ನಾನು ದಲಿತ ವಿರೋಧಿ ಅಲ್ಲ; ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟನೆ

Most read

ಮೈಸೂರು: ದಲಿತರ ಪರವಾಗಿ ಹತ್ತಾರು ಕೆಲಸಗಳನ್ನು ಮಾಡಿರುವ ನಾನು ದಲಿತ ವಿರೋಧಿ ಅಲ್ಲವೇ ಇಲ್ಲ. ದಯಮಾಡಿ ಯಾರೊಬ್ಬರೂ ಈ ವಿಷಯದಲಿ ರಾಜಕಾರಣ ಮಾಡಬೇಡಿ ಎಂದು ಜೆಡಿಎಸ್‌ ಮುಖಂಡ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಕಲಾಪದಲ್ಲಿ ಜಿ ಟಿ ದೇವೇಗೌಡ ಅವರು ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಸದನದಲ್ಲಿ ನಾನು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸರ್ಕಾರದ ಪಾಲುದಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ ಒಬ್ಬ ಹಿಂದುಳಿದ ವರ್ಗದವರಿಗೂ ಸ್ಥಾನ ನೀಡಿ ಎಂದು ನಾನೇ ಒತ್ತಾಯಿಸಿದ್ದೇನೆ. ಆದರೂ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಮಸಲತ್ತು ನಡೆಸಲಾಗುತ್ತಿದೆ ಎಂದರು.

ಇದುವರೆಗಿನ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದೂ ದೂರು ದಾಖಲಾಗಿಲ್ಲ. ನನ್ನ ಬಗ್ಗೆ ಅಸಭ್ಯ ಪದಗಳನ್ನು ಬಳಸುವವರ ವಿರುದ್ಧವೂ ನಾನು ದೂರು ನೀಡುವುದಿಲ್ಲ. ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರಉತ್ತರಿಸಿದ ದೇವೇಗೌಡರು ದಸರಾ ಉದ್ಘಾಟನೆಗೆ ಸಾಹಿತಿ, ಮಠಾಧೀಶರು ಮತ್ತಿತರ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಈ ಹಿಂದೆ ಸಾಹಿತಿ ನಿಸಾರ್ ಅಹಮದ್ ಅವರೂ ಉದ್ಘಾಟಿಸಿದ್ದರು ಎಂದು ತಿಳಿಸಿದರು.

More articles

Latest article