ಹನುಮಾನ್ ಚಾಲೀಸಾ ಗಲಾಟೆ: ತೇಜಸ್ವಿ ಸೂರ್ಯನಿಂದ ದ್ವೇಷ ಹರಡುವ ಯತ್ನ: ದಿನೇಶ್ ಗುಂಡೂರಾವ್

Most read

ನಗರದ ನಗರತಪೇಟೆಯಲ್ಲಿ ನಡೆದ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ಪ್ರಕರಣ ಇದೀಗ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗುತ್ತಿದೆ.ಮೊಬೈಲ್ ಅಂಡಿಯೊಂದಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ

ಈ ಪ್ರಕರಣಕ್ಕೆ ರಾಜಕೀಯ ನಾಯಕರು ಎಂಟ್ರಿಯಾಗಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಹನುಮಾನ್ ಜಾಲೀಸಾ ಹಾಕಿದ್ದಕ್ಕೆ ಮೊಬೈಲ್ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದಂತೆ ಕರ್ನಾಟಕ ಬಿಜೆಪಿ ಪ್ರತಿಕ್ರಿಯಿಸಿ ‘ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಕಾಂಗ್ರೆಸ್‌ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ.ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ‌.ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ ಎಂದರೆ, ಇದರ ಹಿಂದೆ ಮಜಾವಾದಿ ಸಿದ್ದರಾಮಯ್ಯ ಸರ್ಕಾರದ ಕಳಂಕಿತ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ.

ಕೂಡಲೇ ಪಾ’ಕೈ’ಸ್ತಾನ್ ಸರ್ಕಾರ ಮತಾಂಧ ಗೂಂಡಾ ಬ್ರದರ್ಸ್‌ಗಳನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಚ್ಚರ ನೀಡಿದ್ದರು.ಸಿಎಂ& ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ತೇಜಸ್ವಿ ಸೂರ್ಯಸಂಸದ ತೇಜಸ್ವಿ ಸೂರ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಜಾನ್ ಸಮಯದಲ್ಲಿ ಭಜನೆಗೆ ಅವಕಾಶವಿಲ್ಲ ಎಂದು ಹಿಂದೂ ಅಂಗಡಿಯವನ ಮೇಲೆ ಸಮಾಜವಿರೋಧಿಗಳು ಹಲ್ಲೆ ನಡೆಸಿದ್ದಾರೆ. ಇಂತಹ ಅಂಶಗಳಿಗೆ ಧೈರ್ಯ ತುಂಬಿರುವುದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ನೇರ ಪರಿಣಾಮವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರಿಗೆ ಜಾಮೀನು ನೀಡಲಾಗಿತ್ತು. ಜಿಹಾದಿಗಳಿಗೆ ಇಂತಹ ರಾಜಕೀಯ ಬೆಂಬಲ ದೊರೆತಿರುವುದರಿಂದ ಸಹಜವಾಗಿಯೇ ನಮ್ಮ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಇಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.

ಮೊದಲು ತಪ್ಪು ನಿದರ್ಶನ ನೀಡುವುದನ್ನು ಸಿಎಂ ನಿಲ್ಲಿಸಬೇಕು. ಈ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ತಾನೇ ಸ್ವತಃ ಘಟನಾ ಸ್ಥಳಕ್ಕೆ ತೆರಳಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಭೇಟಿಯಾಗಿದ್ದರು.ತೇಜಸ್ವಿ ಸೂರ್ಯಗೆ ದಿನೇಶ್‌ ಗುಂಡೂರಾವ್‌ ತಿರುಗೇಟುಇನ್ನು ತೇಜಸ್ವಿ ಸೂರ್ಯ ಈ ಆರೋಪಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ. ತೇಜಸ್ವಿ ಸೂರ್ಯ ಎಂದಿನಂತೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ.

ಹಿಂದೂ ಮತ್ತು ಮುಸ್ಲಿ ಹುಡುಗರು ಒಟ್ಟಾಗಿ ಹಲ್ಲೆ ನಡೆಸಿದ್ದಾರೆ. ಆಜಾನ್ ವಿಚಾರವಾಗಿಯೇ ಹಲ್ಲೆ ನಡೆದಿದ್ದರೆ, ಹಿಂದೂ ಅಂಗಡಿಯವನ ಮೇಲೆ ಹಿಂದೂಗಳು ಏಕೆ ದಾಳಿ ಮಾಡುತ್ತಾರೆ..? ಇನ್ನು ಹನುಮಾನ್ ಚಾಲೀಸಾ ಹಾಕಲಾಗಿತ್ತು ಎಂದು ಯಾರು ಹೇಳಿದರು? ಇದು ಆಜಾನ್ Vs ಭಜನೆ ಜಗಳ ಎಂಬ ತೀರ್ಮಾನಕ್ಕೆ ಹೇಗೆ ಬರುತ್ತೀರಿ..?

ಪ್ರಕರಣ ಏನೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಆದರೆ ಬಿಜೆಪಿಯ ಈ ಯುವ ನಾಯಕ ಕೆಳಮಟ್ಟದ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.ಹನುಮಾನ್ ಚಾಲೀಸಾ ಹಾಕಿದವನ ಮೇಲೆ ಹಲ್ಲೆ: 3 ಬಂಧನ, ಬಿಜೆಪಿ ನಾಯಕರಿಂದ ಸ್ಥಳ ಭೇಟಿ: ನಡೆದಿದ್ದೇನು?ಪ್ರಕರಣದ ಹಿನ್ನೆಲೆ ಏನು..?ಭಜನೆ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ನಗರತ್​ಪೇಟೆಯಲ್ಲಿ ನಡೆದಿತ್ತು. ಘಟನೆಯ ಆರೋಪಿಗಳಾದ ಸುಲೇಮಾನ್, ಶಹನವಾಜ್ ಹಾಗೂ ರೋಹಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ.ನಗರತ್​ಪೇಟೆಯಲ್ಲಿರುವ ಮೊಬೈಲ್ ಅಂಡಿಯೊಂದರಲ್ಲಿ ಯುವಕ ಭಜನೆ ಹಾಡುಗಳನ್ನು ಹಾಕಿ ಕೇಳುತ್ತಿದ್ದನ್ನು. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು, ‘ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ’ ಎಂದಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ನಂತರ ಆರು ಜನ ಯುವಕರು, ಅಂಗಡಿಯಲ್ಲಿದ್ದ ಯುವಕನ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

More articles

Latest article