ದೆಹಲಿಯ ಲೋಕಸಭೆಯಲ್ಲಿ ಬೆಂಗಳೂರಿನ ಧ್ವನಿಯಾಗಿ ಹೋರಾಡುತ್ತೇನೆ: ಪ್ರೊ.ಎಂ.ವಿ.ರಾಜೀವ್ ಗೌಡ

Most read

ಬೆಂಗಳೂರು : ಕಳೆದ ಹತ್ತು ವರ್ಷಗಳಿಂದ ದೆಹಲಿಗೆ ಗೆದ್ದು ಹೋಗಿ ಕಾಲ ಹರಣ ಮಾಡಿ ಬೆಂಗಳೂರು ನಗರದ ಜನಗಳನ್ನು ವಂಚಿಸಿರುವ ಬಿಜೆಪಿ ಸಂಸದರಿಗೆ ಇಲ್ಲಿನ ಜನರ ಬದುಕು ಬವಣೆಗಳ ಕುರಿತು ಯಾವುದೇ ಆಸಕ್ತಿಯಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದು ದೆಹಲಿಗೆ ಹೋದರೆ ಅಭೀವೃದ್ದಿಪರ ಬೆಂಗಳೂರಿಗಾಗಿ ಹೋರಾಡುತ್ತೇನೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ಎಂವಿ.ರಾಜೀವ್ ಗೌಡ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಇಂದು ಉತ್ತರ ಲೋಕಸಭಾ ಕ್ಷೇತ್ರದ ವಿವಿಧೆಡೆ ಮನೆ ಮನೆಗಳಿಗೆ ತೆರಳಿ ಪ್ರೊ.ಎಂ.ವಿ.ರಾಜೀವ್ ಗೌಡ ತಮ್ಮ ಪರವಾಗಿ ಮತ ಯಾಚಿಸಿದರು. ತಾವು ಭೇಟಿ ಕೊಟ್ಟ ಮನೆಗಳಲ್ಲಿ ಕೂತು ಮತದಾರರ ಬಳಿ ವಿವಿಧ ಆಯಾಮಗಳನ್ನು ಚರ್ಚಿಸಿರುವ ಪ್ರೊ.ರಾಜೀವ್ ಗೌಡ, ಕೇಂದ್ರ ಬಿಜೆಪಿ ಸರ್ಕಾರ ಬೆಂಗಳೂರಿನ ಅಭೀವೃದ್ದಿ ವಿಚಾರದಲ್ಲಿ ಮಾಡಿರುವ ಹತ್ತು ಹಲವು ಪ್ರಮಾದಗಳನ್ನು ಉಲ್ಲೇಖಿಸಿದ್ದಾರೆ.

ಕನ್ನಡ ನಾಡು ಮತ್ತು ಕನ್ನಡ ನಾಡಿಗೆ ಕೇಂದ್ರದ ಬಿಜೆಪಿ ಸರ್ಕಾರ ಹೆಜ್ಜೆ ಹಜ್ಜೆಗೂ ಮಾಡಿರುವ ವಂಚನೆಗಳನ್ನು ತಿಳಿಸಿದರು. ಇಲ್ಲಿಂದ ಲೋಕಸಭೆಗೆ ಗೆದ್ದು ಹೋಗಿದ್ದ ಬಿಜೆಪಿ ಸಂಸದರರಲ್ಲಾ ಕನ್ನಡ ನಾಡಿಗೆ ಆಗಿರುವ ಅನ್ಯಾಯ ಮತ್ತು ಮೋಸದ ವಿರುದ್ದ ಇದುವರೆಗೂ ಎಲ್ಲಿಯೂ ಮಾತನಾಡಿಲ್ಲ. ಬೆಂಗಳೂರು ನಗರಕ್ಕೆ ಶಾಶ್ವತವಾಗಿ ನೀರುಣಿಸುವ ನಮ್ಮ ಯೋಜನೆಯಾಗಿರುವ ಮೇಕೆದಾಟು ಯೋಜನೆಗೆ ಕಾನೂನು ತೊಡಕು ಉಂಟು ಮಾಡಿರುವ ಕೇಂದ್ರ ಸರ್ಕಾರ,ಗಾರ್ಮೆಂಟ್ ಮತ್ತು ಇತರೆ ದಿನಗೂಲಿ ಹಾಗೂ ವಲಸೆ ಕಾರ್ಮಿಕರ ಸೇವಾ ಭದ್ರತೆ ವಿಚಾರದಲ್ಲಿ ಗಾಢ ಮೌನ ವಹಿಸಿ ದುಡಿಯುವ ವರ್ಗದ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದರು.

