ಪ್ರಾಣಿಗಳ ಮೂಕ ವೇದನೆ : ಸಿಗುವುದೇ ಸ್ಪಂದನೆ?

ಒಂದು ಆಚರಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಒಂದು ಜೀವಿ ಭಯದಿಂದ ನಡುಗಬೇಕಾದರೆ, ನೋವು ಅನುಭವಿಸಬೇಕಾದರೆ, ತನ್ನ ಸಹಜ ಬದುಕಿನಿಂದ ದೂರವಾಗಬೇಕಾದರೆ ಅಂತಹ ಸಂಪ್ರದಾಯವನ್ನು ಉಳಿಸುವುದೇ ನಮ್ಮ ಕರ್ತವ್ಯವೇ? ಸಂಪ್ರದಾಯವನ್ನು ಉಳಿಸುವುದಕ್ಕಿಂತ ಅದರೊಳಗಿನ ಮಾನವೀಯ ಮೌಲ್ಯವನ್ನು ಉಳಿಸುವುದು ಮುಖ್ಯ – ಶೃಂಗಶ್ರೀ. ಟಿ, ಸಂಶೋಧನಾ ವಿದ್ಯಾರ್ಥಿನಿ.

ಭಾರತ ಬಹಳಷ್ಟು ಮುಂದುವರೆದಿದೆ. ಮುಂದುವರಿಯುತ್ತಲೇ ಇದೇ. ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಜೊತೆ ಸರಿಸಮಾನವಾಗಿ ಮುಂದೆ ಸಾಗುತ್ತಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ನಮ್ಮದೇ ರೀತಿಯಲ್ಲಿ ಯಶಸ್ವಿಯಾಗುತ್ತಾ ನಮ್ಮದೇ ವಿಭಿನ್ನ ಚಾಪು ಮೂಡಿಸುತ್ತಿದ್ದೇವೆ.

ಹೊಸಹೊಸ ಆವಿಷ್ಕಾರಗಳನ್ನು ನಡೆಸುತ್ತಿದ್ದೇವೆ. ಈ ಹೊತ್ತಿಗೆ ನಾವು ಮಂಗಳ ಗ್ರಹಕ್ಕೆ ಹೋಗುತ್ತಿದ್ದೇವೆ. ಚಂದ್ರನ ಅಂಗಳಕ್ಕೂ ಹೋಗುತ್ತಿದ್ದೇವೆ. ಹಾರುವ ಕಾರುಗಳನ್ನೂ ಕೂಡ ತಯಾರಿ ಮಾಡುವಂತಹ ಅಪಾರ ಪ್ರಮಾಣದ ಬುದ್ಧಿವಂತಿಕೆ ನಮ್ಮಲ್ಲಿದೆ. ಮನುಷ್ಯರಿಗಿಂತ ಬಹಳ ಜಾಣತನದಿಂದ ಕೆಲಸ ಮಾಡುವ ರೋಬೋಟ್‌ಗಳನ್ನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಳನ್ನ ಕಂಡುಹಿಡಿದು ಅವುಗಳ ಬಳಕೆಯನ್ನ ವ್ಯಾಪಕವಾಗಿ ಬಳಸುತ್ತಿದ್ದೇವೆ. ಇನ್ನು ಹೆಚ್ಚೆಚ್ಚು ಆವಿಷ್ಕಾರಗಳನ್ನು ಮಾಡುವಲ್ಲಿ ಸಂಶೋಧನೆಗಳನ್ನು ನಡೆಸುತ್ತಲೇ ಇದ್ದೇವೆ.

