ಬೀಗರೂಟ ಮಾಡಿದವರಿಗೆ 1ಲಕ್ಷ ದಂಡ ವಿಧಿಸಲು ನಿರ್ಧರಿಸಿದ ಶಿಕಾರಿಪುರದ ಹರಗಿ ಗ್ರಾಮಸ್ಥರು

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಮದುವೆ ಆಡಂಬರವಾಗಿದೆ. ಬೀಗರೂಟವೂ ಕೂಡ ಅಷ್ಟೇ ಪ್ರತಿಷ್ಠೆಯಾಗಿದೆ. ಮದುವೆಗೆ ಹೋಗದಿದ್ದರೂ ಬೀಗರ ಊಟಕ್ಕೆ ಮಾತ್ರ ತಪ್ಪದೇ ಹೋಗುವುದು ಸಾಮಾನ್ಯವಾಗಿದೆ. ಅದರಲ್ಲೂ ಕರೆಯದಿದ್ದರೂ ಅಕ್ಕ-ಪಕ್ಕದ ಮನೆಯವರ ಜೊತೆ ಊರಿಂದ ಊರಿಗೆ ಹೋಗುವುದು ಹೆಚ್ಚಾಗುತ್ತಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದಲ್ಲಿ ಇಂದು ಬೀಗರೂಟಕ್ಕೆ ಹೋಗುವ ವಿಚಾರದಲ್ಲಿ ಹೊಸ ಬದಲಾವಣೆಯ ತೀರ್ಮಾನ ಕೈಗೊಂಡಿರುವುದು ಎಲ್ಲರಿಗೂ ಮಾರಿಯಾಗಿದೆ.

ಮದುವೆ ಸಮಾರಂಬದಲ್ಲಿ ಮಾಡುವ ಬೀಗರ ಊಟ ಪದ್ದತಿಯನ್ನು ರದ್ದು ಮಾಡಬೇಕು ಮತ್ತು ಬೀಗರ ಊಟ ಮಾಡಿದವರಿಗೆ 1 ಲಕ್ಷ ದಂಡ ಮತ್ತು ಬೀಗರ ಊಟಕ್ಕೆ ಸಂಬಂದಿಕರನ್ನು ಹೊರತುಪಡಿಸಿ ಬೇರೆ ಕಡೆ ಬೀಗರ ಊಟಕ್ಕೆ ಹೋದವರಿಗೆ 50,000 ದಂಡ ಎಂದು ತೀರ್ಮಾನಿಸಲಾಗಿದೆ.

ಇದು ನಿಜ. ಮದುವೆಗೆ ಖರ್ಚು ಮಾಡಿದಷ್ಟು ಇತ್ತೀಚಿನ ದಿನಗಳಲ್ಲಿ ಬೀಗರ ಊಟಕ್ಕೂ ಖರ್ಚು ಮಾಡಲಾಗುತ್ತಿದೆ. ಇದರಿಂದ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಅದರಲ್ಲೂ ರೈತರೂ ತಮ್ಮ ಮಕ್ಕಳ ಮದುವೆಗೆ ತಾವು ದುಡಿದ ದುಡ್ಡನ್ನೆಲ್ಲಾ ಖರ್ಚು ಮಾಡಿ, ಮತ್ತೆ ಸಾಲ ಕೂಡ ಮಾಡುತ್ತಿದ್ದಾರೆ. ಅದರಲ್ಲೂ ಬೀಗರೂಟದಲ್ಲಿ ನಾನ್‌ವೆಜ್‌ ಮಾಡಿಸಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ. ಇದರಿಂದ ಆರ್ಥಿಕ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಸಂದರ್ಭವನ್ನು ತಪ್ಪಿಸುವ ಸಲುವಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ.

ಗ್ರಾಮದ ಜನರೆಲ್ಲಾ ಸೇರಿ ಬೀಗರೂಟ ಪದ್ಧತಿಯನ್ನು ಕೈಬಿಡಲು ಸಾಮೂಹಿವಾಗಿ ಒಪ್ಪಿಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಬೀಗರೂಟ ಮಾಡದಂತೆ, ಮತ್ತೊಂದು ಹಳ್ಳಿಗೆ ಹೋಗದಂತೆ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

More articles

Latest article

Most read