ಬೆಂಗಳೂರಲ್ಲಿ ಡೆಂಗ್ಯುಗೆ 27 ವರ್ಷದ ಯುವಕ ಬಲಿ : ರಾಜ್ಯಾದ್ಯಂತ ಸಾವಿನ ಸಂಖ್ಯೆ ಏರಿಕೆ!

ಬೆಂಗಳೂರಿನ 27 ವರ್ಷದ ಯುವಕ ಡೆಂಗ್ಯು ಸೋಂಕಿನಿಂದಲೇ ಸಾವಿಗೀಡಾಗಿದ್ದಾರೆ.ಮೃತಪಟ್ಟ ಯುವಕ ಕಗ್ಗದಾಸಪುರದ ನಿವಾಸಿ ಎಂದು ಬಿಬಿಎಂಪಿ (BBMP) ಖಚಿತಪಡಿಸಿದೆ.

ಕಳೆದ ಶುಕ್ರವಾರ ಎರಡು ಡೆಂಗ್ಯು ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಗ್ಯುವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಖಚಿತಪಡಿಸಿದೆ. ಮತ್ತೊಂದು ಕ್ಯಾನ್ಸರ್ ಕಾರಣ ಎಂದು ತಿಳಿಸಿದೆ.

ಬೆಂಗಳೂರು ನಗರದಲ್ಲಿಯೃ 1743 ಡೆಂಗ್ಯು ಪ್ರಕರಣಗಳು ದಾಖಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ. ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಎಚ್ಚರ ವಹಿಸಲು ಬಿಬಿಎಂಪಿ ಸಲಹೆ ನೀಡಲಾಗಿದೆ. ಇದೂವರೆಗೂ ನಗರದಲ್ಲಿ ಇಬ್ಬರು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜನರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

More articles

Latest article

Most read