ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಜೊತೆ ಒಂದು ವಿಧಾನಸಭಾ ಉಪಚುನಾವಣೆ ಮತ್ತು ನೈರುತ್ಯ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.
ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಪಡೆಯುವಲ್ಲಿ ಆಯನೂರು ಮಂಜುನಾಥ್ ಯಶಸ್ವಿಯಾಗಿದ್ದಾರೆ. ಪಕ್ಷದ ಟಿಕೆಟ್ ಪಡೆಯುವಲ್ಲಿ ಎಸ್ ಪಿ ದಿನೇಶ್ ಮತ್ತು ಆಯನೂರು ಮಂಜುನಾಥ್ ನಡುವೆ ಪೈಪೋಟಿ ನಡೆದಿದ್ದು ಅಂತಿಮವಾಗಿ ಟಕೆಟ್ ಪಡೆಯುವಲ್ಲಿ ಆಯನೂರು ಮಂಜುನಾಥ್ ಮೇಲುಗೈ ಸಾಧಿಸಿದ್ದಾರೆ.
ಬಿಜೆಪಿ ಯಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಸದಸ್ಯತ್ವ ಅವಧಿ ಇನ್ನೂ ಒಂದು ವರ್ಷ ಇರುವಾಗಲೆ ರಾಜೀನಾಮೆ ನೀಡಿ ಜೆಡಿಎಸ್ ಅಭ್ಯರ್ಥಿಯಾಗಿ 2023 ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೇಸ್ ಸೇರ್ಪಡೆ ಗೊಂಡಿದ್ದರು.
ಆಯನೂರು ಮಂಜುನಾಥ್ ಅವರನ್ನು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ಇದೀಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯಿತ ಮತಗಳನ್ನು ಸೆಳೆಯುವ ರಾಜಕೀಯ ತಂತ್ರ ಮೆರೆದಿದೆ.
ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಆಯನೂರು ಮಂಜುನಾಥ್‌ಗೆ ಎಐಸಿಸಿ ಟಿಕೆಟ್ ಘೋಷಿಸಿದೆ.
ಸುರಪುರ ಕ್ಷೇತ್ರ ಕಾಂಗ್ರೆಸ್ ಶಾಸಕ ವೆಂಕಟಪ್ಪ ನಾಯಕ್ ಅಕಾಲಿಕ ನಿಧನದಿಂದಾಗಿ ಇದೀಗ ಉಪಚುನಾವಣೆ ಎದುರಾಗಿದ್ದು, ಕಾಂಗ್ರೆಸ್ ಸುರಪುರ ಬೈ ಎಲೆಕ್ಷನ್ಗೆ ದಿವಂಗತ ವೆಂಕಟಪ್ಪ ನಾಯಕ್ ಪುತ್ರನಿಗೆ ಟಿಕೆಟ್ ನೀಡಿದೆ.