ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕೋಚ್‌ ಆಗಿ ಸೌರವ್‌ ಗಂಗೂಲಿ ಆಯ್ಕೆ

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಹರಾಜಿಗೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೌರವ್ ಗಂಗೂಲಿ ಅವರನ್ನು ತಮ್ಮ ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಿಸಿದೆ.    ಗಂಗೂಲಿ ಅವರು ಹೇಮಾಂಗ್ ಬದಾನಿ ಅವರ ಸ್ಥಾನವನ್ನು ತುಂಬಲಿದ್ದಾರೆ.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಈ ಹಿಂದೆ ಸಲಹೆಗಾರರಾಗಿ ಹಾಗೂ ನಂತರ ಪುರುಷ ಮತ್ತು ಮಹಿಳಾ ತಂಡಗಳ ‘ಕ್ರಿಕೆಟ್ ನಿರ್ದೇಶಕ’ರಾಗಿ‌ ಕಾರ್ಯನಿರ್ವಹಿಸುವ ಮೂಲಕ ದೀರ್ಘಕಾಲದಿಂದ ಈ ತಂಡದೊಂದಿಗೆ ಗುರುತಿಸಿಕೊಂಡಿದ್ದಾರೆ.

ಹೊಸ ಜವಾಬ್ದಾರಿಯನ್ನು ಸ್ವೀಕರಿಸುವ ಕುರಿತು ಗಂಗೂಲಿ ಮಾತನಾಡಿದ್ದು, ತಂಡದ ತರಬೇತುದಾರರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ  ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಮುಖ್ಯ ತರಬೇತುದಾರನ ಪಾತ್ರವನ್ನು ವಹಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ನನ್ನ ಹೃದಯಕ್ಕೆ ಹತ್ತಿರವಾದ ತಂಡ ಮತ್ತು ಕಳೆದ ಹಲವು ವರ್ಷಗಳಿಂದ ನಾನು ಇದರೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿದ್ದೇನೆ. ತಂಡದ ಮಾಲೀಕರು, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಮತ್ತು ಆಟಗಾರರೊಂದಿಗೆ ನಾನು ನಿಕಟವಾಗಿ ಕೆಲಸ ಮಾಡಿದ್ದೇನೆ, ಹೀಗಾಗಿ ಇದೊಂದು ರೋಚಕ ಜವಾಬ್ದಾರಿಯಾಗಿದೆ  ಎಂದು ಹೇಳಿದ್ದಾರೆ.

ನಮ್ಮಲ್ಲಿ ಪ್ರತಿಭಾವಂತ ಆಟಗಾರರ ಗುಂಪು ಇದೆ ಮತ್ತು ಇತ್ತೀಚಿನ ದಿನಗಳಲ್ಲಿ ನಾವು ಉತ್ತಮ ಮಟ್ಟದ ಕ್ರಿಕೆಟ್ ಆಡಿದ್ದೇವೆ. ತಂಡದೊಂದಿಗೆ ಕೆಲಸ ಮಾಡಲು, ಹೊಸ ಋತುವನ್ನು ಎದುರಿಸಲು ಹಾಗೂ ಬಲವಾದ ಮತ್ತು ನಿರ್ಭೀತ ತಂಡವನ್ನು ರೂಪಿಸಲು ನಾನು ಉತ್ಸುಕನಾಗಿದ್ದೇನೆ  ಎಂದು   ತಿಳಿಸಿದ್ದಾರೆ.

ಇನ್ನೂ ಪ್ರಶಸ್ತಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದರ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಡುವ ಸವಾಲಿನ ಕೆಲಸ ಗಂಗೂಲಿ ಅವರ ಮುಂದಿದೆ. ಪಂಜಾಬ್ ಕಿಂಗ್ಸ್ ಹೊರತುಪಡಿಸಿದರೆ, ಇನ್ನೂ ತಮ್ಮ ಮೊದಲ ಪ್ರಶಸ್ತಿಯನ್ನು ಗೆಲ್ಲದ ಏಕೈಕ ತಂಡ ಡೆಲ್ಲಿ ಕ್ಯಾಪಿಟಲ್ಸ್ ಆಗಿದೆ.
2020ರಲ್ಲಿ ಫೈನಲ್ ತಲುಪುವ ಮೂಲಕ ಡೆಲ್ಲಿ ಪ್ರಶಸ್ತಿ ಗೆಲ್ಲುವ ಹಂತಕ್ಕೆ ಅತ್ಯಂತ ಹತ್ತಿರವಾಗಿತ್ತು. 2021ರ ಋತುವಿನ ನಂತರ ತಂಡವು ಪ್ಲೇಆಫ್‌ಗೆ ಪ್ರವೇಶಿಸಿಲ್ಲ ಮತ್ತು ಕಳೆದ ವರ್ಷ ಆರನೇ ಸ್ಥಾನದಲ್ಲಿತ್ತು.
ಕಳೆದ ವರ್ಷ ತಂಡವು ಏಳು ಪಂದ್ಯಗಳಲ್ಲಿ ಗೆಲುವು ಮತ್ತು ಏಳು ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು ಹಾಗೂ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು.

More articles

Latest article

Most read