೆಗಳ ಡಿಜಿಟಲೀಕರಣ, ರಸ್ತೆ ಅಭಿವೃದ್ಧಿಯ ಮಾರ್ಗದರ್ಶಿ ‘ನಮ್ಮ ರಸ್ತೆ’ ಕೈಪಿಡಿ…
ಭವಿಷ್ಯದಲ್ಲಿ ಬೆಂಗಳೂರಿಗೆ ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸುವ, ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವ, ಬೆಂಗಳೂರಿನ ಗತ ವೈಭವವನ್ನು ಮರಳಿಸುವ ನಮ್ಮ ಸಂಕಲ್ಪ ಅಛಲ. ಕೈಲಾಗದಿದ್ದವನು ಮೈಪರಚಿಕೊಳ್ಳುವ ಸ್ಥಿತಿಯಲ್ಲಿರುವ ನಿಮ್ಮ ಅಸೂಯೆಗೆ ಮದ್ದಿಲ್ಲ