ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಮಾಡಲ್ಲ: ಸಿಎಂ ಕಚೇರಿ ಸ್ಪಷ್ಟನೆ

ಬೆಂಗಳೂರು ಅ.1: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜನೆ ವಿಚಾರ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಕಚೇರಿ ಸ್ಪಷ್ಟನೆ ನೀಡಿದೆ. ರಾಜ್ಯ ಸರ್ಕಾರ ಇಂತಹ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಸಿಎಂ ಕಚೇರಿ ತಿಳಿಸಿದೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ನಡೆಸಲಾಗುತ್ತದೆ ಎಂಬ ರೀತಿಯಲ್ಲಿ ಬಿಂಬಿಸಿರುವುದು ಸಂಪೂರ್ಣ ಸುಳ್ಳು ಎಂದು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟಪಡಿಸಿದೆ. ವಿಧಾನಸೌಧದಲ್ಲಿ ಈ ರೀತಿಯ ಕಾರ್ಯಕ್ರಮಗಳಿಗೆ ಯಾವುದೇ ಆಸ್ಪದ ಇರುವುದಿಲ್ಲ ಎಂದೂ ತಿಳಿಸಿದೆ.

ಸಚಿವರ ಹೇಳಿಕೆಯಿಂದ ಆರಂಭವಾಗಿದ್ದ ಚರ್ಚೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸುವುದಾಗಿ ಹೇಳಿದ್ದರು. ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದರು. ಕಾರ್ಯಕ್ರಮದಲ್ಲಿ ಪುಸ್ತಕ ಮೇಳ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಹಾಗೂ ಮುಶಾಯಿರಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವಿದೆ ಎಂದು ಹೇಳಿದ್ದರು.

ಸಚಿವರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ವಿಧಾನಸೌಧದಂತಹ ರಾಜ್ಯದ ಆಡಳಿತ ಕೇಂದ್ರದ ಮೆಟ್ಟಿಲುಗಳ ಮೇಲೆ ನಿರ್ದಿಷ್ಟ ಭಾಷೆಯ ಹಬ್ಬ ಆಯೋಜಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಯಿತು.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ

ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಉರ್ದು ಭಾಷೆ ಅಥವಾ ಅದರ ಸಾಹಿತ್ಯ-ಸಂಸ್ಕೃತಿಯ ಬಗ್ಗೆ ವಿರೋಧವಿಲ್ಲ ಎಂದು ಹೇಳುತ್ತಲೇ, ಕಾರ್ಯಕ್ರಮಕ್ಕೆ ವಿಧಾನಸೌಧದ ಮೆಟ್ಟಿಲುಗಳನ್ನೇ ಆಯ್ಕೆ ಮಾಡಿರುವುದರ ಕುರಿತು ಪ್ರಶ್ನೆ ಎತ್ತಿದ್ದರು.

ವಿಧಾನಸೌಧ ಕನ್ನಡಿಗರ ಅನನ್ಯತೆಯ ಸಂಕೇತವಾಗಿದ್ದು, ನಿರ್ದಿಷ್ಟ ಸಮುದಾಯವನ್ನು ಓಲೈಸಲು ಅದನ್ನು ಬಳಸಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಆರೋಪಿಸಿದ್ದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇದೇ ರೀತಿಯ ವೈಭವದ ವೇದಿಕೆ ಎಷ್ಟು ಬಾರಿ ದೊರೆತಿದೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು.

ಸರ್ಕಾರ ನಿಜವಾಗಿಯೂ ಒಂದೇ ರೀತಿಯ ಭಾಷಾ ನೀತಿ ಹೊಂದಿದ್ದರೆ, ಕರ್ನಾಟಕದಲ್ಲಿರುವ ಇತರ ಭಾಷೆಗಳಿಗೂ ಇದೇ ರೀತಿಯ ಅವಕಾಶ ನೀಡಲಾಗುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದರು.

ಕನ್ನಡಪರ ಸಂಘಟನೆಗಳಿಂದಲೂ ವಿರೋಧ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸುವ ಪ್ರಸ್ತಾವನೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರೂ ವಿರೋಧ ವ್ಯಕ್ತಪಡಿಸಿದ್ದರು,

ಮಾಧ್ಯಮ ವರದಿಗಳಲ್ಲಿ ಉರ್ದು ಹಬ್ಬ ಆಯೋಜಿಸುವ ಪ್ರಸ್ತಾವನೆ ಕುರಿತು ತಿಳಿದುಕೊಂಡಿರುವುದಾಗಿ ಹೇಳಿರುವ ಅವರು, ವಿಧಾನಸೌಧದಂತಹ ರಾಜ್ಯದ ಆಡಳಿತದ ಪ್ರಮುಖ ಸ್ಥಳದಲ್ಲಿ ಉರ್ದು ಹಬ್ಬ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಉರ್ದು ಹಬ್ಬ ನಡೆಸಲು ಹಲವು ವೇದಿಕೆಗಳಿವೆ; ವಿಧಾನಸೌಧದ ಮೆಟ್ಟಿಲುಗಳನ್ನೇ ಆಯ್ದುಕೊಂಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದರು.

More articles

Latest article

Most read