ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ವಿಚಾರವಾಗಿ ನಾಸಾ ಒಂದು ಆತಂಕಕಾರಿ ಸಂಗತಿ ಹೊರಹಾಕಿದೆ. ಹತ್ತು ದಿನಗಳ ಕಾರ್ಯಾಚರಣೆಗಾಗಿ ಜೂನ್ 6 ರಂದು ತಮ್ಮ ಸಹ ಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ವಿಲಿಯಮ್ಸ್, ಬೋಯಿಂಗ್ ಸ್ಟಾರ್ ಲೈನರ್ ನ ತಾಂತ್ರಿಕ ದೋಷದಿಂದಾಗಿ, ನಿಗದಿತ ಸಮಯದಲ್ಲಿ ಹಿಂತಿರುಗಲು ಸಾಧ್ಯವಾಗಿದೆ ಮುಂದಿನ ವರ್ಷ ಅಂದರೆ ಫೆಬ್ರವರಿ 2025 ರ ವರೆಗೂ ಅಂತರಿಕ್ಷ ಯಾನ ವಿಸ್ತರಣೆ ಗೊಂಡಿದ್ದು ಅವರು ಭೂಮಿಗೆ ಮರಳಿ ಬರಲು ಇನ್ನೂ ಮೂರು ತಿಂಗಳು ಕಾಯಬೇಕಿದೆ, ಈಗಾಗಲೇ ಆರು ತಿಂಗಳುಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ (ISS) ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ.
ಈ ನಡುವೆ ಸುನಿತಾ ವಿಲಿಯಮ್ಸ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಸುನೀತಾ NASA ಗೆ ಕಳುಹಿಸಿರುವ ಫೋಟೋ ಮತ್ತು ವಿಡಿಯೋಗಳಿಂದ ಈ ಸಂಗತಿ ದೃಢಪಟ್ಟಿದೆ. ಖ್ಯಾತ ಶ್ವಾಸಕೋಶ ತಜ್ಞರ ಪ್ರಕಾರ ಸುನೀತಾ ವಿಲಿಯಮ್ಸ್ ಶೂನ್ಯ ಗುರುತ್ವಾಕರ್ಷಣ ವಲಯದಲ್ಲಿರುವ ಕಾರಣ, ತೀವ್ರವಾಗಿ ತೂಕ ಕಳೆದುಕೊಂಡಿದ್ದು, ಸ್ನಾಯು, ಹಾಗು ಮೂಳೆ ಸಂಬಂಧಿ ತೊಂದರೆ ಯಿಂದ ಬಳಲುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಅವಶ್ಯಕತೆ ಇರುತ್ತದೆ, ಪ್ರತಿ ದಿನ ಅವರ ದೇಹಕ್ಕೆ 3500 ಕ್ಯಾಲೋರಿ ಅವಶ್ಯಕತೆ ಇದ್ದು ಬಾಹ್ಯಾಕಾಶದಲ್ಲಿ ಅದನ್ನು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ, ಪುರುಷರಿಗೆ ಹೋಲಿಸಿದರೆ ಬಾಹ್ಯಾಕಾಶದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಮಾ ಪ್ರಮಾಣ ಕಳೆದುಕೊಳ್ಳುವ ಕಾರಣ ಈ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ “ನಮಗೆ ಗಗನಯಾತ್ರಿಗಳ ಆರೋಗ್ಯ ಅತ್ಯಂತ ಮುಖ್ಯ” ಎಂದು ಹೇಳಿರುವ “NASA” ಸುನಿತಾ ವಿಲಿಯಮ್ಸ್,ಹಾಗು ಬುಚ್ ವಿಲ್ಮೋರ್ ಅವರು ಕ್ಷೇಮವಾಗಿ ಹಿಂದಿರುಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಪಂಚದ ಅತ್ಯುನ್ನತ ತಜ್ಞ ವೈದ್ಯರು ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.
ಸದ್ಯ ಭೂಮಿಯಿಂದ ಸುಮಾರು 260 ಮೈಲಿ ಎತ್ತರದಲ್ಲಿನ ಬಾಹ್ಯಾಕಾಶ ನಿಲ್ದಾಣ ISS ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುನೀತಾ ವಿಲಿಯಮ್ಸ್ ಕ್ಷೇಮವಾಗಿ ಆರೋಗ್ಯವಾಗಿ ಭೂಮಿಗೆ ಹಿಂದಿರುಗಲಿ.
– ಮಂಜು ಚಿನ್ಮಯ್