ಕರೋನಾ ಸಮಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯೇ ಬಿಬಿಎಂಪಿಯಲ್ಲೂ ಹಗರಣ: ತನಿಖೆ ಆರಂಭಿಸಿದ ಲೋಕಾಯುಕ್ತ!

Most read

ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿಗಳಿಗೆ ಬಿಬಿಎಂಪಿಯ ಕಲ್ಯಾಣ ಇಲಾಖೆಯಿಂದ ಅಕ್ರಮವಾಗಿ ಕೋಟಿ ಕೋಟಿ ಹಣವನ್ನು ವರ್ಗಾವಣೆ ಮಾಡಿರುವ ಘಟನೆ ಕರೋನಾ ಸಮಯದಲ್ಲಿ ನಡೆದಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿ, ಸಹಕಾರಿ ಸಂಘ, ಕೋ-ಆಪರೇಟಿವ್ ಸೊಸೈಟಿಗಳಿಗೆ ಬಸವರಾಜ್‌ ಬೊಮ್ಮಾಯಿ ಸಿಎಂ ಆಗಿದ್ದ ಕರೋನಾ ಸಮಯದಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಸುಮಾರು 102 ಕೋಟಿ ರೂ.ಹಣ ವರ್ಗಾವಣೆ ಆಗಿದೆ ಎಂದು ಲೋಕಾಯುಕ್ತಕ್ಕೆ ದೂರು ಬಂದಿದೆ.

ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಈ ಹಗರಣ ನಡೆದಿದೆ. ಒಟ್ಟು 9 ಹಣಕಾಸು ವಿಭಾಗದ ಅಧಿಕಾರಿಗಳ ವಿರುದ್ದ ದೂರು ದಾಖಲಾಗಿದೆ. ಅಕ್ರಮದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಅಂಗವಿಕಲರು, ವಿಧವೆಯರ ಹೆಸರುಗಳಲ್ಲಿ ಅಕ್ರಮ ಹಣ ದುರ್ಬಳಕೆ ಮಾಡಿರೋದು ಬಯಲಾಗಿದೆ.

ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯಿಂದ ಅಕ್ರಮ ನಡೆಸಿದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಲಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಬಿಬಿಎಂಪಿ ಪಾಲಿಕೆ ವಿಶೇಷ ಆಯುಕ್ತರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿ ಅಧಿಕಾರಿಗಳು, ಸುಬೇಶ್, ಎಸ್.ಎಸ್. ದೇವಕಿ, ಜಿ.ಎನ್. ಸುಬ್ಬರಾಮಯ್ಯ, ಬಿ.ಗಾಯತ್ರಿ, ಎಸ್.ವಿ.ಗಿರಿಯಪ್ಪ, ಕುಮಾರಿ ಕುಸುಮಾ, ಲಿಂಗಣ್ಣ ಗುಂಡಳ್ಳಿ, ಎನ್.ಗೀತಾ, ಸತ್ಯಮೂರ್ತಿ ಎಂದು ತಿಳಿದುಬಂದಿದೆ.

More articles

Latest article