ಅದರೆ, ಅದೇ ಸಮಯದಲ್ಲಿ ಗೊಡ್ಡು ಸಂಪ್ರದಾಯ, ಗತಕಾಲದ ಸಂಸ್ಕೃತಿಯ, ಆಚರಣೆಗಳಿಂದ ನಾವುಗಳು ಮತ್ತಷ್ಟು ಪಾತಾಳಕ್ಕೆ ಹೋಗುತ್ತಿದ್ದೇವೆ ಎಂಬುವುದನ್ನು ಸಂಪ್ರದಾಯವಾದಿಗಳು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಕಡೆ ಮನುಷ್ಯನ ಬುದ್ಧಿಮತ್ತೆ ಬೆಳೆದಷ್ಟು ನಮ್ಮ ಕ್ರೌರ್ಯಗಳು ಅಷ್ಟೇ ಹೆಮ್ಮೆರವಾಗಿ ಬೆಳೆಯುತ್ತಿವೆ. ನಾವೇ ಇಡೀ ಜಗತ್ತಿನ ಸೃಷ್ಟಿಕರ್ತ ಅನ್ನುವ ಹಾಗೆ ಬದುಕುತ್ತಿದ್ದೇವೆ. ಪರಿಸರದ ಕಥೆಯಂತೂ ಹೇಳುವುದೇ ಬೇಡ. ಸಂಸ್ಕೃತಿ ಆಚರಣೆಗಳ ಹೆಸರಲ್ಲಿ ಮೂಕ ಪ್ರಾಣಿಗಳನ್ನು ಬಲಿ ಪಡೆದುಕೊಳ್ಳುತ್ತಲೇ ಇದ್ದೇವೆ. ಆದರೆ, ನಮ್ಮ ಸುತ್ತಮುತ್ತಲಿರುವ ಮೂಕ ಪ್ರಾಣಿಗಳ ಅಳಲು, ನೋವು, ಆತಂಕವನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ಸೋತಿದ್ದೇವೆ.  ಇದಕ್ಕೆ ಮುಖ್ಯ ಉದಾಹರಣೆ ಶಿವಮೊಗ್ಗದಲ್ಲಿ ನಡೆದ ದಸರಾ ಮಹೋತ್ಸವದ ಜಂಬೂಸವಾರಿ ಪ್ರಸಂಗ .

ಆನೆಗಳು ಪ್ರಾಣಿ ಶಾಸ್ತ್ರದ ಪ್ರಕಾರ ಸಸ್ತನಿಗಳ ವರ್ಗದಲ್ಲಿ ಪ್ರೊಬೆಸಿಡಿಯ ಉಪವರ್ಗದ ಒಂದು ಕುಟುಂಬ. ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡ ಪ್ರಾಣಿ. ಅದೇ ಸಮಯದಲ್ಲಿ ಆನೆಯೂ ಇಂದು ಅಳಿವಿನಂಚಿಗೆ ಸಾಗಿರುವ ಜೀವಿ. ಜಂಬೂ ಸವಾರಿಯಂತಹ ಮನುಷ್ಯನ ಅತಿಕ್ರಮಣ ಮತ್ತು ಅದರ ದಂತಕ್ಕಾಗಿ ನಿರಂತರವಾಗಿ ಅವುಗಳ ಹತ್ಯೆಯನ್ನು ಮಾಡುತ್ತಲೇ ಬಂದಿದ್ದೇವೆ.

ಜಗತ್ತಿನೆಲ್ಲೆಡೆ ಇಂದು ಆನೆಯನ್ನು ಸಂರಕ್ಷಿತ ಜೀವಿಯನ್ನಾಗಿ ಕಾಪಾಡಿಕೊಳ್ಳುತ್ತಿದ್ದೇವೆ. ಆನೆಗಳನ್ನ ಹಿಡಿಯುವುದು, ಪಳಗಿಸುವುದು, ದಂತ ವ್ಯಾಪಾರ ಮಾಡುವುದರ ಮೇಲೆ ಸಾಕಷ್ಟು ಕ್ರಮಗಳನ್ನು ಜರುಗಿಸಲಾಗಿದೆ. ನಿರ್ಬಂಧಗಳನ್ನೂ ಹೇರಲಾಗಿದೆ.

