ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಯ ತತ್ವಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಗುಜರಾತ್, ಗುಜರಾತ್, ಉತ್ತರ ಪ್ರದೇಶ , ಬಿಹಾರ, ಜಾರ್ಖಂಡ್, ಎಚ್ಪಿ ಮತ್ತು ಉತ್ತರಾಖಂಡ ರಾಜ್ಯದ ಉನ್ನತ ಅಧಿಕಾರಿಗಳು ಸೇರಿದಂತೆ ಆರು ಗೃಹ ಕಾರ್ಯದರ್ಶಿಗಳನ್ನು ಪದಚ್ಯುತಗೊಳಿಸಿ ಚುನಾವಣಾ ಆಯೋಗ ಸೋಮವಾರ ಮಧ್ಯಾಹ್ನ ಆದೇಶ ಹೊರಡಿಸಿದೆ. ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರನ್ನು ವರ್ಗಾವಣೆ ಮಾಡುವಂತೆ ಕೂಡ ನಿರ್ದೇಶಿಸಿದೆ ನೀಡಿದೆ. ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಯನ್ನೂ ವಜಾಗೊಳಿಸಲಾಗಿದೆ.
ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆಯು, ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಸಿದ್ಧತೆ ಮಾಡಿಕೊಳ್ಳವಂತೆ ತಿಳಿಸಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರದಲ್ಲಿ, ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ “ಚುನಾವಣೆಗೆ ಸಂಬಂಧಿಸದ ಹುದ್ದೆಗೆ” ವರ್ಗಾಯಿಸುವಂತೆ ಕೋರಿದೆ.
ಚುನಾವಣಾ ಸಂಬಂಧಿತ ಕರ್ತವ್ಯಗಳಲ್ಲಿ ತೊಡಗಿರುವ ಅಧಿಕಾರಿಗಳು ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಅಥವಾ ಅವರ ತವರು ಜಿಲ್ಲೆಗಳಲ್ಲಿ ಠಿಕಾಣಿ ಹೂಡಿದ್ದರೆ ಅವರನ್ನು ವರ್ಗಾವಣೆ ಮಾಡುವಂತೆ ಆಯೋಗವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ..
ಹಲವಾರು ಮುನ್ಸಿಪಲ್ ಕಮಿಷನರ್ಗಳು ಮತ್ತು ಕೆಲವು ಹೆಚ್ಚುವರಿ ಮತ್ತು ಉಪ ಮುನ್ಸಿಪಲ್ ಕಮಿಷನರ್ಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಅನುಸರಿಸಲು ಮಹಾರಾಷ್ಟ್ರ ವಿಫಲವಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಯೋಗವು ಸೋಮವಾರ ಸಂಜೆ 6 ಗಂಟೆಯೊಳಗೆ ವರದಿ ಸಲ್ಲಿಸಲು ಗಡುವು ನೀಡಲಿ ಆದೇಶಿಸಿದೆ.
ಹೆಚ್ಚುವರಿಯಾಗಿ, ಮಹಾರಾಷ್ಟ್ರದ ಇತರ ಕಾರ್ಪೊರೇಷನ್ಗಳಾದ್ಯಂತ ಇದೇ ರೀತಿಯ ಸ್ಥಾನದಲ್ಲಿರುವ ಎಲ್ಲಾ ಮುನ್ಸಿಪಲ್ ಕಮಿಷನರ್ಗಳು ಮತ್ತು ಹೆಚ್ಚುವರಿ ಅಥವಾ ಉಪ ಮುನ್ಸಿಪಲ್ ಕಮಿಷನರ್ಗಳನ್ನು ವರ್ಗಾಯಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಯಿತು.
ಹೆಚ್ಚುವರಿ ಆಯುಕ್ತರು ಮತ್ತು ಡೆಪ್ಯುಟಿ ಕಮಿಷನರ್ಗಳೊಂದಿಗೆ ಬೃಹನ್ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಅವರನ್ನು ಪದಚ್ಯುತಗೊಳಿಸುವಂತೆ ಆದೇಶಿಸಿದೆ.