ಕಳೆದ ವರ್ಷ ಹಿಂಡನ್‌ಬರ್ಗ್ ವರದಿಯ ಬಳಿಕ ತನ್ನ ಆದಾಯದಲ್ಲಿ ಭಾರೀ ನಷ್ಟವನ್ನು ಕಂಡು ದೇಶದ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಕಳೆದುಕೊಂಡಿದ್ದ ಗೌತಮ್ ಅದಾನಿ ಈಗ ಮತ್ತೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಹಿಂಡನ್‌ಬರ್ಗ್ ಆರೋಪದಲ್ಲಿ ಉದ್ಯಮಿಗಳ ಸಮೂಹದ ವಿರುದ್ಧ ಯಾವುದೇ ಹೊಸ ತನಿಖೆಗಳ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿಯ ನಿವ್ವಳ ಆದಾಯವು ಒಂದು ದಿನದಲ್ಲಿ 7.7 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಆದಾಯವು 97.6 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ತಾನು ಅಗ್ರ ಸ್ಥಾನಕ್ಕೆ ಅದಾನಿ ಏರಿದ್ದಾರೆ.
ಮುಕೇಶ್ ಅಂಬಾನಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಅದಾನಿ. ಅದಾನಿ ಸಂಪತ್ತಿನ ಮೌಲ್ಯ 97.6 ಬಿಲಿಯನ್ ಡಾಲರ್. ಮುಕೇಶ್ ಅಂಬಾನಿ ಸಂಪತ್ತಿನ ಮೌಲ್ಯ 97 ಬಿಲಿಯನ್ ಡಾಲರ್. ಅದಾನಿಗೆ ವಿಶ್ವದ 12ನೇ ಆಗರ್ಭ ಶ್ರೀಮಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.