Saturday, July 27, 2024

ಬಾಬಾ ಬುಡನ್‌ಗಿರಿ ಧ್ವಂಸ ಪ್ರಕರಣ: ಆರೋಪಿಗಳು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು

Most read

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನಗಿರಿ ಅಥವಾ ದತ್ತ ಪೀಠದ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

2017 ರ ಡಿಸೆಂಬರ್ 3 ರಂದು ಧ್ವಂಸ ಘಟನೆಗೆ ಸಂಬಂಧಿಸಿದ್ದಂತೆ, ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.

2017ರ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದತ್ತ ಪೀಠದ ಸಮಾಧಿ ಧ್ವಂಸ ಕೃತ್ಯ ನಡೆದಿತ್ತು. ದತ್ತ ಜಯಂತಿ ವೇಳೆ ವಿವಾದ ಉಂಟಾಗಿ ಹಿಂದೂ ಕಾರ್ಯಕರ್ತರು ದತ್ತ ಪೀಠದಲ್ಲಿದ್ದ ಪವಿತ್ರ ‘ಘೋರಿ’ಗಳನ್ನು ಒಡೆದಿದ್ದರು. ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ಸರ್ಕಾರ ಸಮ್ಮತಿ ನೀಡಿತ್ತು.

2023ರ ಅಕ್ಟೋಬರ್ 24ರಂದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳು ದತ್ತಪೀಠದಲ್ಲಿರುವ ಸಮಾಧಿಯನ್ನು ಕೆಡವಲು ಯತ್ನಿಸಿದ ಹಾಗೂ ಪೊಲೀಸ್ ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾರೆ.

ಐಸಿಪಿ ಸೆಕ್ಷನ್ 143, 447, 298, 504, 153 ಎ, 295 ಎ, 353, 506, 114, 120 ಬಿ ರೀಡ್ ವಿಥ್ 149 ಮತ್ತು ಸೆಕ್ಷನ್ 3 ರ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ 1984 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

1991ರ ಪ್ರಕರಣವೊಂದರಲ್ಲಿ ಕರಸೇವಕರ ಬಂಧನದ ನಂತರ ದತ್ತ ಪೀಠದ ಪ್ರಕರಣದ ವಿಷಯವಾಗಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿರುವುದು ಈಗ ರಾಜ್ಯದಲ್ಲಿ ಮತ್ತೊಂದು ದೊಡ್ಡ ಚಚ್ಚೆಯಾಗುತ್ತಿದೆ. ಹಿಂದೂ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಲು ಪ್ರಕರಣಗಳನ್ನು ಮತ್ತೆ ತೆರೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಪ್ರಕರಣದ ಕಾನೂನು ಪ್ರಕ್ರಿಯೆಗಳ ಭಾಗವಾಗಿ ಬೆಳವಣಿಗೆಯಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

More articles

Latest article