ಲೆಬನಾನ್ ಕದನ ವಿರಾಮ ಒಪ್ಪಂದ ಮಾತುಕತೆಯ ಭಾಗ : ಇರಾನ್ ಸ್ಪಷ್ಟನೆ

ಟೆಹ್ರಾನ್‌ : ಲೆಬನಾನ್ ಕದನ ವಿರಾಮದ ಭಾಗವಾಗಿತ್ತು.. ಮಧ್ಯವರ್ತಿ ಪಾಕಿಸ್ತಾನಕ್ಕೆ ಇದು ನಮ್ಮ ಬೇಡಿಕೆ ಎಂದು ತಿಳಿದಿತ್ತು ಎಂದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ಕದನ ವಿರಾಮ ಒಪ್ಪಂದಕ್ಕೆ ಹಾಗೂ ಶಾಂತಿಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ, ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಮತ್ತು ಇರಾನ್ ಸಂಸದೀಯ ಸ್ಪೀಕರ್‌ ಮೊಹಮದ್‌ ಬಘೇರ್‌ ಗಾಲೀಬಫ್‌ ನಿಯೋಗ ಮಾತುಕೆ ನಡೆಸುತ್ತಿವೆ.

ಪಾಕಿಸ್ತಾನದ ರಾಜಧಾನಿಯಲ್ಲಿರುವ ಐಷಾರಾಮಿ ಪಂಚತಾರಾ ಸೆರೆನಾ ಹೋಟೆಲ್ ಇರಾನ್ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಶಾಂತಿ ಮಾತುಕತೆಯ ಮುಖ್ಯ ವೇದಿಕೆಯ ಸ್ಥಳವಾಗಿದೆ. ಮಾತುಕತೆ ನಡೆಯುತ್ತಿರುವುದರಿಂದ ಇಡೀ ಇಸ್ಲಾಮಾಬಾದ್‌ ನಗರದಲ್ಲಿ ಅಭೂತಪೂರ್ವ ಭದ್ರತೆ ಒದಗಿಸಿದ್ದು, ಎರಡು ದಿನಗಳವರೆಗೆ ಅಂಗಡಿಗಳು ಮತ್ತು ಕಚೇರಿಗಳು ಮುಚ್ಚಲ್ಪಟ್ಟಿವೆ.

ಅರೆಸೈನಿಕ ಮತ್ತು ಸೇನಾ ಪಡೆಗಳು ಸೇರಿದಂತೆ ಸಾವಿರಾರು ಭದ್ರತಾ ಸಿಬ್ಬಂದಿ ರಾಜಧಾನಿಯಾದ್ಯಂತ ಚೆಕ್‌ಪೋಸ್ಟ್‌ಗಳು ಮತ್ತು ದಿಗ್ಬಂಧನಗಳನ್ನು ಸ್ಥಾಪಿಸಿಕೊಂಡಿದ್ದಾರ. ಸರ್ಕಾರಿ ಕಚೇರಿಗಳು ಮತ್ತು ರಾಯಭಾರ ಕಚೇರಿಗಳು ಇರುವ ಕೆಂಪು ವಲಯವನ್ನು ಸುತ್ತುವರೆದಿದ್ದಾರೆ.

More articles

Latest article

Most read