ಪಾಕಿಸ್ತಾನ ದಂಪತಿಗಳ ಬಂಧನ: ತೀವ್ರಗೊಂಡ ವಿಚಾರಣೆ

ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನದ ನಂತರ ಹಲವು ತನಿಖಾ ಏಜೆನ್ಸಿಗಳು ವಿಚಾರಣೆ ತೀವ್ರಗೊಳಿಸಿವೆ.

ಪಾಕ್‌ ಪ್ರಜೆ ರಶೀದ್‌ ಅಲಿ ಸಿದ್ದಿಕಿ, ಪತ್ನಿ ಆಯೇಷಾ ಹನೀಫ್‌ ಅವರನ್ನು ನಿನ್ನೆ ರಾತ್ರಿಯಿಂದ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ನಿನ್ನೆ ರಾತ್ರಿಯಿಂದ ಐಬಿ (ಇಂಟಲಿಜೆನ್ಸ್ ಬ್ಯೂರೋ) ಮತ್ತು ಎನ್‌ ಐಎ ಅಧಿಕಾರಿಗಳು ಜಿಗಣಿ ಠಾಣೆ ಪೊಲೀಸರ ವಶದಲ್ಲಿರುವ ರಶೀದ್‌, ಆಯೇಷಾ ದಂಪತಿಗಳನ್ನು ವಿಚಾರಣೆ ನಡೆಸಿದರು.

ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳನ್ನು ಇಡಲಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಬಂಧಿತರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ, ಐಎಸ್ ಐ ಜೊತೆ ಸಂಪರ್ಕ ಇದೆಯೇ? ಅವರು ನಿಷೇಧಿತ ಸಂಘಟನೆ ಜೊತೆ ಹಣಕಾಸಿನ ವ್ಯವಹಾರ ಹೊಂದಿದ್ದಾರಾ? ಭಾರತದಲ್ಲಿ ಪಾಸ್‌ ಪೋರ್ಟ್‌ ಸೇರಿ ದಾಖಲೆಗಳು ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ.

More articles

Latest article

Most read