ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ರೈತರ ‘ದೆಹಲಿ ಚಲೋ’ ಮೆರವಣಿಗೆಗೆ ಬೆಂಬಲ ನೀಡಿದ್ದು, ‘ಅನ್ನದಾತ’ರನ್ನು ಜೈಲಿಗೆ ಹಾಜಲು ದೆಹಲಿಯ ಬವಾನಾ ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಎಎಪಿ ಹೇಳಿಕೆ ನೀಡಿದೆ.
ಫೆಬ್ರವರಿ 13 ರಂದು ರೈತರ ಮೆರವಣಿಗೆಯಲ್ಲಿ ಬಂಧಿತರಾದ ಪ್ರತಿಭಟನಾಕಾರರಿಗೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲು ಎಂದು ಪರಿವರ್ತಿಸಿ ಅವರನ್ನು ಬಂಧಿಸಿಡಲು ಸೋಮವಾರ ಕೇಂದ್ರವು ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದೆ.
ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಶಾಂತಿಯುತ ಪ್ರದರ್ಶನವು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು. ರೈತರು ಈ ದೇಶದ ಅನ್ನದಾತರಾಗಿದ್ದು, ‘ಅನ್ನದಾತ’ರನ್ನು ಜೈಲಿಗೆ ಹಾಕೊದು ತಪ್ಪು ಎಂದು ಎಎಪಿ ಹೇಳಿದೆ.
ಏತನ್ಮಧ್ಯೆ, ಮಂಗಳವಾರ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ರೈತರ ‘ದೆಹಲಿ ಚಲೋ’ ಮೆರವಣಿಗೆಯನ್ನು ತಡೆಯಲು ಗಡಿ ಬಿಂದುಗಳಲ್ಲಿ ಬಹು-ಪದರದ ಬ್ಯಾರಿಕೇಡ್‌ಗಳು, ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‌ಗಳ ಗೋಡೆಗಳೊಂದಿಗೆ ದೆಹಲಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ .