ಕುಟುಂಬ ಸಮೇತ ವಿವಿಧ ಮಠಾಧೀಶರ ಪಾದಪೂಜೆ ಮಾಡಿದ ಮೃಣಾಲ್ ಹೆಬ್ಬಾಳ್ಕರ್

Most read

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಇಂದು ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಕುವೆಂಪು ನಗರದಲ್ಲಿರುವ ಹೆಬ್ಬಾಳ್ಕರ್ ನಿವಾಸದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರ ಪಾದಪೂಜೆ ನೆರವೇರಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಇಪ್ಪತ್ತೈದಕ್ಕೂ ಹೆಚ್ಚಿನ ಸ್ವಾಮೀಜಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರಿಂದ ಪಾದಪೂಜೆ ನೆರವೇರಿತು.

ಇದಾದ ನಂತರ ಹಿಂಡಲಗಾ ಗಣಪತಿಗೆ ಪೂಜೆ ಸಲ್ಲಿಸಿ ಮೃನಾಲ್ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ‌, ಲಕ್ಷ್ಮಣ ಸವದಿ ಸೇರಿ ಜಿಲ್ಲೆಯ ಎಲ್ಲ ಶಾಸಕರು ಮುಖಂಡರು ಭಾಗಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಟ್ಟಿಹೊಳಿ ವೀರಭದ್ರೇಶ್ವರ ಹಾಗೂ ಸುಳೇಭಾವಿ ಲಕ್ಷ್ಮೀ ದೇವಿಗೆ ಪೂಜೆ ಮಾಡಿದ್ದೇವೆ. ಗುರುಗಳನ್ನು ಮನೆಗೆ ಕರೆದು ಪಾದ ಪೂಜೆ ಮಾಡಿದ್ದೇವೆ. ವಿಜಯ ಯಾತ್ರೆಯ ಸಂಕಲ್ಪ ಇಟ್ಟುಕೊಂಡು ಪೂಜೆ ಮಾಡಿದ್ದೇವೆ. ಡಿಸಿಎಂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಪ್ರಕಾಶ್ ಹುಕ್ಕೇರಿ ಎಲ್ಲಾ ಶಾಸಕರು ಇರ್ತಾರೆ. ಮಹಾರಾಷ್ಟ್ರ ದಿಂದ ‌ದೀರಜ್ ದೇಶಮುಖ್ ಅವರು ಬರುತ್ತಿದ್ದಾರೆ. ಎರಡು ಲಕ್ಷ ಮತಗಳ ಅಂತರದಿಂದ ನಾವು ಗೆಲ್ತೇವಿ. ಬೆಳಗಾವಿ ಜಿಲ್ಲೆಯ ಮನೆ ಮಗನಿಗೆ, ಸ್ವಾಭಿಮಾನಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಹಿಂಡಲಗಾ ಗಣಪತಿ, ಸುಳೇಭಾವಿ ಲಕ್ಷ್ಮೀ ದೇವಿ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಬಹಳಷ್ಟು ಜ‌ನರ ಬಳಿ ಹೋಗಿದ್ದೇನೆ, ಅನೆಕ ವರ್ಗದ ಜನರ ಬಳಿ ಹೋಗ್ತಿದ್ದೆನೆ. ಬೆಳಗಾವಿಗೆ 20 ವರ್ಷಗಳಿಂದ ಕೊಟ್ಟ ಭರವಸೆಗಳು ಈಡೇರಿಲ್ಲ. ನಮ್ಮ ಐದು ಗ್ಯಾರಂಟಿಗಳು ಜನರ ಕೈ ಹಿಡಿಯುತ್ತೆ. ನಮ್ಮ ಕಾರ್ಯಕರ್ತರ ಶ್ರಮವೂ ಸಹ ಕೈ ಹಿಡಿಯುತ್ತೆ. ಬೆಳಗಾವಿ ಯುವಕನ ಕೈ ಹಿಡಿತಾರೆ ಎನ್ನುವ ನಂಬಿಕೆ ಇದೆ. ಮನೆ ಮಗನಾಗಿ ನನ್ನನ್ನು ಸ್ವೀಕಾರ ಮಾಡಿದ್ದಾರೆ. ಯುವಕರ ಜೊತೆಗೆ ಪ್ರತಿಯೊಂದು ಹಬ್ಬದಲ್ಲೂ ಸಹ ನಾವು ಭಾಗಿಯಾಗಿರ್ತಿವಿ. ನಮ್ಮದು ಯುವಕರ ಜೊತೆಗೆ ಸಂಬಂಧ ಚೆನ್ನಾಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಲೋಕಸಭೆ ಕ್ಷೇತ್ರವನ್ನು‌ ಮಾದರಿ ಕ್ಷೇತ್ರ ಮಾಡಬೇಕು. ದೇವರು, ತಾಯಿ, ಅಜ್ಜನವರ ಆಶೀರ್ವಾದಿಂದ ನಾವು ರೆಕಾರ್ಡ್ ಬ್ರೇಕ್ ಮಾಡ್ತೇವಿ. ಈ ಬಾರಿ ಬೆಳಗಾವಿಯ ಅಸ್ಮಿತೆಯನ್ನ ಎತ್ತಿ ಹಿಡಿಯಿರಿ ಎಂದು ಮೃಣಾಲ್ ಮನವಿ ಮಾಡಿದ್ದಾರೆ.

More articles

Latest article