ಆಯುಷ್ಮಾನ್ ಭಾರತ್ ವಂಚನೆ ಪ್ರಕರಣ: ಜಾರ್ಖಂಡ್, ದೆಹಲಿಯಲ್ಲಿ ಇ.ಡಿ ದಾಳಿ

Most read

ರಾಂಚಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರ್ಖಂಡ್, ದೆಹಲಿ ಮತ್ತು ಪಶ್ಚಿಮ ಬಂಗಾಳದ 21 ಸ್ಥಳಗಳ ಮೇಲೆ ಇಂದು  ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್‌ನ ಮಾಜಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರ ಖಾಸಗಿ ಕಾರ್ಯದರ್ಶಿ ಕಚೇರಿ, ಜಾರ್ಖಂಡ್‌ ರಾಜ್ಯ ಆರೋಗ್ಯ ಸೊಸೈಟಿ (ಜೆಎಸ್ಎಸ್) ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ.

ರಾಂಚಿಯ ಅಶೋಕ್ ನಗರ, ಬರಿಯಾಟು ಮತ್ತು ಜೆಮ್‌ಶೆಡ್‌ಪುರದಲ್ಲಿನ ಕೆಲವು ಮನೆಗಳು ಮತ್ತು ನರ್ಸಿಂಗ್ ಹೋಂಗಳ ಮೇಲೆಯೂ ಇ.ಡಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಕೋಲ್ಕತ್ತದಲ್ಲಿ ಕೆಲವು ಎಂಟ್ರಿ ಆಪರೇಟರ್‌ಗಳು ಮತ್ತು ಹವಾಲಾ ಡೀಲರ್‌ಗಳ ಕಚೇರಿಗಳಲ್ಲಿಯೂ ಶೋಧ ನಡೆಸಲಾಗಿದೆ. ಆಯುಷ್ಮಾನ್ ಭಾರತ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ದೇಶದ ನಾಗರಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.

More articles

Latest article