ಶೋಭಾ ಕರಂದ್ಲಾಜೆಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದಾರೆ, ನನ್ನ ಮಗನಿಗೆ ಕೊಡಿಸಲು ಸಾಧ್ಯವಾಗಿಲ್ಲ : BSY ವಿರುದ್ದ ಈಶ್ವರಪ್ಪ ಕಿಡಿ

Most read

ಲೋಕಸಭೆ ಚುನಾವಣೆ 2024ಕ್ಕೆ ಕರ್ನಾಟಕ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಆದರೆ, ಹಾವೇರಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರ ಮಗ ಕಾಂತೇಶ್ ಅವರಿಗೆ ಟಿಕೆಟ್ ಮಿಸ್ ಆಗಿರುವ ಕಾರಣ ಕೋಪಗೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮನೆಗೆ ಹೋಗಿ ಮನವಿ ಮಾಡಿದಾಗ ಕಾಂತೇಶ್ ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಜೊತೆಗೆ ನಾನೇ ಓಡಾಡಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದರು. ಆದರೆ ಈತರ ರಾಜಕೀಯ ಯಾಕೆ ಮಾಡಿದರು ನನಗೆ ತಿಳಿಯುತ್ತಿಲ್ಲ ಎಂದು ಯಡಿಯೂತಪ್ಪ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.

ಮುಂದುವರೆದು, ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಹೋಗಿ ಲಾಬಿ ಮಾಡಿದ್ದಾರ? ಇಲ್ಲ, ಆದರೆ ಅವರಿಗೆ ಟಿಕೆಟ್ ಹೇಗೆ ಸಿಕ್ಕಿತು. ಶೋಭಾ, ಬೊಮ್ಮಾಯಿ ಅವರಿಗಾಗಿ ಯಡಿಯೂರಪ್ಪ ಹಠ ಮಾಡಿ ಟಿಕೆಟ್ ಕೊಡಿಸಿದ್ದಾರೆ. ಹಾಗೆಯೇ ನನ್ನ ಮಗ ಕಾಂತೇಶನ ಪರವಾಗು ಹಠ ಮಾಡಿ ಟಿಕೆಟ್ ಕೊಡಿಸಬಹುದಿತ್ತು ಅಲ್ಲವೇ ಎಂದು ಪ್ರಶ್ನಿಸಿದರು.

ಮೋಸ ಮಾಡಿರುವ ಯಡಿಯೂಪ್ಪ ಅವರ ಮಗನ ವಿರುದ್ದ ಶಿವಮೊಗ್ಗದಿಂದ ನಿಲ್ಲಲು ನನ್ನ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ನಾನು ನನ್ನ ಬೆಂಬಲಿಗರ ಮತ್ತು ಎಲ್ಲಾ ಸಮುದಾಯ ಜನರು ಮಠಾಧಿಪತಿಗಳು ಜೊತೆ ಸಭೆ ನಡೆಸಿ ನಂತರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೊ ಬೆಡವೊ ತೀರ್ಮಾನ ಮಾಡುತ್ತೇನೆ. ನಾನು ಮೋದಿ ಅವರ ಅಭಿಮಾನಿ ಆದರೆ ನನ್ನ ಜನಗಳು ನನಗೆ ಮುಖ್ಯ. ಸಭೆ ನಡೆದ ನಂತರ ತೀರ್ಮಾನ ಮಾಡುತ್ತೇನೆ.

ನನಗೆ ಟಿಕೆಟ್ ಬೇಡ ಎಂದ ಬೊಮ್ಮಾಯಿಗೆ ಟಿಕೆಟ್ ಕೊಡುತ್ತಿದ್ದಾರೆ. ಆದರೆ ನಿಂತು ಗೆಲ್ಲುವ ಸುಮಾರು ಹಾಲಿ ಸಂಸದರಿಗೆ ಅನ್ಯಾಯ ಮಾಡಿದ್ದಾರೆ. ಹಿಂದುತ್ವ ಮಾತನಾಡುವ ಹಲವು ನಾಯಕರಿಗೆ ಯಡಿಯೂರಪ್ಪ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆ ಹಲವರಲ್ಲಿ ಬಂದಿದೆ. ನನಗೆ ಈ ವಿಷಯವಾಗಿ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ಆದರೆ ಕೆಲವು ವಿಷಯದಲ್ಲಿ ನಾನು ಆಕ್ಷೇಪಣೆ ಮಾಡಿದ್ದೆ. ಅದಕ್ಕೆ ಅವರು ಇದು ನನ್ನ ವೈಯಕ್ತಿಕ ವಿಷಯ ತಲೆಯಾಕಬೇಡ ಎಂಬ ಮಾತುಗಳನ್ನು ಆಡಿದ್ದಾರೆ. ಹಾಗಾಗಿ ನಾನು ಅವರಿಂದ ಅಂತರ ಕಾಯ್ದುಕೊಂಡೆ. ಉಳಿದ ವಿಷಯವನ್ನು ನಾನು ಸಭೆ ನಂತರ ಹೇಳುತ್ತೆನೆ ಎಂದು ಹೇಳಿ ನಿರ್ಗಮಿಸಿದರು.


More articles

Latest article