ನಾನೂ ವಿವಾಹವಾಗಲ್ಲ, ನಿಮ್ಮ ಹಾಗೆಯೇ ಉಳಿಯುವೆ; ಯುವತಿ ಮಾತಿಗೆ ಮುಗುಳ್ನಕ್ಕ ರಾಹುಲ್ ಗಾಂಧಿ

ಗಯಾ(ಬಿಹಾರ): ನಿಮ್ಮ ಹಾಗೆ ನಾನೂ ಕೂಡ ಮದುವೆಯಾಗದೇ ಇರಲು ನಿರ್ಧರಿಸಿದ್ದೇನೆ ಎಂಬ ‘ಪ್ಯಾಡ್‌ ಗರ್ಲ್‌ ಖ್ಯಾತಿಯ ರಿಯಾ ಪಾಸ್ವಾನ್‌ ಅವರ ಮಾತಿಗೆ ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮುಗುಳ್ನಕ್ಕ ಪ್ರಕರಣ ವರದಿಯಾಗಿದೆ.

ಬಿಹಾರ ಪ್ರವಾಸ ಹಮ್ಮಿಕೊಂಡಿದ್ದ ರಾಹುಲ್‌ ಗಯಾದಲ್ಲಿ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಈ ಸಂವಾದದಲ್ಲಿ ಭಾಗಿಯಾಗಿದ್ದ ರಿಯಾ ಪಾಸ್ವಾನ್‌ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಗ ರಾಹುಲ್ ಗಾಂಧಿ ಮುಗುಳ್ನಕ್ಕಿದ್ದಾರೆ.

ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಸುಧಾರಿಸಲು ರಾಜಕೀಯವು ಮೊದಲ ಹೆಜ್ಜೆಯಾಗಿದೆ. ಆದರೆ  ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂಬ ಪಾಸ್ವಾನ್ ಮಾತಿಗೆ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿ ನೀವು  ಅತ್ಯುತ್ತಮವಾಗಿ ಮಾತನಾಡುತ್ತೀರಿ, ನಿಮ್ಮ ಸಂಪೂರ್ಣ ಕಥೆ ಹೇಳಿ ಎಂದಿದ್ದಾರೆ.

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕಾಂಗ್ರೆಸ್ ಹಮ್ಮಿಕೊಂಡಿರುವ ‘ಶಕ್ತಿ ಅಭಿಯಾನದಲ್ಲಿ ನಾನು ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನು ಸ್ಲಂ ನಿವಾಸಿಯಾಗಿದ್ದು, ನನ್ನಂತೆಯೇ ಅಂತಹ ಪ್ರದೇಶದಲ್ಲಿ ವಾಸಿಸುವರ ದೊಡ್ಡ ಸಂಖ್ಯೆಯೇ ಇದೆ. ಶಕ್ತಿ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಜನರ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಈಗ ಜನರಿಗೆ ಯಾವುದೇ ಸಮಸ್ಯೆ ಇದ್ದರೂ ಅವರು ನಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

‘ಪ್ಯಾಡ್‌ ಗರ್ಲ್‌ ಪಾಸ್ವಾನ್‌’ಯಾರು?

ರಿಯಾ ಪಾಸ್ವಾನ್‌, ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್‌ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಮೂಲಕ ಗಮನ ಸೆಳೆದಿದ್ದರು. 2022ರಲ್ಲಿ ಆಗಿನ ಐಎಎಸ್‌ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದರು. ವಿದ್ಯಾರ್ಥಿನಿಯರಿಗೆ ಶಾಲಾ ಉಡುಗೆ, ವಿದ್ಯಾರ್ಥಿ ವೇತನ, ಸೈಕಲ್‌ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡುತ್ತಿರುವಾಗ, ರೂ.20 ರಿಂದ ರೂ.30 ರೂ.ಗಳಿಗೆ ಸ್ಯಾನಿಟರಿ ಪ್ಯಾಡ್‌ ಗಳನ್ನು ನೀಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿ ಗಮನ ಸೆಳೆದಿದ್ದರು.

ಇವರ ಬೇಡಿಕೆಗೆ ಕೋಪಗೊಂಡಿದ್ದ  ಐಎಎಸ್‌ ಅಧಿಕಾರಿ,  ಇಂದು ಸಬ್ಸಿಡಿ ದರದಲ್ಲಿ ಪ್ಯಾಡ್‌ ಕೇಳುತ್ತೀರಿ. ನಾಳೆ ಜೀನ್ಸ್ ಪ್ಯಾಂಟ್‌ ಕೂಡ ಕೇಳುತ್ತೀರಿ ಕಿಡಿ ಕಾರಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ರಿಯಾ ಪಾಸ್ವಾನ್‌ ಧೈರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಅಂದಿನಿಂದ ರಿಯಾ ಪ್ಯಾಡ್‌ ಗರ್ಲ್‌ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

More articles

Latest article

Most read