ನನ್ನ ತಮ್ಮ ಆಗಲಿ ಬೇರೆ ಯಾರೆ ಆಗಲಿ ಪಾಕ್‌ ಜಿಂದಾಬಾದ್‌ ಅಂತ ಕೂಗಿದ್ರೂ ಶಿಕ್ಷೆಯಾಗಬೇಕು : ಸಚಿವ ಸಂತೋಷ್‌ ಲಾಡ್‌

Most read

ಮೈಸೂರು: ಅವರು ಯಾಕೆ ಪಾಕ್‌ ಜಿಂದಾಬಾದ್‌ ಎಂದು ಕೂಗುತ್ತಿದ್ದಾರೆ ಎಂಬುದಕ್ಕೆ ನೂರಾರು ಕಾರಣಗಳಿವೆ. ಅವರ ಮೇಲೆ ಅತ್ಯಾಚಾರಗಳು ಆಗಿಲ್ವಾ?, ಶೋಷಣೆಯಾಗಿಲ್ವಾ? ಅದನ್ನೂ ನಾವು ನೋಡಬೇಕು ತಾನೇ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪ್ರಶ್ನಿಸಿದರು.

ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ನಾನಾ ಭಾಗಗಳಲ್ಲೂ ಸಹ ಇಂತಹ  ದುರ್ಘಟನೆಗಳು ಈಗಲೂ ನಡೆಯುತ್ತಿವೆ.  ಅವುಗಳು ಯಾಕೆ ನಡೆಯುತ್ತಿವೆ ಎಂಬುದಕ್ಕೆ ನಾನು ಜವಾಬ್ದಾರನಲ್ಲ, ಅದಕ್ಕೆ ಹೊಣೆಗರನೂ ಅಲ್ಲ. ನಾನು ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿ ಹೇಳಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

“ಹಾಗಂತ ನಾನು ಪಾಕಿಸ್ತಾನಕ್ಕೆ ಸರ್ಪೋಟ್‌ ಮಾಡುತ್ತಿಲ್ಲ, ಪಾಕಿಸ್ತಾನ್‌  ಜಿಂದಾಬಾದ್ ಎಂದು ಕೂಗುವವರನ್ನು ಬೆಂಬಲಿಸುವುದಿಲ್ಲ. ನನ್ನ ತಮ್ಮನೇ ಆ ಕೂಗು ಕೂಗಿದರೂ ಅವನ ಮೇಲೆ ಕ್ರಮ ಆಗಬೇಕು. ಹಾಗೆಯೇ ಯಾರಾದರೂ ಸಹ ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು. 

ಯಾವುದೆ ವಿಷಯಗಳು ಇವತ್ತಿನ ಪರಿಸ್ಥಿತಿಯಲ್ಲಿ ವಿಷಯಗಳು ಡೈವರ್ಟ್ ಆಗಬಾರದು ಮತ್ತು ಇತ್ತಿಚೀನ ದಿನಗಳಲ್ಲಿ ತಪ್ಪು ಸಂದೇಶಗಳು ಹೆಚ್ಚು ಜನರನ್ನು ತಲುಪುತ್ತಿವೆ. ಇತಂಹ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಿರಿ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. 1971ರಲ್ಲಿ ಇಂದಿರಾಗಾಂಧಿಯವರು ಪಾಕಿಸ್ತಾನದವರನ್ನು ಮಂಡಿಯೂರಿಸಿದ್ರು. ಈಗ ಲಕ್ಷಾಂತರ ಜನರನ್ನು ಮಂಡಿಯೂರಿಸಬೇಕಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಗಳು ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳಿಗೆ ನಮ್ಮ ಬೆಂಬಲ ಇದೆ. ಅಮಿತ್ ಶಾ ಅವರು ನನಗೆ ಸಿಕ್ಕಾಗ ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆಯಬೇಕು ಎಂದು ನಾನು ಹೇಳಿದ್ದೇನೆ. ಈಗಲೂ ಅದನ್ನೇ ನಾನು ಹೇಳುತ್ತೇನೆ ಅದರಲ್ಲಿ ಎರಡು ಮಾತಿಲ್ಲ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಭಿನ್ನತೆ ಇಲ್ಲ ಮತ್ತು ಯಾವುದೇ ಕಾರಣಕ್ಕೂ ಸಹ ಈ ಅಭಿಪ್ರಾಯ ಬದಲಾಗುವುದಿಲ್ಲ ಎಂದರು.

More articles

Latest article