ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ: SFI ಒತ್ತಾಯ

Most read

ಗಜೇಂದ್ರಗಡ ನಗರದ ಹೋರಭಾಗದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯಕ್ಕೆ ಸುತ್ತ ಮುತ್ತ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ ಆದರೆ ಇಲ್ಲಿ ಬಸ್ ವ್ಯವಸ್ಥೆ ಇಲ್ಲ, ಹಾಗಾಗಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ನಗರದ KSRTC ಡಿಪೋ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಿ ಮಾನ್ಯ ಶಾಖಾ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲ್ಲಾ ಉಪಾಧ್ಯಕ್ಷರು ಚಂದ್ರು ರಾಠೋಡ ಮಾತನಾಡಿ, ಗಜೇಂದ್ರಗಡ ನಗರವು ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ನೂರಾರು ಗ್ರಾಮಿಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯಲು ಬರುತ್ತಾರೆ ಆದರೆ ಅವರಿಗೆ ಸರಿಯಾಗಿ ಕಾಲೇಜಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ, ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಹಾಗಾಗಿ ಇಂತಹ ಸುಮಾರು ಸಮಸ್ಯೆಗಳು ಇದೆ. ಇವುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು.

ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರು, ಸಂಘಟನೆ ಮುಖಂಡರಾದ ಪ್ರದೀಪ್ ಮಾದರ, ಅನಿಲ ರಾಠೋಡ, ವಿಕಾಸ್ ರಮಣಿ, ಮಹಮ್ಮದ್ ರಫಿ ಕೊಲ್ಕಾರ್ ಫಾರುಕ್ ನೀಲೋಗಲ್, ಮಹೇಶ್, ನವಿನ ತಳವಾರ, ಸಚ್ಚಿದಾನಂದ ವಿಶ್ವನಾಥ್ ಶಿರಹಟ್ಟಿ ವಿನಾಯಕ ಚಕ್ರಸಾಲಿ ಶ್ರಿಶಾಂಕ್ ಉಪ್ಪಾರ ಶ್ರಿಕಾಂತ, ಸಿದ್ದಯ್ಯ, ಪವನ್ ಶಶಿಧರ, ಮುತ್ತಪ್ಪ, ಮಲ್ಲಿಕಾರ್ಜುನ, ಉಮೇಶ್ ಮಂಜುನಾಥ ಹಾಗೂ ವಿದ್ಯಾರ್ಥಿ ಮುಖಂಡರು ಇದ್ದರು‌.

More articles

Latest article