ದೆಹಲಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಪಕ್ಷದ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಲು ಅನುಭವಿಸಿದ್ದಾರೆ. ಆದರೆ ಕಲ್ಕಾಜಿ ಕ್ಷೇತ್ರದಿಂದ ಮುಖ್ಯಮಂತ್ರಿ ಆತಿಶಿ ಗೆಲುವು ಸಾಧಿಸಿದ್ದಾರೆ.
ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 3,182 ಮತಗಳ ಅಂತರದಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.
ಜಂಗ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮನೀಶ್ ಸಿಸೋಡಿಯಾ, ಪಕ್ಷದ ಕಾರ್ಯಕರ್ತರು ಚೆನ್ನಾಗಿ ಹೋರಾಟ ಮಾಡಿದ್ದಾರೆ. ನಾವೆಲ್ಲರೂ ಶ್ರಮಿಸಿದ್ದೇವೆ. ಜನರು ನಮ್ಮನ್ನು ಬೆಂಬಲಿಸಿದ್ದಾರೆ. ನಾನು 600 ಮತಗಳಿಂದ ಸೋತಿದ್ದೇನೆ. ನಾನು ಗೆದ್ದ ಅಭ್ಯರ್ಥಿಯನ್ನು ನಾನು ಅಭಿನಂದಿಸುತ್ತೇನೆ. ಅವರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಸಿಎಂ ಆತಿಶಿ ವಿರುದ್ಧ ಪರಾಭವ ಹೊಂದಿದ್ದಾರೆ. ತಮ್ಮ ಸೋಲು ಕುರಿತು ನಾನು ಕಲ್ಕಾಜಿ ಕ್ಷೇತ್ರ ಮತ್ತು ದೆಹಲಿಯ ಜನರಿಗೆ ಧನ್ಯವಾದ ಹೇಳುತ್ತೇನೆ. ನನ್ನ ತೀರ್ಪು ಜನ ಬರೆದಿದ್ದಾರೆ. ಫಲಿತಾಂಶ ಏನೇ ಬಂದರೂ ಚುನಾವಣೆಯಲ್ಲಿ ಎತ್ತಿದ ಸಮಸ್ಯೆಗಳ ಬಗ್ಗೆ ಹೋರಾಟ ಮುಂದುವರಿಸುತ್ತೇವೆ. ನಾನು ನನ್ನ ಜೀವನದಲ್ಲಿ ನೋಡಿದ ಅತಿ ದೊಡ್ಡ ಸುಳ್ಳುಗಾರ ಕೇಜ್ರಿವಾಲ್. ನವದೆಹಲಿಯಲ್ಲಿ ಬೀಳುವ ಎಎಪಿಯ ಮೊದಲ ‘ವಿಕೆಟ್’ ಕೇಜ್ರಿವಾಲ್‌ರದ್ದು ಎಂದಿದ್ದಾರೆ.