ಬಿಯರ್‌ ಬೆಲೆ ಮತ್ತೆ ಏರಿಕೆ: ಪ್ರತಿ ಬಾಟಲ್‌ ಗೆ ರೂ.10 ಹೆಚ್ಚಳ; ಆದಾಯ ಹೆಚ್ಚಳಕ್ಕೆ ಸರ್ಕಾರ ಕಂಡುಕೊಂಡ ಹೊಸ ಮಾರ್ಗ

Most read

ಬೆಂಗಳೂರು: ಮೂರು ತಿಂಗಳ ನಂತರ ರಾಜ್ಯ ಸರಕಾರ ಮತ್ತೆ ಬಿಯರ್‌ ಬೆಲೆ ಹೆಚಿಸಿದೆ. ಪ್ರಸ್ತುತ ಬಿಯರ್‌ ಮೇಲೆ ಶೇ.195 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದ್ದು, ಮತ್ತೆ ಹೆಚ್ಚುವರಿಯಾಗಿ ಶೇ. 10ರಷ್ಟು ಅಬಕಾರಿ ಸುಂಕ ವಿಧಿಸಲಾಗಿದೆ. ಈ ಮೂಲಕ ಅಬಕಾರಿ ಸುಂಕ ಶೇ.205ರಷ್ಟು ಹೆಚ್ಚಳವಾಗಿದೆ. ಅಂದರೆ ಪ್ರತಿ ಬಿಯರ್‌ ಬಾಟಲ್‌ ಬೆಲೆ ಕನಿಷ್ಟ 10 ರೂಪಾಯಿ ಹೆಚ್ಚಳವಾಗಲಿದೆ. ಒಂದು ವೇಳೆ ಬಿಯರ್‌ ಬೆಲೆ ದುಬಾರಿಯಾಗಿದ್ದರೆ ಬೆಲೆ ಮತ್ತೂ ಹೆಚ್ಚಲಿದೆ.

ರಾಜ್ಯ ಸರ್ಕಾರ ಸತತ ಮೂರು ವರ್ಷಗಳಿಂದ ಬಿಯರ್‌ ಬೆಲೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಅಬಕಾರಿ ಆದಾಯವನ್ನು ಹೆಚ್ಚಳ ಮಾಡಿಕೊಳ್ಳಲು ಈ ಪ್ರಕ್ರಿಯೆ ಅನಿವಾರ್ಯ ಎನ್ನುವುದು ಸರ್ಕಾರದ ವಾದ. ಬೆಲೆ ಏರಿಕೆಯನ್ನು ಮದ್ಯ ಮಾರಾಟಗಾರರ ಸಂಘ ವಿರೋಧಿಸಿದೆ.

ಮೊದಲು ಬಿಯರ್‌ ಮೇಲೆ ಎರಡು ರೀತಿಯ ತೆರಿಗೆ ವಿಧಿಸಲಾಗುತ್ತಿತ್ತು. ಕಡಿಮೆ ಬ್ರ್ಯಾಂಡ್‌ ಬಿಯರ್‌ ಗಳ ಮೇಲೆ ಪ್ರತಿ ಲೀಟರ್‌ ಬಿಯರ್‌ ಗೆ 130 ರೂಪಾಯಿ ಮತ್ತಿತರ ಬಿಯರ್‌ ಗಳಿಗೆ ಶೇ.ವಾರು ತೆರಿಗೆ ವಿಧಿಸಲಾಗುತ್ತಿತ್ತು. ಈಗ ಈ ಪದ್ದತಿಯನ್ನು ರದ್ದುಗೊಳಿಸಿ ಎಲ್ಲ ಮಾದರಿಯ ಬಿಯರ್ ಮೇಲೆ ಏಕರೂಪದ ಶೇ.205 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ತೆರಿಗೆಯನ್ನು ಸರಳೀಕರಣಗೊಳಿಸಲು ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ.
2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ ಶೇ.185 ರಷ್ಟು ಹೆಚ್ಚಿಸಿತ್ತು. 20 ಜನವರಿ 2025 ರಲ್ಲಿ ಮತ್ತೆ ಶೇ.185 ರಿಂದ ಶೇ. 195 ಅಥವಾ ಪ್ರತಿ ಲೀಟರ್‌ ಗೆ ರೂ.130 ರಷ್ಟು ಹೆಚ್ಚಳ ಮಾಡಿತ್ತು.

ಅಬಕಾರಿ ಇಲಾಖೆಯಿಂದ ಈ ವರ್ಷ ರಾಜ್ಯ ಸರಕಾರ 40 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಬೆಲೆ ಏರಿಕೆ ಕುರಿತು ಅಬಕಾರಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ನಾಗರಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.

More articles

Latest article