ಜನ ಬೀದಿಗಿಳಿಯದಿದ್ದರೇ ಏನು ಮಾಡಲು ಸಾಧ್ಯವಿಲ್ಲ, SIR ಬಗ್ಗೆ ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಲಿ : ಪ್ರಕಾಶ್ ರಾಜ್

ಮೈಸೂರು, ಸೆ. 30 : ಸದನದಲ್ಲಿ ಎಸ್ ಐಆರ್ ಬಗ್ಗೆ ಪ್ರಧಾನಿ ಮೋದಿ ಅವರು  ಕರ್ನಾಟಕದಲ್ಲಿ ವಿಶೇಷ ಸಂಸತ್‌ ಅಧಿವೇಶನ ಕರೆದು ಸಮಗ್ರ ಚರ್ಚೆ ನಡೆಸಲಿ ಎಂದು ನಟ ಪ್ರಕಾಶ್‌ ರಾಜ್‌ ಆಗ್ರಹಿಸಿದ್ದಾರೆ.

ಎಸ್ ಐಆರ್ ಕುರಿತಂತೆ ಮೈಸೂರಿನಲ್ಲಿ  ನಡೆದ  ಸಂವಾದದಲ್ಲಿ ಮಾತನಾಡಿದ ಅವರು, ಎಸ್ ಐಆರ್ ಲೋಪದೋಷಗಳನ್ನ ಪತ್ತೆ ಮಾಡಲು ರಾಜ್ಯ ಸರ್ಕಾರ ಸಮಗ್ರವಾಗಿ ಎಲ್ಲಾ ಬೂತ್ ಗಳಲ್ಲೂ ಸೋಶಿಯಲ್ ಆಡಿಟ್ ನಡೆಸಬೇಕು ಎಂದು ಒತ್ತಾಯಿಸಿದರು.

 ಈಗಾಗಲೇ ನಾವು ಕೆಲವು ಸಂಘಟನೆ ಗಳ ಜೊತೆ ಸೇರಿ 100 ಬೂತ್ ಗಳಲ್ಲಿ ಪರಿಶೀಲನೆ ಮಾಡಿ ಎಸ್ ಐಆರ್ ಲೋಪಗಳ 60 ಸಾಕ್ಷಿಗಳನ್ನು ಪತ್ತೆ ಮಾಡಿದ್ದೇವೆ.ರಾಜ್ಯದ ಎಲ್ಲಾ ಬೂತ್ ಗಳ ಸೋಶಿಯಲ್ ಆಡಿಟ್ ಮಾಡಿದರೆ ಇರುವ ಎಲ್ಲಾ ದೋಷಗಳನ್ನ ಪತ್ತೆ ಹಚ್ಚಬಹುದು. ಎಂದು ಹೇಳಿದರು.

ಜನರು ಎಲ್ಲಿಯವರೆಗೂ ಬೀದಿಗಿಳಿಯುದಿಲ್ಲವೋ ಅಲ್ಲಿತನಕ ಇವರನ್ನ ಯಾರು ಏನು ಮಾಡಲು ಸಾಧ್ಯವಿಲ್ಲ.ಭಾರತದ್ಯಂತ ಸಿಜೆಪಿಗಿಂತ ದೊಡ್ಡ ಮಟ್ಟದ ಹೋರಾಟವಾಗಬೇಕು. 2023ರ ನಂತರ ಚುನಾವಣಾ ಆಯೋಗ ಮಾಡಿದ ನಿರ್ಧಾರಗಳ ಎಲ್ಲಾ ದಾಖಲೆಗಳನ್ನು ಸುಪ್ರೀಂ ಕೋರ್ಟ್ ವಶಕ್ಕೆ ಪಡೆಯಬೇಕು ಎಂದರು.

 ಇಲ್ಲದಿದ್ದರೆ ಆ ದಾಖಲೆಗಳನ್ನು ಬೆಂಕಿಯಲ್ಲಿ ನಾಶ ಮಾಡಲಿದ್ದಾರೆ. ಇದು ಕೇವಲ ಮತಗಳ್ಳತನವಲ್ಲ ಬದಲಿಗೆ ಬಾಬಾ ಸಾಹೇಬರ ಸಂವಿಧಾನ ಕೊಳ್ಳುವ ಪ್ರಯತ್ನವಾಗಿದೆ. ಕೊಲೆಗಾರ ಜ್ಞಾನೇಶ್ ಕುಮಾರ್ ಎಂದು ಗೊತ್ತಾಗಿದೆ ಎಂದು ಕಟುವಾಗಿ ಟೀಕಿಸಿದರು.

ಇದನ್ನು ಮಾಡಲು ಹೇಳಿದವರು ರಂಗ-ಬಿಲ್ಲ (ಮೋದಿ ಮತ್ತು ಅಮಿತ್ ಶಾ ). ಇವರಿಬ್ಬರು ದೇಶದ್ರೋಹಿಗಳು. ಅಷ್ಟು ಸುಲಭವಾಗಿ ನೆಮ್ಮದಿಯಾಗಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ  ಎಂದು ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.

More articles

Latest article

Most read