ಶಿವಮೊಗ್ಗ ದಸರಾದಲ್ಲಿ ರೊಚ್ಚಿಗೆದ್ದ ಆನೆ ಸೋಮಣ್ಣ

ಐದು ಕಿಲೋಗ್ರಾಂಳಷ್ಟು ತೂಕವಿರುವ ಆನೆಯ ಮೆದುಳು ನೆಲದ ಮೇಲಿನ ಯಾವುದೇ ಪ್ರಾಣಿಯ ಮೆದುಳಿಗಿಂತ ದೊಡ್ಡದು. ಬುದ್ಧಿಶಾಲಿ ಪ್ರಾಣಿ, ದುಃಖ, ಆಟ, ಸಲಕರಣೆಗಳ ಉಪಯೋಗ, ಮಮಕಾರ ಮತ್ತು ಪ್ರೀತಿಯನ್ನ ವ್ಯಕ್ತಪಡಿಸುವಲ್ಲಿ ತನ್ನ ಚಾಣಾಕ್ಷತೆಯನ್ನು ತೋರುವ ಆನೆಗಳು ಬಹಳ ಸೂಕ್ಷ್ಮ ಕೂಡ.

ಪಾರಂಪರಿಕವಾಗಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬು ಸವಾರಿಯೂ ನಾನೂರು ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ. ಇತಿಹಾಸದ ಪ್ರಕಾರ 14, 15ನೇ ಶತಮಾನದ ವಿಜಯ ನಗರ ಸಾಮ್ರಾಜ್ಯದ ನಂತರ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಹತ್ತು ದಿನಗಳ ಮೈಸೂರು ದಸರಾ ಹಾಗೂ ಜಂಬೂಸವಾರಿಯ ಸಂಪ್ರದಾಯವು ಆರಂಭವಾಯಿತು ಎಂಬ ದಾಖಲೆಗಳಿವೆ. ಆದರೆ ಆ ಹೊತ್ತಿನ ಕಾಲಘಟ್ಟವೇ ಬೇರೆ ಇವತ್ತಿನ ಕಾಲಘಟ್ಟವೇ ಬೇರೆ.

ಸಮಾಜ ಬಹಳಷ್ಟು ಮುಂದುವರೆದಿದೆ. ಜೊತೆ ಜೊತೆಗೆ ಮನುಷ್ಯನ ವಕ್ರತೆಗಳೂ ಕೂಡ. ಹಿಂದೆ ಜಂಬೂಸವಾರಿಗಾಗಿ ಆನೆಗಳನ್ನ ಬಹಳ ಜತನದಿಂದ ಪಳಗಿಸಿ ಅವುಗಳಿಗೆ ತಾಲೀಮು ಕೊಟ್ಟು ತಯಾರಿ ನಡೆಸಲಾಗುತ್ತಿತ್ತು. ಆದರೆ ಇವತ್ತಿನ ಕಾಲದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ವ್ಯವಸ್ಥೆಯ ಬೇಜವಾಬ್ದಾರಿ, ಜನರ ಕೂಗಾಟ, ಅರಚಾಟ, ಕಿರುಚಾಟ, ಬ್ಯಾಂಡ್ ಬಜಾರುಗಳ ಶಬ್ದ, ಪಟಾಕಿ ಬಿರುಸುಗಳ ಆತಂಕದಲ್ಲಿ ಶಿವಮೊಗ್ಗ ದಸರಾದ ಮೆರವಣಿಗೆಗೆ ಆಯ್ಕೆಗೊಂಡ ಸೋಮಣ್ಣ ದಿಕ್ಕಾ ಪಾಲಾಗಿ ಓಡಿ ಎಲ್ಲರಿಗೂ ಜೊತೆಗೆ ತನಗೂ ಆತಂಕ ತಂದುಕೊಂಡಿದೆ.

ಯಾವ ತಾಲೀಮು ಇಲ್ಲದೆ ಇದ್ದರೂ ಸಹ ಅವುಗಳು ಕಾಡಿಗೆ ಸೀಮಿತ ಎಂಬ ಸತ್ಯ ಮರೆಮಾಚಿ ಮುಗ್ಧ ಪ್ರಾಣಿಗಳನ್ನು ಪಳಗಿಸಿ ಮನುಷ್ಯರ ನಡುವೆ ಕೀಲಿಕೈ ಗೊಂಬೆಗಳಂತೆ ಆಟವಾಡಿಸಲು ಆನೆಗಳು ರೋಬೋಟ್ ಗಳಲ್ಲ.

