ಮಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯು ಪುತ್ತಿಲ ಅವರ ಸೇರ್ಪಡೆಗೆ ಗಡವು ವಿಧಿಸಿದೆ ಮತ್ತು ಕೆಲವೊಂದು ಷರತ್ತುಗಳನ್ನು ಬಿಜೆಪಿಯ ಮುಖಂಡರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದ್ದರಿಂದ ಚುನಾವಣೆಯ ನಂತರ ಹುಟ್ಟುಹಾಕಿರುವ ತಮ್ಮ ʼಪುತ್ತಿಲ ಪರಿವಾರʼದ ಸಭೆ ಕರೆದು ಅಂತಿಮ ತೀರ್ಮಾನದ ಬಗ್ಗೆ ನಿರ್ಣಾಯ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಭೆಯಲ್ಲಿ ಪುತ್ತಿಲ ಅವರ ಅಭಿಮಾನಿಗಳು ಹಾಗು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇವರೆಲ್ಲರ ಅಭಿಪ್ರಾಯ ಪಡೆದು ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ ಮುಖ್ಯ ನಿರ್ಣಾಯ ಕೈಗೊಳ್ಳಲಿದ್ದಾರೆ.
ಬಿಜೆಪಿಯ ಕೆಲವು ನಾಯಕರು, ಪುತ್ತಿಲ ಪರಿವಾರವನ್ನು ವಿಸರ್ಜಿಸಿದರೆ ಮಾತ್ರ ಪಕ್ಷಕ್ಕೆ ಬನ್ನಿ ಷರತ್ತು ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯ ಬಗ್ಗೆ ತಮ್ಮ ಅಭಿಮಾನಿಗಳಲ್ಲಿ ಭಿನ್ನಭಿಪ್ರಾಯವಿದೆ ಜೊತೆಗೆ ಲೋಕಸಭಾ ಚುನಾವಣೆಗೆ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಹಲವು ಹೇಳಿದ್ದಾರೆ ಎಂದರು.