ಸನ್ನಿ ಲಿಯೋನ್ ಈ ಹೆಸರು ಕೇಳಿದರೇನೆ ಅದೆಷ್ಟೋ ಗಂಡು ಮಕ್ಕಳ ನಿದ್ದೆ ಕೆಡುತ್ತದೆ. ಮಾದಕ ಮೈಮಾಟದಿಂದಾನೇ ಹುಡುಗರ ಎದೆಯಲ್ಲಿ ಚಳಿಯ ಕಾವು ಹೆಚ್ಚಿಸಿದವರು. ಆದರೆ ಈ ಮಾದಕ ನಟಿಯನ್ನು ಈಗ ಹೊಗಳುವವರೇ ಜಾಸ್ತಿ. ಎಷ್ಟೋ ಜನರ ಬಾಳಿಗೆ ಆರಾಧ್ಯ ದೇವತೆಯಾಗಿದ್ದಾರೆ. ಪೋರ್ನ್ ಲೋಕದ ಸುಂದರಿ ಎಂಬುದನ್ನು ಮರೆತಿರುವ ಜನ, ಆಕೆಯ ಮಾನವೀಯತೆಗೆ, ಸಮಾಜಸೇವೆಗೆ ಫಿದಾ ಆಗಿದ್ದಾರೆ. ಅನಾಥ ಮಕ್ಕಳನ್ನು ದತ್ತು ಪಡೆದು, ತಮ್ಮ ಮಕ್ಕಳಂತೆಯೇ ಸಾಕಿ ಸಲಹಿ, ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಸನ್ನಿ ಲಿಯೋನ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಅವರ ಬಾಲ್ಯ, ಅವರ ಶಿಕ್ಷಣ, ಅವರ ಜೀವನದ ಬಗ್ಗೆ ತಿಳಿಯಲು ಕುತೂಹಲಕಾರಿಯಾಗಿದ್ದಾರೆ. ಇದೀಗ ಅವರ ಬಾಲ್ಯದ ಜೀವನ ಹೇಗಿತ್ತು..? ಕನಸು ಏನಿತ್ತು ಎಂಬ ಆಸಕ್ತಿಕರ ವಿಚಾರಗಳು ಇಲ್ಲಿವೆ.
ಸನ್ನಿ ಲಿಯೋನ್ ಎಲ್ಲರಿಗೂ ಗೊತ್ತಿರುವಂತೆ ಬಡತನದ ಕುಟುಂಬದಲ್ಲಿಯೇ ಹುಟ್ಟಿದವರು. ಅಮೆರಿಕಾ ಹಾಗೂ ಕೆನಡಾ ದೇಶದ ಪೌರತ್ವ ಹೊಂದಿದ್ದಾರೆ. ಅದರ ಜೊತೆಗೆ ಭಾರತೀಯಳು ಕೂಡ. ಸನ್ನಿ ಮನೆಯಲ್ಲಿ ಬಡತನವಿದ್ದರು ಶ್ರೀಮಂತೆಯಾಗಬೇಕೆಂಬ ಕನಸು ಕಂಡವರು. ಓದುವಾಗಲೇ ಪೆಟ್ರೋಲ್ ಬಂಕ್ ಗಳಲ್ಲಿ, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಪೆನ್ಸಿಲ್ ತಯಾರಿಕಾ ಕಂಪನಿಯಲ್ಲೂ ಕೆಲಸ ಮಾಡಿ ಮನೆ ನಿಭಾಯಿಸಿ, ಶಿಕ್ಷಣವನ್ನು ಪಡೆದಿದ್ದಾರೆ ಸನ್ನಿ.
ಬೆಳೆಯುತ್ತಾ ಬೆಳೆಯುತ್ತಾ ವಿಶಿಷ್ಠ ಮಾದಕತೆಯನ್ನು ತುಂಬಿಕೊಂಡ ಸನ್ನಿ, ಗ್ಲಾಮರಸ್ ಲೋಕಕ್ಕೆ ಕಾಲಿಟ್ಟರು. ಆದರೆ ಅಂದುಕೊಂಡ ಸಕ್ಸಸ್ ಆಗಲಿ, ಹೇಳಿಕೊಳ್ಳುವಷ್ಟು ಸಂಭಾವನೆಯಾಗಲಿ ಸಿಗಲಿಲ್ಲ. ಆಮೇಲೆ ಎಂಟ್ರಿ ಕೊಟ್ಟಿದ್ದೆ ಪೋರ್ನ್ ಜಗತ್ತಿಗೆ. ಇಲ್ಲಿ ರಾತ್ರೋ ರಾತ್ರಿ ಫೇಮಸ್ ಆದ ಸನ್ನಿಗೆ ಹಣ, ಹೆಸರು ಎರಡು ಸಿಕ್ಕಿತ್ತು. ಆ ಕಾರಣದಿಂದಾನೇ ಮತ್ತೆ ತಿರುಗಿ ನೋಡಲೇ ಇಲ್ಲ. ಹಲವು ವರ್ಷ ಪೋರ್ನ್ ಜಗತ್ತಿನಲ್ಲಿಯೇ ಆಳಿದ ನಟಿ, ಕೆಲ ವರ್ಷಗಳಿಂದ ಗಂಡ, ಮನೆ, ಮಕ್ಕಳು ಅಂತ ಜವಾಬ್ದಾರಿ ತೆಗೆದುಕೊಂಡು, ಸಮಾಜ ಸೇವೆ ಮಾಡುತ್ತಾ ಒಳ್ಳೆಯ ಹೆಸರು ಪಡೆದಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಎಷ್ಟೋ ಹಳ್ಳಿಗಳಲ್ಲಿ ಬ್ಯಾನರ್ ಹಾಕಿ ವಿಶ್ ಮಾಡುತ್ತಾರೆ.