Friday, December 6, 2024

ಬಿಡಿಎ ನಿವೇಶನ ಕೊಡಿಸುವುದಾಗಿ ಬೆಂಗಳೂರಿನ ಇಬ್ಬರು ನಿವೃತ್ತ ವಾಯುಪಡೆ ಅಧಿಕಾರಿಗಳಿಗೆ ವಂಚನೆ : ಪ್ರಕರಣ ದಾಖಲು

Most read

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( BDA) ಯಿಂದ ಪ್ಲಾಟ್ಗಳನ್ನು ಕೊಡಿಸುವುದಾಗಿ ಬೆಂಗಳೂರಿನ ವಾಯುಪಡೆ ನಿವೃತ್ತ ಅಧಿಕಾರಿಗಳಿಗೆ ನಂಬಿಸಿ ಲಕ್ಷ ಲಕ್ಷ ದುಡ್ಡನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು, ಆಸೆಗೆ ಬಿದ್ದು ವಂಚನೆಗೆ ಒಳಗಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಆಗಿರುವ ಆರ್ ಚಂದ್ರಭಾನು ಮತ್ತು ಅವರ ಸ್ನೇಹಿತ ನಿವೃತ್ತ ಕ್ಯಾಪ್ಟನ್ ಹರಿದಾಸ್  ಅವರು, ವಂಚಕ ರಾಘವೇಂದ್ರ ಸಿ ಅವರಿಗೆ ಮುಂಗಡ ಬುಕಿಂಗ್ ಶುಲ್ಕವಾಗಿ ಆರು ಲಕ್ಷವನ್ನು ಪಾವತಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಚಂದ್ರಭಾನು ನವೆಂಬರ್ 2020 ರಲ್ಲಿ ರಾಘವೇಂದ್ರ ಅವರನ್ನು ಪರಸ್ಪರ ಸಂಪರ್ಕಿಸಿ ಬಿಡಿಎ ಸೈಟ್‌ಗಳ ಬಗ್ಗೆ ಚರ್ಚಿಸಿದರು. ರಾಘವೇಂದ್ರ ಅವರು ಪ್ಲಾಟ್ ಕಾಯ್ದಿರಿಸುವಿಕೆಗಾಗಿ ಪ್ರತಿ ಸೈಟ್‌ಗೆ ರೂ 1 ಲಕ್ಷವನ್ನು ಮುಂಗಡವಾಗಿ ಪಾವತಿಸಲು ಒತ್ತಾಯಿಸಿದ್ದಾರೆ. ನಂತರ ಚಂದ್ರಭಾನು ಅವರು ನಾಲ್ಕು ಸೈಟ್‌ಗಳನ್ನು ಬುಕ್ ಮಾಡಲು ಆರ್‌ಟಿಜಿಎಸ್ ಮೂಲಕ 4 ಲಕ್ಷ ರೂಗಳನ್ನು ರಾಘವೇಂದ್ರ ಅವರಿಗೆ ಪಾವತಿಸಿದ್ದಾರೆ.

ಚಂದ್ರಭಾನು ಅವರ ಮೂಲಕ ಬಿಡಿಎ ಪ್ಲಾಟ್‌ಗಳ ಬಗ್ಗೆ ಮಾಹಿತಿ ಪಡೆದ ನಿವೃತ್ತ ಕ್ಯಾಪ್ಟನ್ ಹರಿದಾಸ್ ಕೂಡ ಆಸಕ್ತಿ ತೋರಿ, ತಮ್ಮ ಮತ್ತು ಪತ್ನಿಯ ಹೆಸರಿಗೆ ಎರಡು ನಿವೇಶನಗಳನ್ನು ಕಾಯ್ದಿರಿಸಿ, ಶಂಕಿತ ವ್ಯಕ್ತಿಯ ಖಾತೆಗೆ 2 ಲಕ್ಷ ರೂಗಳನ್ನು ಪಾವತಿಸಿದ್ದಾರೆ.

ನಂತರ ಫ್ಲಾಟ್ ವಿಚಾರವಾಗಿ ಹರಿದಾಸ್ ಅವರು, ಚಂದ್ರಭಾನು ಮತ್ತು ರಾಘವೇಂದ್ರ ಬಳಿ ಪದೇ ಪದೆ ಅಪ್ಡೇಟ್ ಕೇಳಲು ಶುರುಮಾಡಿದಾಗ. ಹರಿದಾಸ್ ಅವರ ಎರಡು ಲಕ್ಷ ಹಣವನ್ನು ನಿವೃತ್ತ ಅಧಿಕಾರಿ ಚಂದ್ರಭಾನು ಅವರೇ ತಮ್ಮ ಜೇಬಿನಿಂದ ನೀಡುತ್ತಾರೆ.

ನಂತರ ಪ್ಲಾಟ್ ವಿಷಯವಾಗಿ  ರಾಘವೇಂದ್ರ ಸಂಪರ್ಕಿಸಿದ ಚಂದ್ರಭಾನು ಅವರಿಗೆ ಸರಿಯಾದ ಮಾಹಿತಿ ಸಿಗದ ಕಾರಣ ಹಣವನ್ನು ವಾಪಸ್ ನೀಡಲು ತಿಳಿಸುತ್ತಾರೆ. ತಮ್ಮ ಹಣ ವಾಪಸ್ ಸಿಗುವುದು ಕಷ್ಟ ಎಂದು ತಿಳಿದ ಅಧಿಕಾರಿ ಚಂದ್ರಭಾನು ಫೆಬ್ರವರಿ 14 ರಂದು ಕೊಡಿಗೇಹಳ್ಳಿ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಿದ್ದಾರೆ.

ಕೊಡಿಗೇಹಳ್ಳಿ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಫೆ.16ರಂದು ವಿಧಾನಸೌಧ ಠಾಣೆಗೆ ವರ್ಗಾಯಿಸಲಾಗಿದೆ.

More articles

Latest article