Wednesday, December 11, 2024

IT ದಾಳಿ ಬೆನ್ನಲ್ಲೇ 6 ಕೋಟಿ ರೂ. ಬಾಂಡ್ ಖರೀದಿಸಿದ ದೇಶದ ಅತಿದೊಡ್ಡ ಬೀಫ್ ರಫ್ತು ಸಂಸ್ಥೆ!

Most read

ಮುಂಬೈ: 2019 ಜನವರಿಯಲ್ಲಿ IT ದಾಳಿಗೆ ಒಳಗಾಗಿದ್ದ ದೇಶದ ಅತಿ ದೊಡ್ಡ ಬೀಫ್ ರಫ್ತುದಾರ ಸಂಸ್ಥೆಯಾದ ಅಲನ್ ಗ್ರುಪ್ 2019 ಜುಲೈ ತಿಂಗಳಲ್ಲಿ 5 ಕೋಟಿ ರೂ. ಹಾಗೂ ಅದೇ ವರ್ಷ ಡಿಸೆಂಬರ್ ನಲ್ಲಿ ಒಂದು ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿ ಮಾಡಿದೆ ಎಂದು ಆಲ್ಟ್ ನ್ಯೂಸ್ ಸಹ ಸಂಪಾದಕ, ಸತ್ಯಶೋಧಕ ಮೊಹಮ್ಮದ ಜುಬೇರ್ ತಮ್ಮ “X” ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಬೀಫ್ ರಫ್ತಿನಲ್ಲಿ ಅತ್ಯುತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಅಲನ್ ಗ್ರುಪ್ಸ್ ಸಂಸ್ಥೆಗೆ ಮೋದಿ ಸರಕಾರ 2017 ರಲ್ಲಿ ಉನ್ನತ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಸ್ಥೆ ಬೆಳವಣಿಗೆ ಹಾದಿಯಲ್ಲಿದ್ದಾಗ 2019ರಲ್ಲಿ ಮೋದಿ ಸರಕಾರದ ಆಡಳಿತದಲ್ಲೇ ಅಲನ್ ಗ್ರುಪ್ ನ 100 ಘಟಕಗಳ ಮೇಲೆ IT ಇಲಾಖೆಯ ಮುಂಬೈ ತಂಡ ದಾಳಿ ನಡೆಸಿತು. ನಂತರ ಅಲನ್ ಸಂಸ್ಥೆಯು 2000 ಕೋಟಿ ರೂ. ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿದೆ ಎಂದು ET ವರದಿ ಮಾಡಿತ್ತು. ಇದಾದ ನಂತರ ಅಲನ್ ಗ್ರುಪ್ ಸಂಸ್ಥೆಯು 2019ರ ಜುಲೈ ಹಾಗೂ ಡಿಸೆಂಬರ್ ತಿಂಗಳಲ್ಲಿ ಒಟ್ಟು 6 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿ ಮಾಡಿತು. ಇದಲ್ಲದೆ ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಅವರನ್ನು ಭೇಟಿಯಾದ ಅಲನ್ಸನ್ ನೆರೆ ಹಾವಳಿ ಪರಿಹಾರಕ್ಕೆ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದರು ಎಂದು ಜುಬೇರ್ ವಿಶ್ಲೇಷಣೆ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ SBI ಬಹಿರಂಗಪಡಿಸಿದ ಚುನಾವಣಾ ಬಾಂಡ್ ಕುರಿತ ಮಾಹಿತಿಯಿಂದ ಬಿಜೆಪಿ ಸರಕಾರದ ಹಲವು ಹಗರಣಗಳು ಹೊರಬೀಳುತ್ತಿವೆ. ಇದರಲ್ಲಿ ಚುನಾವಣಾ ಬಾಂಡ್ ಖರೀದಿ ಪ್ರೇರಿತ ಹಲವು IT ದಾಳಿ ಪ್ರಕರಣಗಳು ಈಗ ಹೊರಬೀಳುತ್ತಿವೆ. ಮೋದಿ ಆಡಳಿತಕಾಲದ ಈ ಹಗರಣಗಳು, ಬ್ರಷ್ಟಾಚಾರಗಳು ಎಲ್ಲೆಡೆ ಟೀಕೆಗೆ ಗುರಿಯಾಗುತ್ತಿವೆ.

More articles

Latest article