ದೆಹಲಿಯಲ್ಲಿ ಮನೆ ಕೆಲಸದವ ಕದ್ದದ್ದು ಬರೊಬ್ಬರಿ 1 ಕೋಟಿ ರೂಪಾಯಿ; ಆರೋಪಿಗಳಿಂದ ಪೂರ್ತಿ ಹಣ ವಶ

ನವದೆಹಲಿ: ಉದ್ಯಮಿಯೊಬ್ಬರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ ಯುವಕನೊಬ್ಬ ಬರೋಬ್ಬರಿ ರೂ.1 ಕೋಟಿ ಕಳ್ಳತನ ಮಾಡಿರುವ ಪ್ರಕರಣ ದೇಶದ ರಾಜಧಾನಿ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ವರದಿಯಾಗಿದೆ.

ಸಂಜಯ್ ಅಗರ್‌ ವಾಲ್‌ ಎಂಬುವರ ಉದ್ಯಮಿಯ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ, ಬಿಹಾರ ಮೂಲದ ಅನಿಲ್‌ ಕುಮಾರ್‌ ಅಲಿಯಾಸ್ ಕರಣ್ (21) ಹಾಗೂ ದೀಪಕ್‌ ಕುಮಾರ್‌ (26) ಎಂಬುವರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ. ಇವರಿಬ್ಬರೂ ಹಣದ ಆಸೆಗಾಗಿ ಕಳ್ಳತನ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

ಶಾಲಿಮಾರ್ ಬಾಗ್ ಪ್ರದೇಶದ ನಿವಾಸಿ ಸಂಜಯ್ ಅಗರ್‌ ವಾಲ್‌ ಲ್ಲಿಅವರು ತಮ್ಮ ಮನೆಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಅನಿಲ್ ಕಾಣೆಯಾಗಿದ್ದಾನೆ. ಜತೆಗೆ ರೂ.1.25 ಕೋಟಿ ಹಣವೂ ನಾಪತ್ತೆಯಾಗಿದೆ ಎಂದು ಮೇ.6ರಂದು ಅವರು ದೂರು ದಾಖಲಿಸಿದ್ದರು. ಕೂಡಲೇ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಅರೋಪಿಗಳಾದ ಅನಿಲ್‌ ಮತ್ತು ದೀಪಕ್‌ ಕುಮಾರ್‌ ಅವರನ್ನು ಗಾಜಿಯಾಬಾದ್‌ ಬಳಿ ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಕಳ್ಳತನ ಮಾಡಿರುವುದಾಗಿ ಆರೋಪಿಗಳಿಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಭೀಷ್ಮ ಸಿಂಗ್ ತಿಳಿಸಿದ್ದಾರೆ. ಆರೋಪಿಗಳಿಂದ ರೂ 1.06 ಕೋಟಿ ನಗದು ಬಚ್ಚಿಟ್ಟಿದ್ದ ಮೂರು ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article

Most read