ಅಲಿ ಲಾರಿಜಾನಿ ಹತ್ಯೆಯ ಸುದ್ಧಿಯ ನಡುವೆಯೇ X ಖಾತೆಯಿಂದ ಕೈಬರಹದ ಪತ್ರ ಪ್ರಕಟ !

ಟೆಹ್ರಾನ್‌ : ಇಸ್ರೇಲ್ ಸೇನೆಯು ಇರಾನ್‌ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದರೂ, ಟೆಹ್ರಾನ್‌ನಿಂದ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಗೊಂದಲದ ನಡುವೆಯೇ ಲಾರಿಜಾನಿ ಅವರ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಕೈಬರಹದ ಟಿಪ್ಪಣಿಯೊಂದು ಪ್ರಕಟವಾಗಿದೆ.

ಈ ಪತ್ರವನ್ನು ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳೂ ಹಂಚಿಕೊಂಡಿವೆ. ಇತ್ತೀಚೆಗೆ ಅಮೇರಿಕ ನಡೆಸಿದ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ನಾವಿಕರನ್ನು ಈ ಪತ್ರದಲ್ಲಿ ಸ್ಮರಿಸಲಾಗಿದೆ.

ದಾಳಿಯಲ್ಲಿ ಮೃತಪಟ್ಟ ನಾವಿಕರ ಅಂತಿಮ ಸಂಸ್ಕಾರವು ಇಂದು ನಡೆಯಬೇಕಿತ್ತು, ಈ ಸಂದರ್ಭಕ್ಕೆ ಪೂರಕವಾಗಿ ಲಾರಿಜಾನಿ ಅವರ ಹೆಸರಿನಲ್ಲಿ ಈ ಟಿಪ್ಪಣಿ ಹೊರಬಿದ್ದಿದೆ.

ಲಾರಿಜಾನಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿರುವಾಗಲೇ ಈ ಪತ್ರ ಪ್ರಕಟವಾಗಿರುವುದು, ಅವರು ಬದುಕಿದ್ದಾರೆಯೇ ಅಥವಾ ಅವರ ಸಾವಿನ ಸುದ್ದಿಯನ್ನು ಮರೆಮಾಚಲು ಅವರ ತಂಡವು ಈ ಪತ್ರವನ್ನು ಹಂಚಿಕೊಂಡಿದೆಯೇ ಎಂಬ ಬಗ್ಗೆ ಭಾರಿ ಕುತೂಹಲ ಮತ್ತು ಚರ್ಚೆ ಮೂಡಿಸಿದೆ.

ಈ ಪತ್ರವು ಲಾರಿಜಾನಿ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ಇರಾನ್ ನೀಡುತ್ತಿರುವ ಪರೋಕ್ಷ ಸಂದೇಶವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

More articles

Latest article

Most read