ಹೊಸದಿಲ್ಲಿ: ಭಾರತ ಜನತಾ ಪಕ್ಷ ಕೊನೆಗೂ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಗೆ ಸಂಕಲ್ಪ ಪತ್ರ ಎಂದು ಹೆಸರಿಟ್ಟಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದರು.
ಸಂಕಲ್ಪ ಪತ್ರ ಬಿಡುಗಡೆ ಮಾಡಿ ಮಾತನಾಡಿದ ನರೇಂದ್ರ ಮೋದಿ, ಇದನ್ನು ಭಾರತದ ಪ್ರತಿಯೊಬ್ಬ ಜನತೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ರಾಜನಾಥ್ ಸಿಂಗ್ ನೇತೃತ್ವದ ಸಮಿತಿ ಬಿಜೆಪಿ ಪ್ರಣಾಳಿಕೆ ರಚಿಸಿದ್ದು, 27 ಸದಸ್ಯರ ಪ್ರಣಾಳಿಕೆ ಸಮಿತಿ ಜನಾಭಿಪ್ರಾಯ ಸಂಗ್ರಹಿಸಿ ರೂಪಿಸಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ ಭಾಗಿಯಾಗಿದ್ದರು.
ಪ್ರಣಾಳಿಕೆ ಬಿಡುಗಡೆಗೂ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, 2024ರಿಂದ ಹೇಗೆ ದೇಶದ ಸೇವೆ ಮಾಡಲಿದ್ದೇವೆ ಎಂಬುದು ಪ್ರಣಾಳಿಕೆಯಲ್ಲಿದೆ. ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಹೋರಾಟ ನಡೆಸಿದ್ರು. ಅದೇ ಮಾರ್ಗದಲ್ಲಿ ಬಿಜೆಪಿ ಕೂಡ ಹೋರಾಟ ನಡೆಸುತ್ತಿದೆ.
ಅಧಿಕಾರ ಇದ್ದರೂ, ಇಲ್ಲದಿದ್ದರೂ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಸರ್ಕಾರ ಬಡವರಿಗೆ ಮೀಸಲಾಗಿದೆ. ಬಿಜೆಪಿ ಸಮಾಜದ ಕಡೆಯ ವ್ಯಕ್ತಿಗೆ ಸಮರ್ಪಿತ ಎಂದಿದ್ದರು ಮೋದಿ. ಅದೇ ರೀತಿ ನಡೆದುಕೊಂಡಿದ್ದೇವೆ ಎಂದರು.
ದೇಶದ ಅನ್ನದಾತರಿಗೆ ಭದ್ರತೆ, ಯುವಶಕ್ತಿ, ನಾರೀಶಕ್ತಿ, ಅಭಿವೃದ್ದಿ, ರೈತ-ಬಡವರ ಶ್ರೇಯೋಭಿವೃದ್ದಿ. ಐದು ವಲಯಗಳ ಬಲವರ್ಧನೆ ಗುರಿ ಹೊಂದಿದ್ದು, 2047ಕ್ಕೆ ಶಕ್ತಿ ಭಾರತ ನಿರ್ಮಾಣದ ಸಂಕಲ್ಪ ಹೊಂದಲಾಗಿದೆ ಎಂದು ನಡ್ಡಾ ಹೇಳಿದರು.
2024 ರಿಂದ ಹಲವು ಬಗೆಯಲ್ಲಿ ದೇಶ ಸೇವೆ ಮಾಡಬೇಕು ಎಂದಿದ್ದೇವೆ. ದೇಶ ಸೇವೆಗಾಗಿ ಹಲವು ಯೋಜನೆ ಪ್ರಣಾಳಿಕೆಯಲ್ಲಿವೆ. ಸಾಮಾಜಿಕ ನ್ಯಾಯಕ್ಕೆ ಅಂಬೇಡ್ಕರ್ ಹೋರಾಡಿದ್ರು. ಅಂಬೇಡ್ಕರ್ ಮಾರ್ಗದಲ್ಲಿ ಬಿಜೆಪಿ ಹೋರಾಟ ಇದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಹೋರಾಡಿದ್ದೇವೆ. ನಮ್ಮ ಸರ್ಕಾರ ಬಡವರ ಪರವಾಗಿದೆ ಎಂದ ಅವರು, ಬಿಜೆಪಿ ಸಮಾಜದ ಕಡೆಯ ವ್ಯಕ್ತಿಗೆ ಸಮರ್ಪಿತ. ನಾವು ಮಹಿಳೆಯರ ಗೌರವವನ್ನು ಹೆಚ್ಚಿಸಿದ್ದೇವೆ. ಅಯೋಧ್ಯೆ ಶ್ರೀರಾಮ ಮಂದಿರ ಸಾಕಾರಗೊಂಡಿದೆ. ಮೋದಿ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣವಾಗಿದೆ ಎಂದು ಹೇಳಿದರು.