ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ವಿಚಾರ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಾಗಿ ಇವರಿಬ್ಬರ ಮದುವೆಯ ವಿಚಾರವೇ ಸುದ್ದಿಯಾಗಿದ್ದು ಜಾಸ್ತಿ. ಇಬ್ಬರು ಈ ವರ್ಷ ಮದುವೆಯಾಗ್ತಾರೆ ಅಂತ ಪ್ರತಿ ವರ್ಷವೂ ಸುದ್ದಿಯಾದರೆ, ಪ್ರಭಾಸ್ ಜಾತಕ ದೋಷದಿಂದ ಇಬ್ಬರು ಮದುವೆಯಾಗುತ್ತಿಲ್ಲ ಅಂತ ಮತ್ತೊಮ್ಮೆ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಹಬ್ಬಿರುವ ಸುದ್ದಿ ಇದಕ್ಕೆ ತದ್ವಿರುದ್ಧ. ಅನುಷ್ಕಾ ಶೆಟ್ಟಿಯ ಮದುವೆ ವಿಚಾರವೇ ಆದರೂ ಅದು ಬೇರೆಯವರ ಹೆಸರು ತಳುಕು ಹಾಕಿಕೊಂಡಿದೆ. ಅದರಲ್ಲೂ ಕನ್ನಡಿಗ ನಿರ್ಮಾಪಕನ ಹೆಸರು ಕೇಳಿ ಬಂದಿದೆ.
ಹೌದು ಟಾಲಿವುಡ್ ನಲ್ಲಿ ಇಂಥದ್ದೊಂದು ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಕನ್ನಡದ ನಿರ್ಮಾಪಕನ ಜೊತೆಗೆ ಅನುಷ್ಕಾ ಶೆಟ್ಟಿ ಮದುವೆಗೆ ತಯಾರಿ ನಡೆದಿದೆಯಂತೆ. ಈಗಾಗಲೇ ಎರಡು ಮನೆಯವರು ಇಬ್ಬರ ಮದುವೆ ಮಾತುಕತೆ ನಡೆಸಿದ್ದಾರಂತೆ. ಅನುಷ್ಕಾ ಶೆಟ್ಟಿಗೂ 42 ವರ್ಷವಾಗಿದ್ದು, ವರನಿಗೂ 42 ವರ್ಷವಾಗಿದೆಯೆಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಇನ್ನು ಅನುಷ್ಕಾ ಶೆಟ್ಟಿ ಬಾಹುಬಲಿಯಾದ ಮೇಲೆ ಸಿನಿಮಾ ಕಡಿಮೆ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಎರಡು ಸಿನಿಮಾಗಳಷ್ಟೇ ಕೈಯ್ಯಲ್ಲಿವೆ.
ಇನ್ನು ಇದೇ ಸಂದರ್ಭದಲ್ಲಿ ಪ್ರಭಾಸ್ ಕುತೂಹಲ ಹುಟ್ಟುವಂತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮಿದಲೇ ಡಾರ್ಲಿಂಗ್ ಪ್ರಭಾಸ್ ಮದುವೆ ನೋಡುವುದಕ್ಕೆ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಇದೀಗ ಅವರ ಪೋಸ್ಟ್ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ‘ಡಾರ್ಲಿಂಗ್ಸ್ ಕೊನೆಗೂ ಒಬ್ಬ ವಿಶೇಷ ವ್ಯಕ್ತಿ ನನ್ನ ಜೀವನಕ್ಕೆ ಆಗಮಿಸಲಿದ್ದಾರೆ, ಕಾಯುತ್ತಿರಿ’ ಎಂದು ಪೋಸ್ಟ್ ಹಾಕಿದ್ದಾರೆ. ಆ ವಿಶೇಷ ವ್ಯಕ್ತಿ ಯಾರಿರಬಹುದು ಎಂಬ ಕುತೂಹಲ ಎಲ್ಲರಿಗೂ ಮೂಡಿದೆ.