ಪ್ರತಾಪ್ ಸಿಂಹ ಸೇರಿ 9 ಹಾಲಿ ಸಂಸದರಿಗಿಲ್ಲ ಲೋಕಸಭಾ ಟಿಕೆಟ್: ಎರಡನೇ ಪಟ್ಟಿ ಬಿಡುಗಡೆ ಮಾಡಿದೆ ಬಿಜೆಪಿ

Most read

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ಬಿಜೆಪಿ ಕಸರತ್ತು ನಡೆಸಿ ಕಡೆಕೂ ಟಿಕೆಟ್ ಹಂಚಿಕೆ ಮಾಡಿದೆ. ಲೋಕಸಭಾ ಚುನಾವಣೆಗೆ ಬಿಜೆಪಿಯು ಇಂದು ಎರಡನೇ ಪಟ್ಟಿ ಪ್ರಕಟಿಸಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಸೇರಿ 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ.

ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಇದರಲ್ಲಿ ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಬಿಜೆಪಿ 195 ಕ್ಷೇತ್ರಗಳಿಗೆ ಹೆಸರನ್ನು ಘೋಷಿಸಿತ್ತು.

ಯಾರಿಗೆ ಟಿಕೆಟ್ ನೀಡಲಾಗಿದೆ:-

  1. ಚಿಕ್ಕೋಡಿ – ಅಣ್ಣಸಾಹೇಬ್ ಜೊಲ್ಲೆ.
  2. ಮೈಸೂರು – ಯದುವೀರ್ ಒಡೆಯರ್
  3. ಕಲಬುರಗಿ – ಉಮೇಶ್ ಜಾಧವ್
  4. ವಿಜಯಪುರ – ರಮೇಶ್ ಜಿಗಜಿಣಗಿ
  5. ಬೀದರ್ – ಭಗವಂತ ಖೂಬಾ
  6. ಉಡುಪಿ – ಕೋಟಾ ಶ್ರೀನಿವಾಸ ಪೂಜಾರಿ
  7. ಧಾರವಾಡ – ಪ್ರಹ್ಲಾದ್ ಜೋಶಿ
  8. ತುಮಕೂರು – ವಿ.ಸೋಮಣ್ಣ
  9. ಕೊಪ್ಪಳ – ಬಸವರಾಜ್ ಕ್ಯಾವತೂರ್
  10. ಬಳ್ಳಾರಿ – ಬಿ. ಶ್ರೀರಾಮುಲು
  11. ಹಾವೇರಿ – ಬಸವರಾಜ ಬೊಮ್ಮಾಯಿ
  12. ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
  13. ದಾವಣಗೆರೆ – ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್
  14. ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
  15. ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
  16. ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
  17. ಬೆಂಗಳೂರು ಗ್ರಾಮಾಂತರ – ಡಾ. ಸಿ.ಎನ್.ಮಂಜುನಾಥ್
  18. ಚಾಮರಾಜನಗರ – ಎಸ್. ಬಾಲರಾಜ್.
  19. ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ
  20. ಶಿವಮೊಗ್ಗ – ಬಿ.ವೈ.ರಾಘವೇಂದ್ರ

ಯಾರಿಗೆ ಶಾಕ್‌?

9 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಅದರಲ್ಲಿ ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಿಂದ ಕಟೀಲ್, ಬಳ್ಳಾರಿಯಿಂದ ದೇವೇಂದ್ರಪ್ಪ, ಕೊಪ್ಪಳದಿಂದ ಕರಡಿ ಸಂಗಣ್ಣಗೆ , ಬೆಂಗಳೂರು ಉತ್ತರದ ಸಂಸದ ಸದಾನಂದಗೌಡ, ಹಾವೇರಿಯಿಂದ ಶಿವಕುಮಾರ್ ಉದಾಸಿಗೆ . ದಾವಣಗೆರೆಯಿಂದ ಸಿದ್ದೇಶ್ವರ್ , ತುಮಕೂರಿನಿಂದ ಜಿ.ಎಸ್.ಬಸವರಾಜ್ , ಚಾಮರಾಜನಗರದಿಂದ ಶ್ರೀನಿವಾಸ್ ಪ್ರಸಾದ್ ಟಿಕೆಟ್ ನೀಡಿಲ್ಲ.

More articles

Latest article