ಬದಲಾಗಿ ಅತ್ಯಂತ ಸೂಕ್ಷ್ಮಜೀವಿಗಳು. ಎಷ್ಟೆಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾದರೂ ನಾವು ಮೂಕ ಪ್ರಾಣಿಗಳನ್ನು ಹಿಂಸಿಸಿ ಸಂಪ್ರದಾಯದ ಹೆಸರಲ್ಲಿ ಗೊಡ್ಡು ಪ್ರದರ್ಶನ ಮಾಡುತ್ತಿದ್ದೇವೆ. 650 ರಿಂದ 750 ಕೆಜಿ ತೂಕದ ಚಿನ್ನದ/ಬೆಳ್ಳಿ ಅಂಬಾರಿಗಳನ್ನ ಹೊರಿಸಿ ಗಂಟೆಗಟ್ಟಲೆ ಮೆರವಣಿಗೆ ಮಾಡಿಸುವುದು ಆಟದ ವಿಷಯವಲ್ಲ. ಅದರ ಜೊತೆಯಲ್ಲಿ ನೂರಾರು, ಸಾವಿರಾರು, ಲಕ್ಷಾಂತರ ಜನಸ್ತೋಮದ ನಡುವೆ ತೋಪು ಸಿಡಿಮದ್ದುಗಳ ಭರಾಟೆಯಲ್ಲಿ ಅವುಗಳ ಜೀವ ಏನಾಗಬಹುದು??!! ಕೇವಲ 36 ವರ್ಷದ ಸಕ್ರೆ ಬೈಲು ಆನೆ ಬಿಡಾರದಿಂದ ಕರೆತರಲಾಗಿರುವ ಸೋಮಣ್ಣನಿಗೆ ಇದೇ ಮೊದಲ ಜಂಬೂ ಸವಾರಿ ಅನುಭವ. ಭಾರಿ ಜನಸ್ತೋಮ, ಗದ್ದಲ ಮತ್ತು ಪಟಾಕಿಗಳ ಶಬ್ದಕ್ಕೆ ಹೆದರಿ ಓಡಿದ ರಬಸಕ್ಕೆ ಅದರ ಬೆನ್ನ ಮೇಲಿದ್ದ ಬೆಳ್ಳಿ ಅಂಬಾರಿ ಹಾಗೂ ಚಾಮುಂಡೇಶ್ವರಿ ಮೂರ್ತಿ ಕೆಳಗೆ ಬಿದ್ದು ಹಾನಿಗೊಳಗಾಗಿದೆ. ಅದನ್ನ ನಿಯಂತ್ರಿಸಲು ಮಾವುತ ಈಟಿಯಿಂದ ತಿವಿದು ತಿವಿದು.. ಸರಪಳಿಯಿಂದ ಬಂಧಿಸಲಾಗದೆ ಅರಿವಳಿಕೆ ಚುಚ್ಚುಮದ್ದುಗಳನ್ನು ನೀಡುವ ಮೂಲಕ ತಹಬಂದಿಗೆ ತರಲಾಗಿದೆ. ಮನುಷ್ಯನಿಗೆ ಮಾತುಗಳಿವೆ! ಪ್ರಾಣಿಗಳಿಗೆ ತಮ್ಮ ನೋವನ್ನು ವಿವರಿಸುವ ಭಾಷೆಯಿಲ್ಲ. ಆದರೆ ಅವುಗಳಿಗೆ ನೋವಾಗುವುದಿಲ್ಲ ಎಂದರ್ಥವಲ್ಲ. ಅವುಗಳ ಮೌನವನ್ನು ಅವುಗಳ ಒಪ್ಪಿಗೆಯೆಂದು ಭಾವಿಸುವುದೇ ನಮ್ಮ ದೊಡ್ಡ ತಪ್ಪು. ಹಾಗಾದರೆ ತಂತ್ರಜ್ಞಾನ, ಪ್ರಗತಿ ಮತ್ತು ನಾಗರೀಕತೆಯ ಅರ್ಥವಾದರೂ ಏನು? ಎಂಬ ಪ್ರಶ್ನೆಯನ್ನ ನಾವು ಕೇಳಿಕೊಳ್ಳಲೇಬೇಕು.