ಅತಿ ಹೆಚ್ಚು ಕಾರ್ಮಿಕರೇ ವಾಸಿಸುವ, ಮಧ್ಯಮ ವರ್ಗದವರೇ ಆಶ್ರಯಿಸಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನವಸತಿ ಪ್ರದೇಶಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಾವೊಂದು ರೀತಿಯಲ್ಲಿಯೂ ಸಹಕರಿಸಿಲ್ಲ. ಸುಗಮ ರಸ್ತೆ ಸಂಚಾರದ ಜೊತೆಗೆ ಬಹು ನಿರೀಕ್ಷಿತ ಅರ್ಬನ್ ಮೆಟ್ರೋ ವಿಚಾರದಲ್ಲಿಯೂ ಕೇಂದ್ರದ ಬಿಜೆಪಿ ಸರ್ಕಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ನಿಮ್ಮ ಕಣ್ಣ ಮುಂದೆಯೇ ಇದೆ. ವಸತಿ, ನೀರು ಮತ್ತು ಉದ್ಯೋಗದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಅಭೀವೃದ್ದಿಪಡಿಸಲು ಕೂಡ ಉತ್ಸಾಹ ತೋರದ ಬಿಜೆಪಿ ಪಕ್ಷದ ಮಾತಿಗೆ ಮತ್ತೆ ಮರುಳಾಗಬೇಡಿ ಎಂದು ಮತದಾರರಲ್ಲಿ ಅರಿವು ಮೂಡಿಸಲು ಪ್ರೊ.ರಾಜೀವ್ ಗೌಡ ಪ್ರಯತ್ನಿಸಿದರು.

ಸತತ ಹತ್ತು ವರ್ಷಗಳ ಕಾಲ ಶಾಸಕರನ್ನು, ಸಂಸದರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ, ಜನಪರ ಸರ್ಕಾರಗಳನ್ನು ಬೀಳಿಸಿ ಸರ್ವಾಧಿಕಾರದ ಕನಸು ಕಾಣುತ್ತಿರುವ ಬಿಜೆಪಿ ನಾಯಕರಿಂದ ದೇಶದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಮತದಾರರ ಮೇಲಿರುವ ಹಿನ್ನೆಲೆಯಲ್ಲಿ, ನನ್ನನು ಗೆಲ್ಲಿಸಿ ಎಂದು ಮನವಿ ಮಾಡಿರುವ ಪ್ರೊ.ರಾಜೀವ್ ಗೌಡ, ಉದ್ಯಮಶೀಲತೆ ಮತ್ತು ಬಂಡವಾಳ ಹೂಡಿಕೆಯ ಜೊತೆಗೆ ಪರಿಸರ ಸಂರಕ್ಷಣೆಯ ಕುರಿತಾಗಿ ವಿಶೇಷ ಆಸಕ್ತಿ ವಹಿಸುವ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ನಾನು ಬದ್ದನಾಗಿದ್ದೇನೆ ಎಂದು ಬೆಂಗಳೂರು ನಗರದ ಅಭೀವೃದ್ದಿಯ ಕುರಿತಾಗಿ ತಮ್ಮ ನಿಲುವನ್ನು ಪ್ರೊ.ರಾಜೀವ್ ಗೌಡ ಖಚಿತಪಡಿಸಿದರು.

ಈ ಸಂಧರ್ಭದಲ್ಲಿ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಗೆಲುವ ಖಚಿತ ಎಂದಿರುವ ಪ್ರೊ.ರಾಜೀವ್ ಗೌಡ, ನೆಮ್ಮದಿಯ ಬೆಂಗಳೂರಿಗಾಗಿ ‘ಟೀಂ ಬೆಂಗಳೂರು’ ಮೂಲಕ ಬೆಂಗಳೂರು ನಗರ ವಾಸಿಗಳಿಗೆ ನೀಡಿರುವ ಭರವಸೆಗಳನ್ನೆಲ್ಲಾ ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಪ್ರೊ‌.ರಾಜೀವ್ ಗೌಡ ಭರವಸೆ ನೀಡಿದರು.

More articles

Latest article