ಲೆಬನಾನ್ ಮೇಲೆ ದಾಳಿ ಮುಂದುವರೆಯುತ್ತದೆ : ಬೆಂಜಮಿನ್ ನೆತನ್ಯಾಹು

ಇದುವರೆಗೂ ಲೆಬನಾನ್ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

ಜೆರುಸಲೆಮ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ನಿಲ್ಲಿಸುವುದಾಗಿ ಘೋಷಿಸಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬುಧವಾರ ಈ ನಿರ್ಧಾರವನ್ನು ಪ್ರಕಟಿಸಿದೆ. ಆದರೆ ಈ ಸಂಧಾನ ಒಪ್ಪಂದವು ಲೆಬನಾನ್ ಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸುವುದರ ಮೂಲಕ ಮಧ್ಯಪ್ರಾಚ್ಯದ ಬಿಕ್ಕಟ್ಟು ಇನ್ನಷ್ಟು ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಇಸ್ರೇಲ್ ಅಧ್ಯಕ್ಷರು, ಟ್ರಂಪ್ ಅವರ ಪ್ರಯತ್ನಗಳನ್ನು ಬೆಂಬಲಿಸುತ್ತಾರೆ. ಇರಾನ್ ಇನ್ನು ಮುಂದೆ ಅಮೆರಿಕ, ಇಸ್ರೇಲ್, ಇರಾನ್ನ ಅರಬ್ ನೆರೆಯ ದೇಶಗಳು ಮತ್ತು ಪ್ರಪಂಚಕ್ಕೆ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಯಾಗಿ ಉಳಿಯದಂತೆ ನೋಡಿಕೊಳ್ಳುವುದು ನಮ್ಮ ಗುರಿ ಎಂದು ತಿಳಿಸಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಆರಂಭದಲ್ಲಿ ಅಮೆರಿಕ, ಇರಾನ್ ಮತ್ತು ಅವರ ಮಿತ್ರ ದೇಶಗಳ ನಡುವೆ ತಕ್ಷಣದ ಸಂಧಾನದ ಒಪ್ಪಂದವಾಗಿದೆ. ಇದು ಲೆಬನಾನ್ ಸೇರಿದಂತೆ ಎಲ್ಲೆಡೆ ಅನ್ವಯವಾಗುತ್ತದೆ ಎಂದು ಘೋಷಿಸಿದ್ದರು. ಆದರೆ ನೆತನ್ಯಾಹು ಅವರ ಹೇಳಿಕೆಯು ಇದಕ್ಕೆ ವಿರುದ್ಧವಾಗಿದ್ದು, ಎರಡು ವಾರಗಳ ಕದನ ವಿರಾಮ ಲೆಬನಾನ್ಗೆ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಾಮೆನಿ ಅವರನ್ನು ಫೆಬ್ರವರಿ 28 ರಂದು ಹತ್ಯೆ ಮಾಡಿದ ನಂತರ ಮಾರ್ಚ್ 2ರಂದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ನಡೆಸಿತು. ಇದರ ಪರಿಣಾಮವಾಗಿ ಲೆಬನಾನ್ನಲ್ಲಿ ಸಂಘರ್ಷ ತೀವ್ರಗೊಂಡಿತು. ನವೆಂಬರ್ 2014ರಲ್ಲಿ ಲೆಬನಾನ್ನಲ್ಲಿ ಕದನವಿರಾಮ ಒಪ್ಪಂದವಾಗಿದ್ದರೂ, ಅದನ್ನು ಇಸ್ರೇಲ್ ಪದೇ ಪದೇ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಇಸ್ರೇಲ್ ಲೆಬನಾನ್ ದಕ್ಷಿಣ ಭಾಗದಲ್ಲಿ ಭೂಸೇನೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಬಫರ್ ಜೋನ್ ರಚಿಸುವ ಉದ್ದೇಶ ಹೊಂದಿದೆ. ಈ ದಾಳಿಗಳಲ್ಲಿ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 10ಲಕ್ಷಕ್ಕೂ ಹೆಚ್ಚು ಜನರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ನಿಲುವಿನ ಕುರಿತು ಹಿಜ್ಬುಲ್ಲಾ ಅಥವಾ ಲೆಬನಾನ್ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇಸ್ರೇಲ್ ನಿಲುವು ಮಧ್ಯಪ್ರಾಚ್ಯದಲ್ಲಿ ಶಾಂತಿಸ್ಥಾಪನೆಯ ನಿಟ್ಟಿನಲ್ಲಿ ದೊಡ್ಡ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಲೆಬನಾನ್ ಮೇಲಿನ ಇಸ್ರೇಲ್ ದಾಳಿಗಳು ಮುಂದುವರೆಯುವ ಸಾಧ್ಯತೆಯು ಈ ಭಾಗದ ಶಾಂತಿಗೆ ಹೊಸ ಸವಾಲುಗಳನ್ನು ತಂದೊಡ್ದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

More articles

Latest article

Most read