ಇಷ್ಟೆಲ್ಲಾ ರಂಪಾಟಗಳಾದರೂ ನಾವು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಂಬೂಸವಾರಿಗೆ ಮುನ್ನ ಆನೆಗಳಿಗೆ ಕಡ್ಡಾಯವಾಗಿ ತಾಲೀಮು ನೀಡಬೇಕಿತ್ತು ಅಂತ ಉಪದೇಶ ಕೊಡುತ್ತಿದ್ದೇವೆ.

ಎಂತ ಹಾಸ್ಯಾಸ್ಪದ ಅಲ್ಲವಾ..? ಇದರಿಂದ ಯಾವ ಬದಲಾವಣೆಗಳು ನಡೆಯುವುದಿಲ್ಲ. ಯಾವುದೇ ತರಬೇತಿಯು ಅನಿರೀಕ್ಷಿತ ಶಬ್ದಗಳಿಗೆ, ಜನಸಂದಣಿಗೆ ಅಥವಾ ಒತ್ತಡಕ್ಕೆ ಪ್ರಾಣಿ ಪ್ರತಿಕ್ರಿಯಿಸುವುದಿಲ್ಲ ಎಂಬ ಖಾತರಿಯನ್ನು ನೀಡಲಾರದು. ಆದ್ದರಿಂದ ಸುರಕ್ಷತೆಯ ಹೆಸರಿನಲ್ಲಿ ತಾಲೀಮಿನ ಅವಧಿಯನ್ನು ಹೆಚ್ಚಿಸುವುದಕ್ಕಿಂತ, ಜೀವಂತ ಆನೆಗಳನ್ನು ಜನಸಂದಣಿಯ ಮೆರವಣಿಗೆಯಲ್ಲಿ ಬಳಸುವ ಪದ್ಧತಿಗೆ ಮಾನವೀಯ ಪರ್ಯಾಯಗಳನ್ನು ರೂಪಿಸುವುದೇ ಶಾಶ್ವತ ಪರಿಹಾರ. ತಂತ್ರಜ್ಞಾನದಲ್ಲಿ ಇಷ್ಟೊಂದು ಮುಂದುವರಿದಿರುವ ನಾವು ಅಲಂಕೃತ ಯಾಂತ್ರಿಕ ಆನೆಗಳು, ಡಿಜಿಟಲ್ ಮೆರವಣಿಗೆಗಳು ಮತ್ತು ಸೃಜನಾತ್ಮಕ ಕಲಾ ಪ್ರದರ್ಶನಗಳ ಮೂಲಕವೂ ಪರಂಪರೆಯನ್ನು ವೈಭವದಿಂದ ಆಚರಿಸಬಹುದು. ಇಲ್ಲದಿದ್ದರೆ ದಸರಾ ಮೆರವಣಿಗೆಗೆ ಮತ್ತಷ್ಟು ಮೂಕ ಪ್ರಾಣಿಗಳು ಬಲಿಯಾಗುತ್ತಲೇ ಹೋಗುತ್ತವೆ. ಎಲ್ಲಾ ರೀತಿಯಲ್ಲೂ ಹೊಸತು ಬಯಸುವ ನಾವು ಸಂಪೂರ್ಣ ನಿಸರ್ಗಕ್ಕೆ ಸೀಮಿತವಾದ ಮೂಕ ಪ್ರಾಣಿಗಳನ್ನು ಅಳಿವಿನಂಚಿಗೆ ತಳ್ಳುತ್ತಿದ್ದೇವೆ ಎಂಬ ಮನುಷ್ಯತ್ವವು ನಮ್ಮಲ್ಲಿ ಉಳಿದಿಲ್ಲ.

ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (ಐ ಯು ಸಿ ಎನ್) ರೆಡ್ ಲಿಸ್ಟ್ ನ ಪ್ರಕಾರ ಏಷ್ಯನ್ ಆನೆಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಘೋಷಿಸಲಾಗಿದೆ. ಕೃಷಿ, ಅರಣ್ಯ ನಾಶ, ಮಾನವನ ದುರಾಸೆಗಳಿಗಾಗಿ ಅವುಗಳನ್ನ ಅಳಿವಿನಂಚಿಗೆ ತಳ್ಳಿಯಾಗಿದೆ. ಇನ್ನೂ ಅಳಿದು ಅಳಿದುಳಿದಿರುವ ಮೂಕ ಮುಗ್ಧ ಪ್ರಾಣಿಗಳನ್ನ ರಕ್ಷಿಸಿಕೊಳ್ಳುವುದು ನಮ್ಮ ಅತ್ಯಂತ ಮಹತ್ವಯುತವಾದ ಜವಾಬ್ದಾರಿ. ನಮ್ಮ ಶೋಕಿಗಳಿಗೆ, ಸಂಪ್ರದಾಯಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಮಹೋತ್ಸವಗಳನ್ನ ಮಾಡಬೇಕು. ಜಂಬು ಸವಾರಿಗಳನ್ನ ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ, ಯಾವುದೇ ರೀತಿಯ ಪ್ರಾಣಿಗಳನ್ನು ಸರಪಳಿಗಳನ್ನು ಹಾಕಿ ಬಂಧಿಸಿ ಪಳಗಿಸುವುದನ್ನ ನಿಲ್ಲಿಸಬೇಕು.

ಸಂಪ್ರದಾಯವೆನ್ನುವುದು ಸಮಾಜದ ಸಾಂಸ್ಕೃತಿಕ ಗುರುತಾಗಿರಬಹುದು. ಆದರೆ ಅದು ಬದಲಾಗದ ಶಾಸನವಲ್ಲ. ಕಾಲಕ್ಕೆ ತಕ್ಕಂತೆ ಮನುಷ್ಯನ ಜೀವನ ಶೈಲಿ, ಆಲೋಚನೆಗಳು ಮತ್ತು ಮೌಲ್ಯಗಳು ಬದಲಾಗುವಾಗ ಸಂಪ್ರದಾಯಗಳೂ ಮಾನವೀಯತೆಯ ಪರೀಕ್ಷೆಗೆ ಒಳಗಾಗಬೇಕು. ಒಂದು ಆಚರಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಒಂದು ಜೀವಿ ಭಯದಿಂದ ನಡುಗಬೇಕಾದರೆ, ನೋವು ಅನುಭವಿಸಬೇಕಾದರೆ, ತನ್ನ ಸಹಜ ಬದುಕಿನಿಂದ ದೂರವಾಗಬೇಕಾದರೆ ಅಂತಹ ಸಂಪ್ರದಾಯವನ್ನು ಉಳಿಸುವುದೇ ನಮ್ಮ ಕರ್ತವ್ಯವೇ? ಸಂಪ್ರದಾಯವನ್ನು ಉಳಿಸುವುದಕ್ಕಿಂತ ಅದರೊಳಗಿನ ಮಾನವೀಯ ಮೌಲ್ಯವನ್ನು ಉಳಿಸುವುದು ಮುಖ್ಯ. ಜೀವಕ್ಕೆ ನೋವುಂಟುಮಾಡುವ ಆಚರಣೆಗಿಂತ ಜೀವವನ್ನು ಗೌರವಿಸುವ ಹೊಸ ಸಂಪ್ರದಾಯವೇ ನಾಗರಿಕ ಸಮಾಜದ ನಿಜವಾದ ಹೆಗ್ಗುರುತು.

ಮೂಕ ಪ್ರಾಣಿಗಳ ರೋದನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರತಿಯೊಬ್ಬರು ನಿರ್ಣಯವನ್ನು ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ, ಮುಂದೊಂದು ದಿನ ಈ ಪ್ರಪಂಚದಲ್ಲಿ ಯಾವ ಪ್ರಾಣಿಗಳೂ ಇರುವುದಿಲ್ಲ..ನಾವು ಕೂಡ.

ಶೃಂಗಶ್ರೀ. ಟಿ

ಸಂಶೋಧನಾ ವಿದ್ಯಾರ್ಥಿನಿ

ಇದನ್ನೂ ಓದಿ- ಪ್ರತಿಭಟನೆ ಹತ್ತಿಕ್ಕುವಿಕೆ: ಪ್ರಜಾಪ್ರಭುತ್ವಕ್ಕೆ ಕುತ್ತು

More articles

Latest article

Most read