ಅಮೆರಿಕ ಪಶ್ಚಾತ್ತಾಪ ಪಡುವವರೆಗೂ ಬಿಡುವುದಿಲ್ಲ : ಇರಾನ್

ಟೆಹ್ರಾನ್‌ : ಅಮೆರಿಕ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್  ಸ್ಪಷ್ಟಪಡಿಸಿದ್ದಾರೆ. 

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು, ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆದಿಲ್ಲ ಎಂಬುದಕ್ಕೆ ವಿದೇಶಾಂಗ ಸಚಿವಾಲಯ ದನಿಗೂಡಿಸಿದೆ. 

ಅಮೆರಿಕವು, ಹಣಕಾಸು ಮತ್ತು ತೈಲ ಮಾರುಕಟ್ಟೆಗಳನ್ನು ಕುಶಲತೆಯಿಂದ ನಿರ್ವಹಿಸಲು ಹಾಗೂ ಯುದ್ಧದಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ನಾಜೂಕಾಗಿ ಬಿಡಿಸಿಕೊಳ್ಳಲು ಅಮೆರಿಕ ಮತ್ತು ಇಸ್ರೇಲ್   ನಕಲಿ ಸುದ್ದಿಗಳನ್ನು ಪ್ರಚುರಪಡಿಸುತ್ತಿದೆ ಎಂದು ಅವರು X ನಲ್ಲಿ ಬರೆದಿದ್ದಾರೆ.

ಇರಾನ್ ಮೇಲೆ  ಅಕ್ರಮಣ ನಡೆಸಿದವರಿಗೆ ತಾವು ಮಾಡಿದಕ್ಕೆ ಪಶ್ಚಾತ್ತಾಪ ಕಾಡುವವರೆಗೂ ನಾವು ಬಿಡುವುದಿಲ್ಲ,  ಇರಾನ್ ಅಧಿಕಾರಿಗಳು ಈ ಗುರಿಯನ್ನು ಸಾಧಿಸುವವರೆಗೆ ತಮ್ಮ ಸರ್ವೋಚ್ಚ ನಾಯಕ ಮತ್ತು ಜನರು ಬೆನ್ನೆಲುಬಾಗಿದ್ದಾರೆ ಎಂದು  ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ‌, ಹಾರ್ಮುಜ್ ಜಲಸಂಧಿಯ ಕುರಿತು ಟೆಹ್ರಾನ್‌ನ ನಿಲುವು ಮತ್ತು ಯುದ್ಧವನ್ನು ಕೊನೆಗೊಳಿಸುವ ಷರತ್ತುಗಳು ಬದಲಾಗಿಲ್ಲ ಎಂದು ಹೇಳಿದ್ದಾರೆ.

ಆಗಿದಿಷ್ಟು : ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ಐದು ದಿನಗಳ ವಿರಾಮ ನೀಡಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದಾರೆ. ಆದರೆ, ಇದನ್ನು ಇರಾನ್ ಮಾಧ್ಯಮಗಳು ಟ್ರಂಪ್ ನಿರ್ಧಾರವನ್ನು ವ್ಯಂಗ್ಯ ಮಾಡಿವೆ.

ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯಬೇಕು. ಇಲ್ಲವಾದಲ್ಲಿ ಇರಾನ್‌ನ ವಿದ್ಯುತ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುವುದು ಎಂದು ಟ್ರಂಪ್ 48 ಗಂಟೆಗಳ ಗಡುವು ನೀಡಿದ್ದರು. ಆದರೆ, ಕೇವಲ ಎರಡು ದಿನಗಳ ಬಳಿಕ ಸೋಮವಾರ ತಮ್ಮ ನಿಲುವನ್ನು ಬದಲಿಸಿದ ಟ್ರಂಪ್,
ಕಳೆದ ಎರಡು ದಿನಗಳಿಂದ ಎರಡೂ ದೇಶಗಳ ನಡುವೆ ‘ಬಹಳ ಉತ್ತಮ ಮತ್ತು ಫಲಪ್ರದ ಮಾತುಕತೆಗಳು’ ನಡೆಯುತ್ತಿವೆ. ಹೀಗಾಗಿ ಇರಾನ್ ಮೇಲಿನ ಸೇನಾ ದಾಳಿಗಳನ್ನು ಐದು ದಿನಗಳ ಕಾಲ ಮುಂದೂಡುವಂತೆ ರಕ್ಷಣಾ ಇಲಾಖೆಗೆ ಸೂಚಿಸಲಾಗಿದೆ ಎಂದು ಸಾಮಾಜಿಕ ಮಧ್ಯಮಗಳ ಮೂಲಕ ಘೋಷಿಸಿದರು.

ಟ್ರಂಪ್ ಅವರ ಈ ದಿಢೀರ್ ಬದಲಾವಣೆ ನಿರ್ಧಾರ, ಅಮೆರಿಕದ ಹಿಂದೇಟು ಮತ್ತು ಹಿಂಜರಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವಿಶ್ಲೇಷಿಸಿವೆ.

More articles

Latest article

Most read